ಬೌದ್ಧ ಧರ್ಮವನ್ನು ನಾಶ ಮಾಡುವ ಚೀನಾದ ಪ್ರಯತ್ನ ಎಂದಿಗೂ ಯಶಸ್ವಿ ಆಗಲಾರದು ! – ದಲೈ ಲಾಮಾ

ಬೋಧಗಯಾ (ಬಿಹಾರ) – ಚೀನಾ ಸರಕಾರದಿಂದ ಬೌದ್ಧ ಧರ್ಮವನ್ನು ನಾಶ ಮಾಡಲು ಎಷ್ಟೇ ಪ್ರಯತ್ನ ಮಾಡಿದರೂ, ಅದರಲ್ಲಿ ಅವರು ಎಂದಿಗೂ ಯಶಸ್ವಿ ಆಗಲಾರರು. ಚೀನಾವು ಹಲವಾರು ಬಾರಿ ಬೌದ್ಧ ಧರ್ಮಕ್ಕೆ ಹಾನಿತಂದಿದೆ; ಆದರೂ ಕೂಡ ಅದು ಈ ಧರ್ಮವನ್ನು ನಾಶ ಮಾಡಲು ಸಾಧ್ಯವಾಗಿಲ್ಲ; ಕಾರಣ ಇಂದಿಗೂ ಚೀನಾದಲ್ಲಿ ಬೌದ್ಧ ಧರ್ಮವನ್ನು ನಂಬುವ ಜನರಿದ್ದಾರೆ, ಎಂದು ಟಿಬೆಟ್ ನ ಬೌದ್ಧ ಧರ್ಮಗುರು ದಲೈ ಲಾಮಾ ಇವರು ಹೇಳಿಕೆ ನೀಡಿದರು. ಇಲ್ಲಿ ಕಾಲಚಕ್ರ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ದಲೈ ಲಾಮಾ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಚೀನಾ ಅನೇಕ ಬೌದ್ಧ ಮಠಗಳ ನಾಶ ಮಾಡಿದೆ. ಆದರೂ ಕೂಡ ಚೀನಾದಲ್ಲಿ ಬೌದ್ಧ ಧರ್ಮವನ್ನು ನಂಬುವವರ ಸಂಖ್ಯೆ ಕಡಿಮೆಯಾಗಿಲ್ಲ. ಇಂದಿಗೂ ಅಲ್ಲಿ ಅನೇಕ ಬೌದ್ಧ ಮಠಗಳು ಅಸ್ತಿತ್ವದಲ್ಲಿ ಇದೆ ಮತ್ತು ಜನರಿಗೆ ಧರ್ಮದ ಬಗ್ಗೆ ವಿಶ್ವಾಸ ಇದೆ ಎಂದು ಹೇಳಿದರು.