‘ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಯಾವುದೇ ಯೋಗದಾನವಿಲ್ಲ’(ಅಂತೆ)

ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರರ ವ್ಯರ್ಥ ಆರೋಪ

ಮುಖ್ಯಮಂತ್ರಿ ನಿತೀಶ ಕುಮಾರ

ಪಾಟಲೀಪುತ್ರ(ಬಿಹಾರ)- ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯೋಗದಾನವೇನೂ ಇರಲಿಲ್ಲ. ಸಂಘಕ್ಕೆ ಸ್ವಾತಂತ್ರ್ಯ ಹೋರಾಟದೊಂದಿಗೆ ಯಾವುದೇ ಕೊಡು-ಕೊಳ್ಳುವಿಕೆಯಿರಲಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ಮತ್ತು ಸಂಯುಕ್ತ ಜನತಾ ದಳದ ನಾಯಕ ನಿತೀಶ ಕುಮಾರ ಇವರು ಆರೋಪಿಸಿದ್ದಾರೆ.

ನಿತೀಶ ಕುಮಾರರು ತಮ್ಮ ಮಾತನ್ನು ಮುಂದುವರಿಸುತ್ತಾ, ನನ್ನ ತಂದೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ನನ್ನ ಜನನ ಸ್ವಾತಂತ್ರ್ಯದ ಬಳಿಕ ಆಯಿತು; ಅದರ ನಂತರ ನಾನು ಸ್ವಾತಂತ್ರ್ಯ ಹೋರಾಟದ ಪ್ರತಿಯೊಂದು ವಿಷಯಗಳನ್ನು ತಿಳಿದುಕೊಂಡೆನು. ಭಾರತದ ಸ್ವಾತಂತ್ರ್ಯದಲ್ಲಿ ಮಹಾತ್ಮಾ ಗಾಂಧಿಯವರ ಯೋಗದಾನವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ; ಆದರೆ ಈಗ ಕೆಲವು ಜನರು ರಾಷ್ಟ್ರಪಿತನ ವಿಷಯದಲ್ಲಿ ಏನು ಮಾತನಾಡುತ್ತಿದ್ದಾರೆ ಎನ್ನುವುದನ್ನು ಎಲ್ಲರೂ ನೋಡುತ್ತಿದ್ದಾರೆ. ಈಗ ಅವರು ‘ ಹಳೆಯ ರಾಷ್ಟ್ರಪಿತನನ್ನು ಮರೆಯಿರಿ, ಹೊಸ ರಾಷ್ಟ್ರಪಿತ ಬಂದಿದ್ದಾರೆ’ ಎಂದು ಹೇಳುತ್ತಿದ್ದಾರೆ. ಈ ಹೊಸ ರಾಷ್ಟ್ರಪಿತ ಭಾರತಕ್ಕೆ ಏನು ಮಾಡಿದ್ದಾರೆ? ಅವರು ಏನಾದರೂ ಕಾರ್ಯ ಮಾಡಿದ್ದಾರೆಯೇ? ಅವರ ಕಾಲದಲ್ಲಿ ಭಾರತ ಯಾವ ಕ್ಷೇತ್ರದಲ್ಲಿ ಮುಂದೆ ಬಂದಿದೆ? ಅವರು ಕೇವಲ ಹೊಸ ತಂತ್ರಜ್ಞಾನವನ್ನು ಬಲಪೂರ್ವಕವಾಗಿ ಉಪಯೋಗಿಸಿದ್ದಾರೆ. ಮೊದಲು ಮಾಧ್ಯಮಗಳು ಸರಕಾರವಿರಲಿ ಅಥವಾ ವಿರೋಧ ಪಕ್ಷ, ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಸ್ಪಷ್ಟವಾಗಿ ಮಂಡಿಸುತ್ತಿದ್ದವುರು; ಆದರೆ ಈಗ ಮಾಧ್ಯಮಗಳಿಗೆ ಏನು ಹೇಳಲಾಗುತ್ತದೆಯೋ ಅದನ್ನೇ ಬರೆಯಬೇಕಾಗುತ್ತಿದೆಯೆಂದು ಹೇಳಿದರು.

ಸಂಪಾದಕೀಯ ನಿಲುವು

  • ಭಾರತಕ್ಕೆ ಸ್ವಾತಂತ್ರ್ಯ ದೊರಕಿ ೭೫ ವರ್ಷಗಳೇ ಆಗಿವೆ. ‘ಸ್ವಾತಂತ್ರ್ಯ ಹೋರಾಟದಲ್ಲಿ ಸಂಘವು ಹಿಂದೂಗಳಿಗಾಗಿ ಏನು ಮಾಡಿದೆ?’, ಎನ್ನುವುದು ಜನತೆಗೆ ತಿಳಿದಿದೆ. ಇದರಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಯಾರು ಎಷ್ಟು ಸಹಭಾಗಿಗಳಾಗಿದ್ದರು ಎನ್ನುವ ವಿಷಯದಲ್ಲಿ ಆರೋಪ-ಪ್ರತ್ಯಾರೋಪವನ್ನು ಮಾಡುವ ಬದಲು ಸ್ವಾತಂತ್ರ್ಯದ ಬಳಿಕ ನಿತೀಶ ಕುಮಾರರ ಸಮಾಜವಾದಿ ನಾಯಕರು ಭ್ರಷ್ಟಾಚಾರ, ಮುಸಲ್ಮಾನರ ಓಲೈಕೆ, ಹಿಂದೂಗಳಿಗೆ ಮಲತಾಯಿ ಧೋರಣೆ ನಡೆ ಮುಂತಾದ ಕುಕೃತ್ಯ ಮಾಡಿ ದೇಶದ ಎಷ್ಟು ಹಾನಿಯಾಗಿದೆ ಎನ್ನುವ ಲೆಕ್ಕವನ್ನು ನಾಗರಿಕರಿಗೆ ನೀಡಬೇಕು.
  • ನಿತೀಶ ಕುಮಾರರು ಭಾಜಪದೊಂದಿಗೆ ಇದ್ದ ತಮ್ಮ ಪಕ್ಷದ ಮೈತ್ರಿಯನ್ನು ಮುರಿದುಕೊಂಡು ಲಾಲೂಪ್ರಸಾದ ಯಾದವರ ರಾಷ್ಟ್ರೀಯ ಜನತಾ ದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ನಿತೀಶ ಕುಮಾರರಲ್ಲಿ ಧೈರ್ಯವಿದ್ದರೆ ಅವರು ಲಾಲೂಪ್ರಸಾದ ಯಾದವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯವನ್ನು ಯಾವ ರೀತಿ ಲೂಟಿ ಮಾಡಿದ್ದಾರೆ ಎನ್ನುವುದನ್ನು ತಿಳಿಸಬೇಕು.