ಪಠಾಣ’ ಚಲನಚಿತ್ರದ `ಬೇಶರಮ್ ರಂಗ್’ ಹಾಡಿನಲ್ಲಿ ಬದಲಾವಣೆ ಮಾಡುವಂತೆ ಸೆನ್ಸಾರ ಬೋರ್ಡ ಸೂಚನೆ

ಸೆನ್ಸಾರ ಬೋರ್ಡನ ಅಧ್ಯಕ್ಷರು ಮತ್ತು ಗೀತ ರಚನೆಕಾರ ಪ್ರಸೂನ ಜೋಶಿ

ನವದೆಹಲಿ- ಸದ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರ ಮಂಡಳಿ( ಸೆನ್ಸಾರ ಬೋರ್ಡ) ಯ ಬಳಿ ಪ್ರಮಾಣಪತ್ರಕ್ಕಾಗಿ `ಪಠಾಣ’ ಚಲನಚಿತ್ರ ಬಂದಿದೆ. ಈ ಸಂದರ್ಭದಲ್ಲಿ ಪ್ರಕ್ರಿಯೆ ನಡೆದಿದೆ. ಮಂಡಳಿಯು ನಿರ್ಮಾಪಕರಿಗೆ `ಬೇಶರಮ್ ರಂಗ್’ ಈ ಹಾಡಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ನಿರ್ದೇಶನ ನೀಡಿದೆಯೆಂದು ಅಧ್ಯಕ್ಷರು ಮತ್ತು ಗೀತ ರಚನೆಕಾರ ಪ್ರಸೂನ ಜೋಶಿಯವರು ಹೇಳಿದ್ದಾರೆ. `ಬೇಶರಮ್ ರಂಗ್’ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆಯವರು ಕೇಸರಿ ಬಣ್ಣದ ಅಂತರ್ವಸ್ತ್ರ ಧರಿಸಿದ್ದರಿಂದ ಹಿಂದೂಗಳು ಅದನ್ನು ವಿರೋಧಿಸುತ್ತಿದ್ದಾರೆ.