ವಾಷಿಂಗ್ಟನ್ (ಅಮೇರಿಕಾ) – ಹಿಂದೂ, ಬೌದ್ಧ, ಜೈನ, ಶಿಖ್ಖ ಧರ್ಮಗಳಲ್ಲಿ ವ್ಯಕ್ತಿಯು ಮೃತಪಟ್ಟನಂತರ ಪಾರ್ಥಿವ ಶರೀರಕ್ಕೆ ಅಗ್ನಿ ಸಂಸ್ಕಾರ ಮಾಡಲಾಗುತ್ತದೆ, ಆದರೆ ಮುಸಲ್ಮಾನ ಮತ್ತು ಕ್ರೈಸ್ತರ ಧರ್ಮದಲ್ಲಿ ಶವವನ್ನು ಹೂಳಲಾಗುತ್ತದೆ. ಅಮೇರಿಕಾದಲ್ಲಿ ಮಾತ್ರ ಒಂದು ಕಂಪನಿ ಶವದಿಂದ ಗೊಬ್ಬರ ನಿರ್ಮಿಸುವ ಸೌಲಭ್ಯ ಉಪಲಬ್ಧ ಮಾಡಿಕೊಡುತ್ತಿದೆ; ಆದರೆ ಈ ಗೊಬ್ಬರ ಪರಿಸರಕ್ಕೆ ಪೂರಕವಾಗಿದೆಯೇ ? ಎಂದು ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ೨೦೧೯ ರಲ್ಲಿ ಮೊದಲು ಸಲ ವಾಷಿಂಗ್ಟನ್ ರಾಜ್ಯದಲ್ಲಿ ಈ ಗೊಬ್ಬರಕ್ಕೆ ಅನುಮೋದನೆ ನೀಡಿದೆ.
New York just became the latest state to allow the composting of human bodies to fight climate change.https://t.co/gmdp3jhuYk
— One Green Planet (@OneGreenPlanet) January 7, 2023
ಇಲ್ಲಿಯವರೆಗೆ ಅಮೇರಿಕಾದ ೬ ರಾಜ್ಯಗಳಲ್ಲಿ `ಹ್ಯೂಮನ್ ಕಂಪೋಸ್ಟಿಂಗ್’ ಗಾಗಿ ಅನುಮತಿ ನೀಡಲಾಗಿದೆ. ಆದ್ದರಿಂದ ಮೃತ್ಯುವಿನ ನಂತರ ಯಾವುದಾದರೂ ವ್ಯಕ್ತಿಗೆ ಅವನ ಪಾರ್ಥಿವ ಶರೀರದ ಮಣ್ಣಿನಲ್ಲಿ ಅಥವಾ ಗೊಬ್ಬರದಲ್ಲಿ ಪರಿವರ್ತಿಸುವುದಿದ್ದರೆ ನಿರ್ಣಯ ತೆಗೆದುಕೊಳ್ಳಬಹುದು.
`ಹ್ಯೂಮನ್ ಕಂಪೋಸ್ಟಿಂಗ್’ ನಲ್ಲಿ ನೈಸರ್ಗಿಕ ಮತ್ತು ಸುರಕ್ಷಿತ ಪ್ರಕ್ರಿಯೆಯಿಂದ ಶವದ ರೂಪಾಂತರ ಮಣ್ಣಿನಲ್ಲಿ ಮಾಡಬಹುದು, ಎಂದು ದಾವೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಗಾಗಿ ಮರದ ತುಂಡುಗಳು, ಆಲ್ಫಾಲ್ಫಾ (ಒಂದು ರೀತಿಯ ಸಸಿ) ಮತ್ತು ಒಣಗಿರುವ ಹುಲ್ಲಿನ ಹೊರೆಗಳಿಂದ ತುಂಬಿರುವ ಕಂಟೇನರನಲ್ಲಿ ಮನುಷ್ಯನ ಮೃತದೇಹ ಇಡಲಾಗುವುದು. ಅದರ ನಂತರ ಮುಂದಿನ ಪ್ರಕ್ರಿಯೆಗಾಗಿ ೩೦ ದಿನಗಳ ಸಮಯ ಬೇಕಾಗುವುದು. ಅದರ ನಂತರ ನಿರ್ಮಾಣವಾಗಿರುವ ಮಣ್ಣು ಕುಟುಂಬದವರಿಗೆ ನೀಡಲಾಗುವುದು. ಈ ಮಣ್ಣನ್ನು ಹೂವಿನ ಗಿಡಗಳಿಗೆ, ಹಣ್ಣಿನ ಗಿಡಗಳಿಗೆ ಮತ್ತು ತರಕಾರಿಗಳಿಗೆ ಗೊಬ್ಬರ ಎಂದು ಉಪಯೋಗಿಸಬಹುದು.
ಸಂಪಾದಕೀಯ ನಿಲುವುಆಧ್ಯಾತ್ಮದ ಎಳ್ಳು ಅಷ್ಟು ಜ್ಞಾನ ಇರದ ಸುಧಾರಣಾವಾದದ ಹೆಸರಿನಲ್ಲಿ ಇಂತಹ ವಿಕೃತ ಪ್ರಕಾರಗಳು ಪಾಶ್ಚಾತರಿಗೆ ಹೊಳೆಯುತ್ತದೆ ! ಶವದ ಅಗ್ನಿ ಸಂಸ್ಕಾರ ನಡೆಸಿದರೆ ಇದು ಎಲ್ಲಾ ರೀತಿಯಿಂದಲೂ ಯೋಗ್ಯವಾಗಿದೆ. ಪಾಶ್ಚಾತ್ಯರು ಇದರ ಅಧ್ಯಯನ ಮಾಡುವ ದಿನವೇ ಸುದಿನ ! |