ಸೌದಿ ಅರೇಬಿಯಾದಿಂದ ಪಾಕಿಸ್ತಾನದಲ್ಲಿರುವ ತನ್ನ ನಾಗರೀಕರಿಗೆ ಜಾಗರೂಕತೆಯಿಂದ ಇರಲು ಸಲಹೆ.

ಅಮೇರಿಕಾ ಮತ್ತು ಆಸ್ಟ್ರೇಲಿಯಾ ಇವುಸಹ ಪಾಕಿಸ್ತಾನದಲ್ಲಿರುವ ತಮ್ಮ ನಾಗರೀಕರಿಗೆ ಸೂಚನೆಯನ್ನು ನೀಡಿತ್ತು.

ಇಸ್ಲಾಮಾಬಾದ(ಪಾಕಿಸ್ತಾನ) – ಇಲ್ಲಿಯ ಸೌದಿ ಅರೇಬಿಯಾದ ರಾಯಭಾರ ಕಚೇರಿಯು, ಪಾಕಿಸ್ತಾನದಲ್ಲಿರುವ ತನ್ನ ದೇಶದ ನಾಗರಿಕರಿಗೆ ಅನಾವಶ್ಯಕ ಪ್ರವಾಸವನ್ನು ಮಾಡದಿರುವಂತೆ ಮತ್ತು ಪಂಚತಾರಾ ಉಪಹಾರಗೃಹಗಳಿಗೆ ಹೋಗದಿರುವಂತೆ ಟ್ವೀಟ್ ಮೂಲಕ ಸಲಹೆ ನೀಡಿದೆ. ಈ ಹಿಂದೆ ಅಮೇರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳು ಕೂಡ ತಮ್ಮ ನಾಗರಿಕರಿಗೆ ಇದೇ ರೀತಿ ಸಲಹೆಯನ್ನು ನೀಡಿತ್ತು. ಕಳೆದ ಕೆಲವು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಸಾವು ನೋವುಗಳಾಗುತ್ತಿರುವ ಘಟನೆಗಳು ನಡೆದಿವೆ. `ತಹರೀಕ-ಎ-ತಾಲಿಬಾನ ಪಾಕಿಸ್ತಾನ’ ಹೆಸರಿನ ತಾಲಿಬಾನಿ ಭಯೋತ್ಪಾದಕ ಸಂಘಟನೆ ಪಾಕಿಸ್ತಾನದಲ್ಲಿ ಸಾವು-ನೋವುಗಳನ್ನುಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ದೇಶಗಳು ತಮ್ಮ ನಾಗರಿಕರಿಗೆ ಮೇಲಿನಂತೆ ಸಲಹ ನೀಡಿವೆ.

ಸಂಪಾದಕೀಯ ನಿಲುವು

ಈಗ ಈ ದೇಶಗಳೊಂದಿಗೆ ಸಂಪೂರ್ಣ ಜಗತ್ತು ಪಾಕಿಸ್ತಾನವನ್ನು `ಭಯೋತ್ಪಾದಕ ದೇಶ’ ವೆಂದು ಘೋಷಿಸಲು ಪ್ರಯತ್ನಿಸಬೇಕು. ಹಾಗೆ ಮಾಡಿ ಪಾಕಿಸ್ತಾನದ ಮೇಲೆ ಸಂಪೂರ್ಣ ಬಹಿಷ್ಕಾರ ಹಾಕಬೇಕು ಆಗ ಅದು ಸರಿಯಾದ ದಾರಿಗೆ ಬರುತ್ತದೆ.