ಕರ್ಣಾವತಿಯಲ್ಲಿ ಬಜರಂದ ದಳದ ಕಾರ್ಯಕರ್ತರು `ಪಠಾಣ’ ಚಲನಚಿತ್ರದ ಪೋಸ್ಟರಗಳನ್ನು ಹರಿದರು !

ಕರ್ಣಾವತಿ (ಗುಜರಾತ) – ನಟ ಶಾಹರುಖ್ ಖಾನ್ ನ `ಪಠಾಣ’ ಚಲನಚಿತ್ರಕ್ಕೆ ಕಳೆದ ಕೆಲವು ದಿನಗಳಿಂದ ವಿರೋಧ ವ್ಯಕ್ತವಾಗುತ್ತದೆ. ಈ ಹಿನ್ನಲೆಯಲ್ಲಿ ಬಜರಂಗ ದಳದ ಕಾರ್ಯಕರ್ತರು ಕರುಣಾವತಿ ನಗರದ `ಅಲ್ಪಾವನ್’ ಮಾಲ್ ನಲ್ಲಿ (ಮಾಲ್ ಎಂದರೆ ದೊಡ್ಡ ವ್ಯಾಪಾರಿ ಸಂಕುಲ) ಅಂಟಿಸಿದ್ದ ಚಲನಚಿತ್ರದ ಪೋಸ್ಟರ್ ಗಳನ್ನು ಹರಿದರು. ಈ ಸಮಯದಲ್ಲಿ ಮಾಲ್ ಗೆ ಹಾನಿಯನ್ನುಂಟುಮಾಡಿದರು. `ಪಠಾಣ’ ಚಲನಚಿತ್ರ ಪ್ರದರ್ಶನವಾಗಲು ಬಿಡುವುದಿಲ್ಲ’, ಎಂದು ಈ ಸಮಯದಲ್ಲಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು. ಪೊಲೀಸರು ಅಲ್ಲಿಗೆ ತಲುಪಿದ ನಂತರ ೫ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಬಜರಂಗದಳದ ಅಧ್ಯಕ್ಷ ಜ್ವಲಿತ ಮೆಹತಾ ಇವರು, ನಟಿ ದೀಪಿಕಾ ಪಡುಕೋಣೆ ಇವರು ಧರಿಸಿದ್ದ ಬಟ್ಟೆಗೆ ನಮ್ಮ ವಿರೋಧವಿದೆ. `ಪಠಾಣ’ ಚಲನಚಿತ್ರ `ಲವ್ ಜಿಹಾದ್’ ಗೆ ಪ್ರೋತ್ಸಾಹ ನೀಡುತ್ತಿದೆ. ಆದ್ದರಿಂದ ನಾವು ಈ ಚಲನಚಿತ್ರ ಪ್ರದರ್ಶನಗೊಳ್ಳಲು ಬಿಡುವುದಿಲ್ಲ, ಎಂದು ಹೇಳಿದರು.