ಮತಾಂಧನು ತಾನು ಹಿಂದೂ ಎಂದು ಹೇಳಿ ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಬಲಾತ್ಕಾರ !

ಫೇಸ್ ಬುಕ್ ನಿಂದ ಸ್ನೇಹ ಬೆಳೆಸಿ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಫಿರೋಜಾಬಾದ್ ನ ಮೊಯಿನ್ ಖಾನ್ ಇವನು `ಅಂಶ’ ಎಂದು ಹೆಸರು ಹೇಳಿ ಫೇಸ್ ಬುಕ್ ಮೂಲಕ ಓರ್ವ ೧೬ ವರ್ಷದ ಹಿಂದೂ ಹುಡುಗಿಯ ಜೊತೆ ಸ್ನೇಹ ಬೆಳೆಸಿದನು. ಅದರ ನಂತರ ಆಕೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು. ಜನವರಿ ೧ ರಂದು ಮೋಯಿನ್ ಇವನು ಆಕೆಯನ್ನು ಭೇಟಿಗಾಗಿ ಕರೆದನು ಮತ್ತು ನಂತರ ಆಕೆಯನ್ನು ಅಪಹರಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು.

೧. ಹುಡುಗಿ ಬಹಳ ಸಮಯ ಕಳೆದರೂ ಮನೆಗೆ ಹಿಂತಿರುಗಿ ಬರಲಿಲ್ಲವೆಂದು ಕುಟುಂಬದವರು ಹುಡುಗಿಯನ್ನು ಹುಡುಕಲು ಆರಂಭಿಸಿದರು. ಆದರೆ ಆಕೆ ಎಲ್ಲೂ ಸಿಗದಿದ್ದರಿಂದ ಕುಟುಂಬದವರು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದರು. ಆ ಸಮಯದಲ್ಲಿ ಅವರು `ಅಂಶ’ ಎಂಬ ಯುವಕನ ಮೇಲೆ ಸಂದೇಹ ಇರುವ ಬಗ್ಗೆ ಪೊಲೀಸರಿಗೆ ಹೇಳಿದರು.

೨. ಪೊಲೀಸ ವಿಚಾರಣೆಯ ಸಮಯದಲ್ಲಿ `ಅಂಶ’ ಇವನು ಮೋಯಿನ್ ಖಾನ್ ಆಗಿದ್ದಾನೆ ಎಂದು ತಿಳಿದು ಬಂದಿತು. ಅವನ ಸಂಚಾರವಾಣಿಯ ಸಂಖ್ಯೆಯ ಸಹಾಯದಿಂದ ಪೊಲೀಸರು ಅವನನ್ನು ಹುಡುಕಿದರು ಮತ್ತು ಬಂಧಿಸಿದರು. ಆ ಸಮಯದಲ್ಲಿ ಅವನು ಬಲಾತ್ಕಾರ ಮಾಡಿರುವುದು ಒಪ್ಪಿಕೊಂಡನು.

೩. ಈ ಪ್ರಕರಣದಲ್ಲಿ ಪೊಲೀಸ ಅಧಿಕಾರಿ ಸರ್ವೇಶ ಮಿಶ್ರ ಇವರು, `ಸಾಮಾಜಿಕ ಜಾಲತಾಣದಲ್ಲಿ ಅನೇಕರು ತಮ್ಮ ಪರಿಚಯ ಮುಚ್ಚಿಟ್ಟು ಸ್ನೇಹ ಮಾಡುತ್ತಾರೆ ಎಂದು ಬೆಳಕಿಗೆ ಬಂದಿದೆ. ಆದ್ದರಿಂದ ಯುವಕರು ಯಾರ ಜೊತೆಗೆ ಸ್ನೇಹ ಮಾಡುವ ಮೊದಲು ಸಂಬಂಧ ಪಟ್ಟ ವ್ಯಕ್ತಿಯ ಪರಿಚಯ ಮಾಡಿಕೊಂಡು ನಂತರ ಸ್ನೇಹ ಮಾಡಲು’ ಕರೆ ನೀಡಿದರು.

ಸಂಪಾದಕೀಯ ನಿಲುಚು

ಸಾಮಾಜಿಕ ಜಾಲತಾಣದಿಂದ ಈ ರೀತಿಯ ಸ್ನೇಹ ಮಾಡಿದ್ದರಿಂದ ಮುಂದೆ ಜೀವನ ನರಕವಾಗಿರುವ ಅನೇಕ ಘಟನೆಗಳು ಬಹಿರಂಗವಾಗಿವೆ, ಹೀಗಿರುವಾಗ ಹಿಂದೂ ಹುಡುಗಿಯರು ಇದರಿಂದ ಪಾಠ ಕಲಿತ ದಿನವೇ ಸುದಿನ !