ಉತ್ತರಪ್ರದೇಶದ ಭಾಜಪ ಶಾಸಕ ನಂದಕಿಶೋರ ಗುರ್ಜರ ಇವರಿಂದ ಜನರಿಗೆ ಕರೆ
ಗಾಝಿಯಾಬಾದ (ಉತ್ತರಪ್ರದೇಶ) – ದರೋಡೆಕೋರ ಮನೆಯಲ್ಲಿ ನುಸುಳಿದಾಗ, ಹೆದರಬಾರದು. ನೀವು ಅವನನ್ನು ಕೊಲ್ಲಲು ಸಕ್ಷಮರಾಗಿಲ್ಲದಿದ್ದರೆ, ನನ್ನನ್ನು ಕರೆಯಿರಿ. ನಾನು ಸ್ವತಃ ಹತ್ಯೆ ಮಾಡುತ್ತೇನೆ ಎಂದು ಇಲ್ಲಿಯ ಲೋಣಿ ಚುನಾವಣಾ ಕ್ಷೇತ್ರದ ಭಾಜಪ ಶಾಸಕ ನಂದಕಿಶೋರ ಗುರ್ಜರ ಇವರು ಜನರಿಗೆ ಕರೆ ನೀಡುವಾಗ ಹೇಳಿದ್ದಾರೆ.
घर में फर्जी आदमी घुसे तो वहीं मार डालो: UP के BJP विधायक बोले- न कर पाओ तो बुला लेना, मैं हत्या करूंगाhttps://t.co/JKGQpkbO8v#Uttarradesh #BJP #MLA pic.twitter.com/LricPIfaIs
— Dainik Bhaskar (@DainikBhaskar) January 9, 2023
ಇಲ್ಲಿಯ ನಾಗರಿಕರು ಮಾತನಾಡುತ್ತಾ, `ಇಲ್ಲಿಯ ಒಂದು ಗುಂಪು ವಿದ್ಯುತ್ ಅಧಿಕಾರಿಯಾಗಿದ್ದೇವೆಂದು ಹೇಳುತ್ತಾ ವಿದ್ಯುತ್ ಮೀಟರ ಪರಿಶೀಲನೆ ಮಾಡಲು ಹಣ ಕೇಳುತ್ತಿದ್ದರು. ಹಾಗೂ ಹಣ ಕೊಡದೇ ಇದ್ದರೆ, ವಿದ್ಯುತ ಪೂರೈಕೆ ಸ್ಥಗಿತಗೊಳಿಸಿ ಪ್ರಕರಣವನ್ನು ದಾಖಲಿಸಿ ಬೆದರಿಕೆಯನ್ನು ಹಾಕುತ್ತಿದ್ದರು’, ಸ್ಥಳೀಯರು ಈ ಮಾಹಿತಿಯನ್ನು ನೀಡಿದ ಬಳಿಕ ಶಾಸಕ ನಂದಕಿಶೋರ ಗುರ್ಜರ ಘಟನೆಯ ಸ್ಥಳವನ್ನು ತಲುಪುವುದರೊಳಗೆ ಈ ಗುಂಪು ಓಡಿ ಹೋಗಿತ್ತು. ಗುರ್ಜರ ಇವರು ಈ ಸಂದರ್ಭದಲ್ಲಿ ವಿದ್ಯುತ್ ವಿಭಾಗದ ಅಧಿಕಾರಿಯೊಂದಿಗೆ ಚರ್ಚಿಸಿದರು. ಈ ಅಧಿಕಾರಿಯು ವಿದ್ಯುತ್ ವಿಭಾಗದ ಯಾವ ಅಧಿಕಾರಿ ದಳವು ಈ ಪ್ರದೇಶದಕ್ಕೆ ಬಂದಿರುವುದಿಲ್ಲವೆಂದು ಸ್ಪಷ್ಟ ಪಡಿಸಿದರರು. ಅದಕ್ಕೆ ಶಾಸಕ ಗುರ್ಜರ ಇವರು ಜನರಿಗೆ, ನಾಗರಿಕರು ಪರಿಚಿತರಲ್ಲದ ವ್ಯಕ್ತಿಯನ್ನು ಕಟ್ಟಿ ಹಾಕಬೇಕು. ಅವರು ನಕಲಿ ವಿದ್ಯುತ್ ನೌಕರನಾಗಿರುವುದು ಕಂಡು ಬಂದರೆ ಅವರನ್ನು ಘಟನಾಸ್ಥಳದಲ್ಲಿಯೇ ಹತ್ಯೆ ಮಾಡಬೇಕು. ಮುಂದಾಗುವುದನ್ನು ನಾನು ನೋಡಿಕೊಳ್ಳುತ್ತೇನೆ, ಪ್ರಕರಣ ದಾಖಲಾದರೂ ಕೂಡ ಅದನ್ನು ನಾನು ನನ್ನ ಮೇಲೆ ತೆಗೆದುಕೊಳ್ಳುತ್ತೇನೆ.’ ಎಂದು ಹೇಳಿದರು.
घर में फर्जी आदमी घुसे तो वहीं मार डालो: UP के BJP विधायक बोले- न कर पाओ तो बुला लेना, मैं हत्या करूंगा#UttarPradesh #BJP https://t.co/JKGQpkbO8v pic.twitter.com/MxwojCgVJo
— Dainik Bhaskar (@DainikBhaskar) January 9, 2023
ಕೆಲವು ತಿಂಗಳುಗಳ ಹಿಂದೆ ಗುರ್ಜರ ಇವರಿಗೆ ಜೀವ ಬೆದರಿಕೆ ಸಿಕ್ಕಿತ್ತು
ಅಗಸ್ಟ ತಿಂಗಳಿನಲ್ಲಿ ಶಾಸಕ ನಂದಕಿಶೋರ ಗುರ್ಜರ ಇವರಿಗೆ ಜೀವ ಬೆದರಿಕೆ ಸಿಕ್ಕಿತ್ತು. ಬೆದರಿಕೆಯ ಪತ್ರ ಅವರ ಕಾರ್ಯಾಲಯಕ್ಕೆ `ಸ್ಪೀಡ ಪೋಸ್ಟ’ ಮೂಲಕ ಕಳುಹಿಸಲಾಗಿತ್ತು. ಲಕೋಟೆಯ ಮೇಲೆ `ಸಾಜಿದ ಅಲ್ವಿ’ ಎಂದು ಹೆಸರು ಇತ್ತು. ಇದರಲ್ಲಿ “ನಿನ್ನನ್ನು ಬಹಳ ದಿನಗಳಿಂದ ನೋಡುತ್ತಿದ್ದೇನೆ, ಒಮ್ಮೆ ಚಿಕನ, ಒಮ್ಮೆ ಮಟನ, ಕೆಲವೊಮ್ಮೆ ಮುಸಲ್ಮಾನರ ಉಪಹಾರಗೃಹವನ್ನು ಮುಚ್ಚಿಸುತ್ತಿದ್ದೀಯಾ. ಈಗ ನಿನ್ನ ಉಲ್ಟಾ ಲೆಕ್ಕ ಪ್ರಾರಂಭವಾಗಿದೆ’’. ಎಂದು ಬರೆದಿತ್ತು.
1. ನಂದಕಿಶೋರ ಗುರ್ಜರ ಇವರು ಈ ಹಿಂದೆಯೂ ಸ್ಥಳೀಯ ಪಂಚಾಯತಿಯ ಚುನಾವಣೆಯಲ್ಲಿ ಮದ್ಯಪಾನ ಮಾಡುವ ಅಥವಾ ಮಾಂಸಾಹಾರ ಸೇವಿಸುವ ಯಾವುದೇ ವ್ಯಕ್ತಿಗೆ ಲೋಣಿ ನಗರ ಪಂಚಾಯತಿಯ ಅಭ್ಯರ್ಥಿಯನ್ನಾಗಿ ಮಾಡುವುದಿಲ್ಲ ಎಂದು ಹೇಳಿದ್ದರು. ಮುಖಂಡರು ಮದ್ಯ ಸೇವಿಸಿ ಬಲಾತ್ಕಾರ ಮಾಡುವ, ಲೂಟಿ ಮಾಡುವ ಅಥವಾ ಸ್ವತಃ ಪಶುವಾಗಿರುವಂತೆ ಇರಬಾರದು. ಇಂತಹ ಜನರಿಗೆ ಲೋಣಿಯಲ್ಲಿ ಯಾವ ಆವಶ್ಯಕತೆಯೂ ಇಲ್ಲ.
2. ದೆಹಲಿಯಲ್ಲಿ 2020 ರಲ್ಲಿ ನಡೆದ ಗಲಭೆಯ ಪ್ರಕರಣದಲ್ಲಿ ಗುರ್ಜರ ಇವರು, ನಾವು ಯಾರನ್ನೂ ಚುಡಾಯಿಸುವುದಿಲ್ಲ, ಆದರೆ ಯಾರಾದರೂ ನಮ್ಮ ಮಾತಾ- ಭಗಿನಿಯರನ್ನು ಚುಡಾಯಿಸಿದರೆ, ನಾವು ಅವರನ್ನು ಬಿಡುವುದಿಲ್ಲ. ನಾವು ಜಿಹಾದಿಗಳನ್ನು ಯಾವಾಗಲೂ ಕೊಲ್ಲುವೆವು. ಎಂದು ಹೇಳಿದ್ದರು.
3. ಮಾರ್ಚ 2022 ರಲ್ಲಿ ವಿಧಾನಸಭೆ ಚುನಾವಣೆಯ ತೀರ್ಪು ಬಂದ ಬಳಿಕ ಗುರ್ಜರ ಇವರು, ಲೋಣಿ ಕ್ಷೇತ್ರದಲ್ಲಿ ಅನುಮತಿಯಿಲ್ಲದೇ ಮಾಂಸ ಮಾರಾಟದ ಒಂದೇ ಒಂದು ಅಂಗಡಿ ನಡೆಯಬಾರದು. ಮಾಂಸ ಮಾರಾಟಗಾರರು ಅವರ ಅಂಗಡಿಗಳನ್ನು ತಕ್ಷಣವೇ ಮುಚ್ಚಬೇಕು. ನಾವು ಲೋಣಿಯನ್ನು ಲಂಡನ ಆಗಿ ಬದಲಾಯಿಸೋಣ. ಎಂದು ಹೇಳಿದ್ದರು.