ಕರ್ಣಾವತಿ (ಗುಜರಾತ)ಯ `ಕಾರ್ನಿವಲ’ ನಲ್ಲಿ `ಸಾಂತಾಕ್ಲಾಜ’ ವೇಶದಲ್ಲಿ ಕ್ರೈಸ್ತ ಧರ್ಮದ ಪ್ರಸಾರ ಮಾಡುತ್ತಾ ಮತಾಂತರಕ್ಕೆ ಪ್ರಯತ್ನ

ಹಿಂದೂ ಸಂಘಟನೆಗಳ ವಿರೋಧದ ಬಳಿಕ ವಿವಾದ ಮತ್ತು ಹಲ್ಲೆ !

(`ಕಾರ್ನಿವಲ’ ಎಂದರೆ ರಸ್ತೆಯ ಮೇಲೆ ಕುಣಿತ- ಹಾಡು ಮಾಡುತ್ತ ಉತ್ಸವವನ್ನು ಆಚರಿಸುವ ಪಾಶ್ಚಿಮಾತ್ಯರ ಪದ್ಧತಿ)

ಕರ್ಣಾವತಿ (ಗುಜರಾತ) – ಇಲ್ಲಿಯ `ಕಾಂಗರಿಯಾ ಕಾರ್ನಿವಲ’ ನಲ್ಲಿ `ಸಾಂತಕ್ಲಾಜ’ ವೇಶ ಧರಿಸಿ ಮತಾಂತರಗೊಳಿಸಲು ಪ್ರಯತ್ನಿಸುವವರನ್ನು ಹಿಂದೂ ಸಂಘಟನೆಗಳು ವಿರೋಧಿಸಿದರು. ಈ ಸಂದರ್ಭದಲ್ಲಿ ವಿವಾದವಾಗಿ ಹಲ್ಲೆ ನಡೆಯಿತು. ತದನಂತರ ಸಾಂತಾಕ್ಲಾಜ ವೇಶ ಧರಿಸಿದ್ದ ವ್ಯಕ್ತಿಯು `ಜಯ ಶ್ರೀ ರಾಮ’ ಮತ್ತು `ಹರ-ಹರ ಮಹಾದೇವ’ ಎಂದು ಘೋಷಣೆ ನೀಡಿದನು. ಈ ಘಟನೆ ಡಿಸೆಂಬರ 30ರಂದು ನಡೆಯಿತು. ಈ ಕಾರ್ನಿವಲನಲ್ಲಿ ಒಟ್ಟು 12 ಲಕ್ಷ ಜನರು ಭಾಗವಹಿಸಿದ್ದರು.

೧. ಕೆಲವು ಜನರು ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ `ಸಾಂತಾಕ್ಲಾಜ ವೇಶ ಧರಿಸಿದ್ದ ಕೆಲವು ಜನರು ಕ್ರೈಸ್ತ ಮಿಶನರಿಗಳ ಪುಸ್ತಕಗಳನ್ನು ಹಂಚುತ್ತಿದ್ದರು’ ಎಂದು ಮಾಹಿತಿ ನೀಡಿದರು. ಇದಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಘಟನಾಸ್ಥಳಕ್ಕೆ ಹೋಗಿ ಆ ಸಾಂತಾಕ್ಲಾಜ ಹಿಂದೂಗಳನ್ನು ಮತಾಂತರಗೊಳಿಸಲು ಪ್ರವೃತ್ತಗೊಳಿಸುತ್ತಿದ್ದಾರೆಂದು ಆರೋಪಿಸಿದರು. ಇದರಿಂದ ಸಾಂತಾಕ್ಲಾಜ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರಲ್ಲಿ ವಿವಾದಗಳು ನಡೆದು ಹಲ್ಲೆ ನಡೆಯಿತು. ಈ ಘಟನೆಯ ಒಂದು ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಕಾರ್ಯಕರ್ತರು ಬಜರಂಗ ದಳದವರಾಗಿದ್ದಾರೆಂದು ಹೇಳಲಾಗುತ್ತಿದೆ.

೨. ವಿಶ್ವ ಹಿಂದೂ ಪರಿಷತ್ತಿನ ವಕ್ತಾರ ಹಿತೇಂದ್ರಸಿಂಹ ರಾಜಪೂತರು ಇವರು, ಕಳೆದ 4 ದಿನಗಳಿಂದ ಕಾರ್ನಿವಲನಲ್ಲಿ ಕ್ರೈಸ್ತ ಧರ್ಮದ ಪ್ರಸಾರ ಮಾಡುವ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿತ್ತು. ಸಾಂತಾಕ್ಲಾಜ ವೇಶ ಧರಿಸಿದ್ದ ಜನರು ಹಿಂದೂಗಳನ್ನು ಮತಾಂತರವಾಗುವಂತೆ ಪ್ರೋತ್ಸಾಹಿಸುತ್ತಿದ್ದರು ಎನ್ನುವುದು ಗಮನಕ್ಕೆ ಬಂದಾಗ ಅವರನ್ನು ವಿರೋಧಿಸಲಾಯಿತು.

ಸಂಪಾದಕೀಯ ನಿಲುವು

  • ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಬಹಿರಂಗವಾಗಿ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನ ನಡೆಯುತ್ತದೆ ಮತ್ತು ಅವರ ಮೇಲೆ ಯಾವುದೇ ಕ್ರಮ ನಡೆಯುವುದಿಲ್ಲ ಇದು ಹಿಂದೂಗಳಿಗೆ ನಾಚಿಕೆಗೇಡು !
  • ಕೇಂದ್ರ ಸರಕಾರ ಮತಾಂತರ ವಿರೋಧಿ ಕಾನೂನು ಯಾವಾಗ ಮಾಡುವುದು ?, ಎಂದು ಹಿಂದೂಗಳ ಮನಸ್ಸಿನಲ್ಲಿ ನಿರಂತರವಾಗಿ ಪ್ರಶ್ನೆ ಮೂಡುತ್ತಿರುತ್ತದೆ !