ಕೊಲಕಾತಾ – `ವಂದೇ ಭಾರತ’ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟದ ಘಟನೆ ಬೆಳಕಿಗೆ ಬಂದಿದೆ. ಬಂಗಾಲದಲ್ಲಿ ಒಂದು ವಾರದಲ್ಲಿ ಈ ರೈಲಿನ ಮೇಲೆ ಕಲ್ಲು ತೂರಾಟದ ೩ ನೇ ಘಟನೆಯಾಗಿದೆ. ಬಾರೋಸಯಿ ರೈಲು ನಿಲ್ದಾಣದ ಬಳಿ `ವಂದೇ ಭಾರತ’ ಎಕ್ಸಪ್ರೆಸ್ಸಿನ ಸಿಸೀ-೧೪ ಭೋಗಿಯ ಮೇಲೆ ಕಲ್ಲುತೂರಾಟ ಮಾಡಲಾಗಿದೆ. ಇದರಿಂದ ಕಿಟಕಿಯ ಗಾಜು ಒಡೆಯಿತು. ಈ ಘಟನೆಯಿಂದ ರೈಲು ಬೋಲಪುರ ನಿಲ್ದಾಣದಲ್ಲಿ ಬಹಳ ಸಮಯ ನಿಲ್ಲಿಸಬೇಕಾಯಿತು. ಅದೃಷ್ಟವಶಾತ್ ಈ ಕಲ್ಲುತೂರಾಟದಲ್ಲಿ ಯಾವುದೇ ಪ್ರಯಾಣಿಕರಿಗೆ ಅಪಾಯ ಆಗಲಿಲ್ಲ. ಡಿಸೆಂಬರ್ ೩೦, ೨೦೨೨ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಂಗಾಲದಲ್ಲಿ `ವಂದೇ ಭಾರತ’ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಅದರ ನಂತರ ಜನವರಿ ೨ ರಂದು ರಾತ್ರಿ ಮಲದಾ ಇಲ್ಲಿ ಈ ರೈಲಿನ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಅದರ ನಂತರ ಜನವರಿ ೩ ರಂದು ಕಿಶನಗಂಜ ಇಲ್ಲಿ ಈ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಬಂಗಾಲದಲ್ಲಿನ ವಿರೋಧಿ ಪಕ್ಷದ ಮುಖಂಡರು ಮತ್ತು ಭಾಜಪದ ನಾಯಕ ಶುಭೆಂದು ಅಧಿಕಾರಿ ಇವರು ಈ ಘಟನೆಯನ್ನು ರಾಷ್ಟ್ರೀಯ ತನಿಖಾ ದಳದಿಂದ ವಿಚಾರಣೆ ನಡೆಸಲು ಆಗ್ರಹಿಸಿದ್ದರು.
Bengal: #VandeBharat Express pelted with stone again, train operations disrupted.#ITVideo pic.twitter.com/SXn58VHjoF
— IndiaToday (@IndiaToday) January 9, 2023
ಸಂಪಾದಕೀಯ ನಿಲುವುದುಷ್ಕರ್ಮಿಗಳಿಂದ ಪದೇ ಪದೇ ರೈಲಿನ ಮೇಲೆ ಕಲ್ಲು ತೂರಾಟ ನಡೆಯುತ್ತಿರುವಾಗ ಕ್ರಮ ಕೈಗೊಳ್ಳದ ತೃಣಮೂಲ ಕಾಂಗ್ರೆಸ್ಸಿನ ರಾಜ್ಯದ ಪೊಲೀಸರು ! ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದರಿಂದ ಈಗ ಜನರಿಗೆ ರೈಲು ಪ್ರಯಾಣ ಮಾಡುವುದು ಕೂಡ ಕಠಿಣವಾಗಿದೆ. ಇದೇ ಇದರಿಂದ ತಿಳಿದು ಬರುತ್ತದೆ. |