ಮೈಸೂರು- ಇಲ್ಲಿ ಅಪರಿಚಿತರಿಂದ ಚರ್ಚ ಮೇಲೆ ದಾಳಿ

ಮೈಸೂರು- ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪ್ರದೇಶದಲ್ಲಿರುವ ಸೇಂಟ ಮೇರಿ ಚರ್ಚ ಅನ್ನು ಡಿಸೆಂಬರ 27 ರಂದು ಅಪರಿಚಿತರು ಧ್ವಂಸಗೊಳಿಸಿದ್ದಾರೆ. ಸಾಯಂಕಾಲದ ಸಮಯದಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಸಿ.ಸಿ.ಟಿ.ವಿ.ಯ ಆಧಾರದಲ್ಲಿ ಆರೋಪಿಯ ಗುರುತನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಘಟನೆಯ ತನಿಖೆಗಾಗಿ ಪೊಲೀಸ ತಂಡವನ್ನು ಸ್ಥಾಪಿಸಲಾಗಿದೆ. ಪೊಲೀಸರು, ಆಕ್ರಮಣಕಾರರು ಚರ್ಚನ ಹಿಂದಿನ ದ್ವಾರವನ್ನು ಮುರಿದು ಒಳಗೆ ಪ್ರವೇಶಿಸಿದರು. ಪ್ರಾಥಮಿಕ ಸ್ತರದಲ್ಲಿ ಈ ಘಟನೆ ಕಳ್ಳತನದ ಉದ್ದೇಶದಿಂದ ನಡೆದಿರುವ ಸಾಧ್ಯತೆಯಿದೆ. ಕಾರಣ ಆಕ್ರಮಣಕಾರರು ಇಲ್ಲಿ ಅರ್ಪಣೆಹುಂಡಿಯನ್ನು ಹೊತ್ತೊಯ್ದಿದ್ದಾರೆ ಎಂದು ಹೇಳಿದ್ದಾರೆ.