ನೇಪಾಳಿನ `FATF’ಅನ್ನು greylist ಸೇರಿಸುವ ಸಾಧ್ಯತೆ !

ಕಾಠ್ಮಂಡು (ನೇಪಾಳ) – ನೇಪಾಳನ ಆರ್ಥಿಕ ಕರಿಗೆ ಆಗುತ್ತಿರುವ ಹಣ ಪೂರೈಕೆಯ ಮೇಲೆ ನಿಯಂತ್ರಣವನ್ನು ಇಡದಿದ್ದರಿಂದ ಅದರ `ಫೈನಾನ್ಷಿಯಲ್ ಆಕ್ಷನ್ ಟಾಸ್ಕ ಫೋರ್ಸ’ನ (`ಎಫ್.ಎ.ಟಿ.ಎಫ್.’ನ) greylist ಗೆ ಸೇರಿಸುವ ಸಾಧ್ಯತೆಯಿದೆ. ಈ ಮೊದಲು 2008 ರಿಂದ 2014 ರ ಕಾಲಾವಧಿಯಲ್ಲಿ ನೇಪಾಳನ ಎಫ್.ಎ.ಟಿ.ಎಫ್.ಅನ್ನು greylist ನಲ್ಲಿ ಸೇರಿಸಲಾಗಿತ್ತು. ಈ ಕಾಲಾವಧಿಯಲ್ಲಿ ನೇಪಾಳ ಮಾಡಿದ ಪ್ರಯತ್ನಗಳ ಬಳಿಕ ಅದನ್ನು ಈ ಪಟ್ಟಿಯಿಂದ ಹೊರಗೆ ತೆಗೆಯಲಾಗಿತ್ತು. ಪಾಕಿಸ್ತಾನವನ್ನು ಕೂಡ ಕೆಲವು ವರ್ಷಗಳ ವರೆಗೆ greylist ನಲ್ಲಿ ಸೇರಿಸಲಾಗಿತ್ತು. ಈ ಪಟ್ಟಿಯಲ್ಲಿ ಹೆಸರು ಬಂದಂತಹ ದೇಶಗಳಲ್ಲಿ ಹೊರದೇಶದ ಹಣಹೂಡಿಕೆಯಾಗುವುದಿಲ್ಲ. ಹಾಗೆಯೇ ಅಂತರರಾಷ್ಟ್ರೀಯ ಸಾಲ ದೊರೆಯುವುದು ಕೂಡ ಕಠಿಣವಾಗುತ್ತದೆ.

೧. ಇತ್ತೀಚೆಗಷ್ಟೇ ನೇಪಾಳಿನಲ್ಲಿ `ಏಶಿಯಾ ಪೆಸಿಫಿಕ ಗ್ರೂಪ ಆನ್ ಮನಿ ಲಾಂಡ್ರಿಂಗ’ ಈ ಸಂಸ್ಥೆಯ ಒಂದು ದಳವು ಪ್ರವಾಸ ಮಾಡಿತ್ತು. ಈ ದಳವು `ಎಫ್.ಎ.ಟಿ.ಎಫ್.’ನ ನಿಯಮಾನುಸಾರ ನೇಪಾಳ ಕಾರ್ಯ ನಿರ್ವಹಿಸುತ್ತಿದೆಯೇ ಅಥವಾ ಇಲ್ಲವೋ ?, ಎಂದು ಪರಿಶೀಲಿಸಿತು. ಇದರಲ್ಲಿ, ನೇಪಾಳಿನ ಸಧ್ಯದ ಸ್ಥಿತಿಯನ್ನು ನೋಡಿದರೆ ಎಫ್.ಎ.ಟಿ.ಎಫ್. ನೇಪಾಳನ್ನು Blacklist ನಲ್ಲಿ ಅಲ್ಲ greylist ನಲ್ಲಿ ಖಂಡಿತವಾಗಿಯೂ ಸೇರಿಸಲಿದೆ ಎಂಬುದು ಗಮನಕ್ಕೆ ಬಂತು.

೨. ಮಾಜಿ ಪ್ರಧಾನಿ ಶೇರ ಬಹಾದೂರ ದೇವುಬಾರ ಸರಕಾರವು ಆರ್ಥಿಕ ಅವ್ಯವಹಾರದ ಸಂದರ್ಭದ ಕಾನೂನಿನಲ್ಲಿ ಮಹತ್ವದ ಸುಧಾರಣೆ ಮಾಡುವ ನಿರ್ಣಯ ತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಅಧಿಸೂಚನೆಯನ್ನು ಜಾರಿಗೊಳಿಸುವವರಿದ್ದರು; ಆದರೆ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿಯವರು ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಒಂದು ವೇಳೆ ಡಿಸೆಂಬರ 16 ರ ಮೊದಲು ಇದಕ್ಕೆ ಸಮ್ಮತಿ ನೀಡಿದ್ದರೆ, ನೇಪಾಳವನ್ನು ಬೂದು ಪಟ್ಟಿಗೆ ಸೇರಿಸುವ ಅಪಾಯ ದೂರವಾಗುತ್ತಿತ್ತು ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ.