ಕಾಂಗ್ರೆಸ ನಾಯಕ ಸಲ್ಮಾನ್ ಖುರ್ಶಿದ್ ಇವರಿಂದ ಶ್ರೀರಾಮನೊಂದಿಗೆ ರಾಹುಲ ಗಾಂಧಿಯ ತುಲನೆ !

ಎಲ್ಲ ಕಾಂಗ್ರೆಸಿಗರನ್ನು ‘ಭರತ’ ಎಂದು ಹೇಳಿದರು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರ ಪ್ರದೇಶದಲ್ಲಿನ ಮುರಾದಾಬಾದದಲ್ಲಿ ಕಾಂಗ್ರೆಸ್ಸಿನ ನಾಯಕ ಸಲ್ಮಾನ್ ಖುರ್ಷಿದ್ ಇವರು ಕಾಂಗ್ರೆಸ ಪಕ್ಷದ ನಾಯಕ ರಾಹುಲ ಗಾಂಧಿ ಇವರನ್ನು ಶ್ರೀರಾಮನೊಂದಿಗೆ ತುಲನೆ ಮಾಡಿದ್ದಾರೆ ಹಾಗೂ ಕಾಂಗ್ರೆಸ್ಸಿನವರನ್ನು ‘ಭರತ’ ಎಂದು ಹೇಳಿದ್ದಾರೆ. ‘ಭಾರತ ಜೋಡೋ’ ಯಾತ್ರೆಯಲ್ಲಿ ಆಯೋಜಿಸಲಾಗದ ಪತ್ರಕರ್ತರ ಸಭೆಯಲ್ಲಿ ಸಲ್ಮಾನ ಖುರ್ಷಿದ್ ಇವರು ಈ ವಿವಾದಾತ್ಮಕ ಹೇಳಿಕೆ ನೀಡಿದರು.

೧. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕೊರೆಯುವ ಚಳಿಯಲ್ಲಿ ಎಲ್ಲರೂ ನಡಗುತ್ತಿದ್ದಾರೆ, ಚಳಿಯಿಂದ ರಕ್ಷಣೆ ಆಗುವದಕ್ಕಾಗಿ ನಾವು ಜಾಕೆಟ್ ಧರಿಸುತ್ತೇವೆ; ಆದರೆ ರಾಹುಲ್ ಗಾಂಧಿ ಇಂತಹ ಕೊರೆಯುವ ಚಳಿಯಲ್ಲಿ ಕೂಡ ಕೇವಲ ಟಿ-ಶರ್ಟ್ ಧರಿಸಿ ‘ಭಾರತ ಜೋಡೋ ಯಾತ್ರೆ’ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಸ್ವತಃ ಯೋಗಿ ಆಗಿದ್ದಾರೆ.

೨. ಅವರು ಮಾತು ಮುಂದುವರಿಸಿ, ಪ್ರಭು ಶ್ರೀರಾಮ ಯಾವಾಗಲೂ ಎಲ್ಲಾ ಸ್ಥಳಗಳಿಗೆ ತಲುಪಲು ಸಾಧ್ಯವಿಲ್ಲ. ಆದ್ದರಿಂದ ಯಾವ ಸ್ಥಳಕ್ಕೆ ಶ್ರೀರಾಮ ತಲಪಲು ಸಾಧ್ಯವಾಗಲಿಲ್ಲ ಅಲ್ಲಿ ಭರತ ಅವರ ಪಾದುಕೆ ತೆಗೆದುಕೊಂಡು ಹೋಗಿದ್ದರು. ನಾವು ‘ಪಾದುಕೆ’ ತೆಗೆದುಕೊಂಡು ಉತ್ತರಪ್ರದೇಶಕ್ಕೆ ತಲುಪಿದ್ದೇವೆ. ಈಗ ಪ್ರಭು ಶ್ರೀ ರಾಮಕೂಡ ಇಲ್ಲಿ ತಲಪುವರು’, ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.

೩. ಕಾಂಗ್ರೆಸ್ಸಿನ ‘ಭಾರತ ಜೋಡೋ’ ಯಾತ್ರೆಯ ನೇತೃತ್ವವನ್ನು ರಾಹುಲ ಗಾಂಧಿ ಮಾಡುತ್ತಿದ್ದಾರೆ. ಸಪ್ಟೆಂಬರ್ ೭ ರಂದು ಕನ್ಯಾಕುಮಾರಿಯಿಂದ ಆರಂಭವಾಗಿರುವ ಯಾತ್ರೆ ಇಲ್ಲಿಯವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣಾ ಮತ್ತು ದೆಹಲಿ ಈ ರಾಜ್ಯಗಳಿಂದ ಮುಂದೆ ನಡೆದಿದೆ. ಸುಮಾರು ಎಂಟು ದಿನಗಳ ವಿಶ್ರಾಂತಿಯ ನಂತರ ಈ ಯಾತ್ರೆ ಉತ್ತರಪ್ರದೇಶ, ಹರಿಯಾಣ, ಪಂಜಾಬ ಮತ್ತು ಕೊನೆಗೆ ಜಮ್ಮು ಕಾಶ್ಮೀರದ ಕಡೆಗೆ ಹೋಗಲಿದೆ.

ಸಂಪಾದಕೀಯ ನಿಲುವು

ಸಲ್ಮಾನ್ ಖುರ್ಷಿದ್ ಇವರಿಗೆ ರಾಹುಲ ಗಾಂಧಿಯವರನ್ನು ವೈಭವೀಕರಿಸುವುದಕ್ಕಾಗಿ ಹಿಂದೂಗಳ ದೇವತೆಯ ಆಧಾರ ಏಕೆ ತೆಗೆದುಕೊಳ್ಳಬೇಕಾಗುತ್ತದೆ ? ಅವರು ರಾಹುಲ ಗಾಂಧಿಯ ತುಲನೆಯನ್ನು ತಮ್ಮ ಪಂಥದಲ್ಲಿನ ಶ್ರದ್ಧಾಸ್ಥಾನದ ಜೊತೆ ಏಕೆ ಮಾಡುವುದಿಲ್ಲ? ‘ಹಾಗೆ ಮಾಡಿದರೆ ಏನಾಗಬಹುದು ?’, ಇದು ಅವರಿಗೆ ಸಂಪೂರ್ಣವಾಗಿ ತಿಳಿದಿರುವುದರಿಂದ ಅವರು ಹಾಗೆ ಮಾಡುವುದನ್ನು ತಪ್ಪಿಸುತ್ತಾರೆ !

‘ಶ್ರೀರಾಮ ಕಾಲ್ಪನಿಕ’ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಬರೆದು ಕೊಡುವ ಕಾಂಗ್ರೆಸ್ಸಿನವರಿಗೆ ಶ್ರೀರಾಮನ ಹೆಸರು ಉಪಯೋಗಿಸುವ ಯಾವ ಅಧಿಕಾರವಿದೆ ?