ಹಜಾರಿಬಾಗ(ಝಾರಖಂಡ) ನಲ್ಲಿ ಶಸ್ತ್ರದಿಂದ ಬೆದರಿಸಿ ಗೋಮಾಂಸವನ್ನು ತಿನ್ನಿಸಲು ಅನಿಯಾರ್ಯ ಪಡಿಸಿದ ಮುಸಲ್ಮಾನರ ಬಂಧನ

ಹಜಾರಿಬಾಗ(ಝಾರಖಂಡ) – ಇಲ್ಲಿಯ ಬರಿಯಠ ಬಿರಹೋರ ಟೋಲಾ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಆದಿವಾಸಿ ಜನರಿಗೆ ಶಸ್ತ್ರಗಳಿಂದ ಹೆದರಿಸಿ ಗೋಮಾಂಸವನ್ನು ತಿನ್ನಿಸಲಾಯಿತು. ಅವರ ಮತಾಂತರ ಮಾಡುವ ಪ್ರಯತ್ನವನ್ನು ಕೂಡ ಮಾಡಲಾಯಿತು. ಈ ಪ್ರಕರಣದಲ್ಲಿ ಮನೋಜ ಬಿರಹೋರನು ಪೊಲೀಸರಲ್ಲಿ ದೂರು ಮಾಡಿದ ಬಳಿಕ ದೂರು ದಾಖಲಿಸಲಾಯಿತು. ತದನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದರು.

೧. ಈ ದೂರಿನಲ್ಲಿ, ಡಿಸೆಂಬರ 30 ರಂದು ಈ ಪ್ರದೇಶದಲ್ಲಿ ಖಲೀಲ ಮಿಯಾ ಹೆಸರಿನ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ತಲುಪಿದ್ದಳು. ಅಲ್ಲಿ ಡಿಸೆಂಬರ 31 ರ ರಾತ್ರಿ ನೀಡಿದ ಔತಣಕೂಟದಲ್ಲಿ ಕೆಲವು ಜನರಿಗೆ ಮದ್ಯ ಕುಡಿಸಲಾಯಿತು. ತದನಂತರ ಅವರಿಗೆ ಊಟವನ್ನು ನೀಡಲಾಯಿತು. ಈ ಮಾಂಸಾಹಾರ ಊಟವನ್ನು ನೋಡಿ ಅವರಿಗೆ ಗೋಮಾಂಸ ಇರುವ ಸಂದೇಹ ಬಂದಿತು. ಅವರು ವಿರೋಧಿಸಲು ಪ್ರಯತ್ನಿಸಿದಾಗ ಅವರಿಗೆ ಶಸ್ತ್ರಗಳಿಂದ ಹೆದಿರಿಸಿ ಮಾಂಸವನ್ನು ತಿನ್ನಿಸಿದರು.

೨. ಸಾಹಿಬಗಂಜನ ರಾಧಾನಗರ ಪ್ರದೇಶದಲ್ಲಿಯೂ ಡಿಸೆಂಬರ 31 ರ ರಾತ್ರಿ ಚಂದನ ರವಿದಾಸ ಹೆಸರಿನ ವ್ಯಕ್ತಿಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸಲಾಯಿತು. ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರು ದಾಖಲಿಸಿದ ಬಳಿಕ ಮಿಠುನ ಶೇಖ, ನಸೀಮ ಶೇಖ, ಫಿರೋಜ ಶೇಖ ಇವರೊಂದಿಗೆ ಮತ್ತೂ 5 ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಭಾಜಪ ಈ ಎರಡೂ ಪ್ರಕರಣದ ಕುರಿತು ಝಾರಖಂಡ ಸರಕಾರವನ್ನು ಟೀಕಿಸಿದೆ.

ಸಂಪಾದಕೀಯ ನಿಲುವು

ಶಸ್ತ್ರಗಳ ಭಯ ತೋರಿಸಿ ಹಿಂದೂಗಳನ್ನು ಬಲವಂತವಾಗಿ ಗೋಮಾಂಸವನ್ನು ತಿನ್ನಿಸುವ ಧೈರ್ಯವಾದರೂ ಹೇಗೆ ಬರುತ್ತದೆ ? ಇದನ್ನು ತಡೆಯಲು ಹಿಂದೂಗಳ ಪರಿಣಾಮಕಾರಿ ಸಂಘಟನೆಯ ಆವಶ್ಯಕತೆಯಿದೆ !