`Times of India’ದ ಸೇನೆಯ 3 ಅಧಿಕಾರಿಗಳು ಲಂಚ ಪಡೆದ ಹಾಗೂ ಬಂಧನದ ವಾರ್ತೆ ಸುಳ್ಳು ಮತ್ತು ದಾರಿ ತಪ್ಪಿಸುವಂತೆ ! – ಸೈನ್ಯದಳ

ನವ ದೆಹಲಿ – ಡಿಸೆಂಬರ 31, 2022 ರಂದು `ಟೈಮ್ಸ ಆಫ್ ಇಂಡಿಯಾ’ವು ಒಂದು ಲೇಖನವನ್ನು ಪ್ರಕಟಿಸಿದೆ. ಅದರಲ್ಲಿ, `ಡಿಸೆಂಬರ 30, 2022 ರಂದು ಕೇಂದ್ರೀಯ ತನಿಖಾ ದಳವು(ಸಿಬಿಐ) ಲಂಚದ ಆರೋಪದಡಿಯಲ್ಲಿ 3 ಸೈನ್ಯಾಧಿಕಾರಿಗಳನ್ನು ಬಂಧಿಸಿದೆ. ಬಂಧಿಸಿರುವ ಅಧಿಕಾರಿಗಳಲ್ಲಿ ಭಾರತೀಯ ಸೇನೆಯ ದಕ್ಷಿಣ–ಪಶ್ಚಿಮ ಕಮಾಂಡನ ಲೆಕ್ಕಪತ್ರ ಅಧಿಕಾರಿ, ಒಬ್ಬ ಕಿರಿಯ ಅನುವಾದಕ ಮತ್ತು ಒಬ್ಬ ಆರ್ಥಿಕ ಸಲಹೆಗಾರರು ಸೇರಿದ್ದಾರೆ ಎಂದು ನಮೂದಿಸಲಾಗಿತ್ತು. ಈ ಸುದ್ದಿಯ ವರದಿಯಲ್ಲಿ ಅವರನ್ನು ಜಯಪುರದಿಂದ ಬಂಧಿಸಲಾಗಿದೆ ಮತ್ತು ಕೇಂದ್ರೀಯ ತನಿಖಾ ದಳವು ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿ 40 ಲಕ್ಷ ರೂಪಾಯಿಗಳ ಹಣವನ್ನು ಜಪ್ತಿ ಮಾಡಲಾಗಿದೆ. ಇದಲ್ಲದೇ `ಸಿ.ಬಿ.ಐ.’ ಆಸ್ತಿ ಮತ್ತು ಅಪರಾಧಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದರಲ್ಲಿ ಹೇಳಲಾಗಿತ್ತು. `ಟೈಮ್ಸ್ ಆಫ್ ಇಂಡಿಯಾ’ದ ಈ ಹೇಳಿಕೆ ಭಾರತೀಯ ಸೈನ್ಯದ ಹೆಚ್ಚುವರಿ ಡೈರೆಕ್ಟರ ಜನರಲ್ ನ ಸಾರ್ವಜನಿಕ ಮಾಹಿತಿ(ಎಡಿಜಿಪಿಐ) ವಿಭಾಗವು ಲೇಖನವು ಸಂಪೂರ್ಣ ಸುಳ್ಳಾಗಿದೆಯೆಂದು ಹೇಳುತ್ತಾ ತಿರಸ್ಕರಿಸಿದೆ.

೧. ಒಂದು ಟ್ವೀಟನಲ್ಲಿ `ಎಡಿಜಿಪಿಐ’ ಯು, ಡಿಸೆಂಬರ 31, 2022 ರ `ಟೈಮ್ಸ ಆಫ್ ಇಂಡಿಯಾ’ ದ ಜಯಪುರ ಸಂಚಿಕೆಯಲ್ಲಿ ಪ್ರಕಟಿಸಿದ ಲೇಖನವು ದಾರಿ ತಪ್ಪಿಸುವಂತಹದ್ದಾಗಿದೆ. ಈ ಲೇಖನದಲ್ಲಿ ನಮೂದಿಸಿದಂತೆ ಯಾವುದೇ ಸೈನ್ಯಾಧಿಕಾರಿಯನ್ನು ಬಂಧಿಸಲಾಗಿಲ್ಲ ಎಂದು ಈ ಟ್ವೀಟನಲ್ಲಿ ಸ್ಪಷ್ಟಗೊಳಿಸಲಾಗಿದೆ.

೨. ಈ ಟ್ವೀಟನಲ್ಲಿ, `ಭವಿಷ್ಯದಲ್ಲಿ ಇಂತಹ ಗಂಭೀರ ತಪ್ಪುಗಳನ್ನು ಆಗದಿರಲು ಯೋಗ್ಯ ಸಂಪಾದಕೀಯವು ಪರಿಶ್ರಮ ವಹಿಸುವಂತೆ `ಟೈಮ್ಸ ಆಫ್ ಇಂಡಿಯಾ’ ಕ್ಕೆ ವಿನಂತಿಯಿದೆ. ಆದರೂ ಆಂಗ್ಲ ದಿನಪತ್ರಿಕೆ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದು ಕಂಡು ಬಂದಿರುವುದು ಇದೇ ಮೊದಲ ಸಲವೇನಲ್ಲ.

೩. ಇತ್ತೀಚೆಗೆ `ಟೈಮ್ಸ ಆಫ್ ಇಂಡಿಯಾ’ ಕುಖ್ಯಾತ ಗೂಂಡಾ ಚಾರ್ಲ್ಸ ಶೋಭರಾಜನ ಚಿತ್ರದ ಬದಲಾಗಿ, ಅವನ ಜೀವನಾಧಾರಿತ ಚಲನಚಿತ್ರದಲ್ಲಿ ಶೋಭರಾಜನ ಪಾತ್ರವನ್ನು ನಿರ್ವಹಿಸಿದ್ದ ರಣದೀಪ ಹುಡಾ ನಟನ ಛಾಯಾಚಿತ್ರವನ್ನು ತೋರಿಸಿ ಎಲ್ಲ ಜನರಲ್ಲಿ ಗೊಂಧಲವನ್ನುಂಟು ಮಾಡಿ ವಿವಾದಕ್ಕೆ ಕಾರಣವಾಗಿತ್ತು.

ಸಂಪಾದಕೀಯ ನಿಲುವು

ಇಂತಹ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿ ಭಾರತೀಯ ಸೈನ್ಯದ ಘನತೆಯನ್ನು ಕಲುಷಿತಗೊಳಿಸುವ ದಿನಪತ್ರಿಕೆಯ ಮೇಲೆ ಕ್ರಮ ಕೈಕೊಳ್ಳಿರಿ !