ನಾನು ಅಮ್ಮನಲ್ಲಿ ತ್ರಿಮೂರ್ತಿಗಳ ಅನುಭೂತಿಯನ್ನು ಪಡೆದಿದ್ದೇನೆ – ಪ್ರಧಾನಿ ಮೋದಿ ಭಾವುಕ ನುಡಿ

ಪ್ರಧಾನಿ ಮೋದಿಗೆ ಮಾತೃ ವಿಯೋಗ

ನವದೆಹಲಿ – ಪ್ರಧಾನಿ ಮೋದಿಯವರ ತಾಯಿ ಹೀರಾಬೇನ್(100 ವರ್ಷ) ಇವರು ನಿಧನರಾದರು. ‘ಶ್ರೀಮತಿ ಹೀರಾಬೆನ್‌ ಅವರು ಡಿಸೆಂಬರ್‌ 30, 2022 ರಂದು ಬೆಳಗಿನ ಜಾವ 3.39 ಕ್ಕೆ ನಿಧನರಾಗಿದ್ದಾರೆ’ ಎಂದು ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ.

(ಸೌಜನ್ಯ : Asianet Suvarna News)

ನೂರು ವರ್ಷ ಪೂರ್ಣಗೊಳಿಸಿ ಈಶ್ವರನ ಚರಣಗಳಲ್ಲಿ ವಿರಾಮ – ಪ್ರಧಾನಿ ಮೋದಿ

ನಾನು ಅಮ್ಮನಲ್ಲಿ ತ್ರಿಮೂರ್ತಿಗಳ ಅನುಭೂತಿಯನ್ನು ಪಡೆದಿದ್ದೇನೆ ಅದರಲ್ಲಿ ಒಂದು ತಪಸ್ವೀ ಯಾತ್ರೆ, ನಿರಪೇಕ್ಷ ಕರ್ಮಯೋಗಿಯ ಪ್ರತೀಕ ಹಾಗೂ ಮೌಲ್ಯಗಳ ಕುರಿತು ಜೀವನ ಮುಡಿಪಾಗಿಡುವುದು, ಎಂದು ಪ್ರಧಾನಿ ಮೋದಿಯವರು ಭಾವುಕ ನುಡಿ ನಮನ ಸಲ್ಲಿಸಿದ್ದಾರೆ.

ಅನೇಕ ಗಣ್ಯರಿಂದ ಶ್ರದ್ಧಾಂಜಲಿ !

ಈ ಪ್ರಸಂಗದಲ್ಲಿ  ಹಿರಾಬೇನ್ ಇವರಿಗೆ ಕೇಂದ್ರ ಗೃಹ ಸಚಿವ ಅಮಿತ ಶಹಾ, ರಕ್ಷಣಾ ಸಚಿವ ರಾಜನಾಥ ಸಿಂಹ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹಿತ ವಿವಿಧ ಕ್ಷೇತ್ರದಲ್ಲಿನ ಗಣ್ಯರಿಂದ ಶ್ರದ್ಧಾಂಜಲಿ ಅರ್ಪಿಸಲಾಗಿದೆ.

ಗಾಂದೀನಗರದಲ್ಲಿ ಅಂತ್ಯ ಸಂಸ್ಕಾರ

ಹಿರಾಬೇನ್ ಇವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಗಾಂಧಿನಗರದಲ್ಲಿನ ಅವರ ಮನೆಗೆ ತರಲಾಯಿತು. ಮೋದಿ ಇವರು ಮನೆಯಲ್ಲಿಯೇ ತಾಯಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಅದರ ನಂತರ ಆಂಬುಲೆನ್ಸ್ ನಿಂದ ಪಾರ್ಥಿವ ಶರೀರವನ್ನು ರುದ್ರಭೂಮಿಗೆ ಅಂತ್ಯಸಂಸ್ಕಾರಕ್ಕಾಗಿ ಕೊಂಡೊಯ್ಯುವಾಗ ಮೋದಿಯವರು ಆಂಬುಲೆನ್ಸ್ ನಲ್ಲಿ ಪ್ರಯಾಣ ಮಾಡಿದರು. ಆಂಬುಲೆನ್ಸ್ ನಿಂದ ಪಾರ್ಥಿವ ಶರೀರ ಕೊಂಡೊಯ್ಯುವಾಗ ಮೋದಿಯವರೇ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದರು. ಪ್ರಧಾನಿ ಮೋದಿ ಅವರ ಮಾತೃಶ್ರೀ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನಜಂಗುಳಿಯಾಗಿತ್ತು.