ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ರಾಜಧಾನಿ ಲಕ್ಷ್ಮಣಪುರಿಯಲ್ಲಿ ರಫಿಕ ಸಿದ್ಧಿಕಿ ಹೆಸರಿನ ಮುಸಲ್ಮಾನನಿಂದ ಬೇಸತ್ತ ಓರ್ವ ಹಿಂದೂ ಯುವತಿಯು ಆತ್ಮಹತ್ಯೆ ಮಾಡಿಕೊಂಡಳು. `ಮುಸಲ್ಮಾನ ಯುವಕ ಅವಳಿಗೆ ಮತಾಂತರವಾಗಿ ವಿವಾಹ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದನು. ಹಾಗೆ ಮಾಡದಿದ್ದರೆ ಅವಳನ್ನು ಮನೆಯಿಂದ ಎತ್ತಿಕೊಂಡು ಹೋಗುವ ಬೆದರಿಕೆಯನ್ನು ಕೊಡುತ್ತಿದ್ದನು’, ಎಂದು ಮೃತ ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ. ಮೃತ ಯುವತಿಯ ತಂದೆ ಸಂತರಾಮ ಶರ್ಮಾ ಪೊಲೀಸರಲ್ಲಿ ದಾಖಲಿಸಿರುವ ದೂರಿನ ಆಧಾರದಲ್ಲಿ ಪೊಲೀಸರು ರಫಿಕನನ್ನು ವಶಕ್ಕೆ ಪಡೆದಿದ್ದಾರೆ.
‘निकाह कर वरना घर से उठा लूँगा’: हिंदू लड़की ने लगाई फाँसी, पीड़ित पिता का दावा- रफीक दे रहा था मुस्लिम बनाने की धमकी#UttarPradesh https://t.co/RFtd86jG6e
— ऑपइंडिया (@OpIndia_in) January 11, 2023
1. ಮೃತ ಯುವತಿಯ ತಂದೆಯು, `ರಫಿಕ ಪದೇ ಪದೆ ಬೆದರಿಕೆಯಿಂದ ಬೇಸತ್ತು ನನ್ನ ಮಗಳು ಜನೇವರಿ 8, 2023 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು’, ಎಂದು ದೂರಿನಲ್ಲಿ ಹೇಳಿದ್ದಾರೆ.
2. ಮೃತ ಯುವತಿಯ ಪೋಷಕರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಶರ್ಮಾ ಇವರು ಈ ವಿಡಿಯೋದಲ್ಲಿ, `ರಫಿಕ ಸಿದ್ಧಿಕಿ ನನ್ನ ಮಗಳಿಗೆ ಮತಾಂತರಗೊಳ್ಳಲು ಮತ್ತು ಬುರಖಾ ಧರಿಸಲು ಬೆದರಿಕೆ ನೀಡುತ್ತಿದ್ದನು’, ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಹಿಂದುತ್ವನಿಷ್ಠ ಸರಕಾರ ಅಧಿಕಾರದಲ್ಲಿದ್ದರೂ ಮತಾಂಧನ ಉದ್ಧಟತನದಿಂದ ಹಿಂದೂ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರವೃತ್ತಳಾಗುವುದು ಖೇದಕರ ವಿಷಯವಾಗಿದೆ ! ಅವರಿಗೆ ಸರಿಯಾದ ಪಾಠ ಕಲಿಸಲು ಸರಕಾರ ಕಠಿಣ ಉಪಾಯ ಯೋಜನೆಯನ್ನು ಕೈಕೊಳ್ಳುವ ಆವಶ್ಯಕತೆಯಿದೆ ! |