ನವ ದೆಹಲಿ – ಎಕ್ಸ್ ಪ್ರೆಸ್ ರೈಲಿನಿಂದ ಪ್ರಯಾಣ ಮಾಡುವಾಗ ರೈಲು ೩ ಗಂಟೆ ತಡವಾದರೆ ಟಿಕೆಟಿನ ಎಲ್ಲಾ ಹಣ ಹಿಂತಿರುಗಿಸಲಾಗುವುದು. ಅಷ್ಟೇ ಅಲ್ಲದೆ ಅವರಿಗೆ ಉಪಹಾರ ಮತ್ತು ಭೋಜನ ಕೂಡ ಉಚಿತವಾಗಿ ನೀಡಲಾಗುವುದು, ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಇವರು ಘೋಷಿಸಿದರು. ಈ ಟಿಕೇಟು ಕಂಫರ್ಮ್, ಆರ್.ಎ.ಸಿ. (ರಿಸರ್ವ್ ಅಗೈನ್ಸ್ ಕ್ಯಾನ್ಸಲೇಶನ್) ಅಥವಾ ಆನ್ ಲೈನ್ ಪಡೆದಿದ್ದರೂ ಕೂಡ ಪೂರ್ಣ ಹಣ ಹಿಂತಿರುಗಿಸಲಾಗುವುದು. ಉಪಹಾರ ಮತ್ತು ಭೋಜನ ಇದರ ಸೌಲಭ್ಯ ಕೆಲವು ನಿಶ್ಚಿತ ರೈಲಿನಲ್ಲಿ ಸಿಗುವುದು. ರೈಲು ೩ ಗಂಟೆ ಅಥವಾ ಅದಕ್ಕಿಂತ ತಡವಾದರೆ ಪ್ರಯಾಣಿಕರು ಟಿಕೆಟ್ ರದ್ದುಪಡಿಸಬಹುದು ಮತ್ತು ಸಂಪೂರ್ಣ ಪರಿಹಾರ ಪಡೆಯಬಹುದೆಂದು ರೈಲ್ವೆ ಹೇಳಿದೆ.
ಟಿಕೇಟಿನ ಹಣ ಹೇಗೆ ಹಿಂತಿರುಗಿ ಪಡೆಯುವುದು ?
ಯಾರಾದರೂ ಟಿಕೆಟ್ ನಿಲ್ದಾಣದಲ್ಲಿ ನಗದು ಹಣ ಕೊಟ್ಟು ಟಿಕೆಟ್ ಖರೀದಿಸಿದರೆ ಆಗ ತಕ್ಷಣ ನಗದು ಹಣ ದೊರೆಯುವುದು. ಒಂದು ವೇಳೆ ನಿಲ್ದಾಣದಲ್ಲಿ ಟಿಕೆಟ್ ಪಡೆದು ಡಿಜಿಟಲ್ ರೂಪದಲ್ಲಿ ಹಣ ನೀಡಿದ್ದಾರೆ ಆಗ ಹಣ ಆನ್ ಲೈನ್ ಮೂಲಕ ದೊರೆಯುವುದು, ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಇವರು ಮಾಹಿತಿ ನೀಡಿದರು.