ವಿಜಯವಾಡದಲ್ಲಿ ಅಯ್ಯಪ್ಪ ಸ್ವಾಮಿಯ ಭಜನೆಗೆ ನೆರೆಯ ಕ್ರೈಸ್ತರಿಂದ ವಿಘ್ನ !

ಅಮರಾವತಿ – ಆಂಧ್ರಪ್ರದೇಶದಲ್ಲಿ ಕ್ರೈಸ್ತ ಮುಖ್ಯಮಂತ್ರಿ ನೇತೃತ್ವದಲ್ಲಿ ಹಿಂದೂಗಳಿಗೆ ಕಿರುಕುಳ ನೀಡುತ್ತಿರುವುದು ವಿಜಯವಾಡದ ಅಯ್ಯಪ್ಪ ಸ್ವಾಮಿಯ ಭಕ್ತರ ಒಂದು ವಿಡಿಯೋದಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಅಯ್ಯಪ್ಪ ಯಾತ್ರೆಗಾಗಿ ಅಯ್ಯಪ್ಪ ಸ್ವಾಮಿಯ ದೀಕ್ಷೆ ಪಡೆದಿರುವ ಈ ಭಕ್ತರ ವ್ರತದ ಒಂದು ಭಾಗವೆಂದು ಮನೆಯಲ್ಲಿ ಭಜನೆಯ ಕಾರ್ಯಕ್ರಮ ಆಯೋಜಿಸಿದ್ದರು. ವಿಡಿಯೋದಲ್ಲಿ ಅವರು, ಪಕ್ಕದ ಮನೆಯವರಿಗೆ ಭಜನೆಯ ಕಾರ್ಯಕ್ರಮದ ಆಯೋಜನೆಯ ವಿಷಯ ತಿಳಿಸಿದರು ಮತ್ತು ಆ ಸಮಯದಲ್ಲಿ ಕ್ರೈಸ್ತರಿಗೆ ಏರು ಧ್ವನಿಯಲ್ಲಿ ಪ್ರಾರ್ಥನೆ ಮಾಡದಂತೆ ವಿನಂತಿಸಿದ್ದರು. ಇಷ್ಟು ಗೌರವದಿಂದ ಹೇಳಿದ್ದರೂ ನೆರೆಯ ಕ್ರೈಸ್ತರು ಭಜನೆಯ ಸಮಯದಲ್ಲಿ ದೊಡ್ಡ ಧ್ವನಿಯಲ್ಲಿ ಪ್ರಾರ್ಥನೆ ಮುಂದುವರಿಸಿ ಅಯ್ಯಪ್ಪ ಸ್ವಾಮಿಯ ಭಜನೆಯಲ್ಲಿ ವಿಘ್ನವನ್ನುಂಟು ಮಾಡಿದರು.

ಅಯ್ಯಪ್ಪ ಸ್ವಾಮಿಯ ಭಕ್ತರು ತಾಳ್ಮೆಯಿಂದ ಕ್ರೈಸ್ತರಿಗೆ ಧ್ವನಿ ಕಡಿಮೆ ಮಾಡಲು ವಿನಂತಿಸಿದರು; ಆದರೆ ಅವರು ನಿರ್ಲಕ್ಷಿಸಿ ದೊಡ್ಡ ಧ್ವನಿಯಲ್ಲಿ ಹಾಡುಗಳನ್ನು ಮುಂದುವರೆಸಿದರು. `ಕ್ರೈಸ್ತರು ಪ್ರಾರ್ಥನ ಸಭೆಯ ಹೆಸರಿನಲ್ಲಿ ಶಬ್ದ ಮಾಲಿನ್ಯ ಮಾಡುತ್ತಾರೆ. ಕ್ರೈಸ್ತರು ಜನರ ಗಮನ ಸೆಳೆಯಲು ಜೋರಾಗಿ ಪ್ರಾರ್ಥನೆ ಮಾಡುವ ಉಪಾಯ ಮಾಡುತ್ತಾರೆ. ಮತ್ತು ಈ ಮೂಲಕ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಾರೆ. ಇಂತಹವರ ಮೇಲೆ ಪರಿಸರ ಮಾಲಿನ್ಯ ಮಾಡಿದ್ದಾರೆಂದು ಆರೋಪ ದಾಖಲಿಸಬೇಕು’, ಎಂದು ಹಿಂದೂ ಭಕ್ತರು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಆಂಧ್ರಪ್ರದೇಶದಲ್ಲಿ ಕ್ರೈಸ್ತ ಮುಖ್ಯಮಂತ್ರಿ ಇರುವುದರಿಂದ ಮತಾಂಧ ಕ್ರೈಸ್ತರು ಚಿಗುರಿದ್ದರಿಂದ ಹಿಂದೂಗಳಿಗೆ ತೊಂದರೆ ನೀಡಲು ಧೈರ್ಯ ತೋರುತ್ತಾರೆ ! ಹಿಂದೂಗಳು ಕೂಡ ಸಂಘಟಿತರಾಗಿ ಕಾನೂನು ರೀತಿಯಲ್ಲಿ ಪಾಠ ಕಲಿಸಬೇಕು !