ಎಂದಾದರೂ ಮುಸಲ್ಮಾನನು ‘ಸಾಂತಾ ಕ್ಲಾಸ್’ ಆಗಿರುವುದು ನೋಡಿದ್ದೀರಾ ? – ಪ್ರಾ. ಸುಭಾಷ್ ವೆಲಿಂಗಕರ, ‘ಭಾರತ ಮಾತಾ ಕಿ ಜೈ’ ಸಂಘಟನೆ, ಗೋವಾ

ಪಣಜಿ (ಗೋವಾ) – ‘ನಾವು ಆಚರಣೆಯಿಂದ ಹಿಂದೂ ಆಗದೆ, ಸೆಕ್ಯುಲರ್ ಮತ್ತು ಆಧುನಿಕವಾಗಿದ್ದೇವೆ, ಇದನ್ನು ತೋರಿಸುವುದಕ್ಕಾಗಿ ಟಿಕಲಿ, ಬಳೆ, ಮಂಗಳಸೂತ್ರ ಇದಕ್ಕೆ ಪರ್ಯಾಯವಾಗಿ ಮನೆಯಲ್ಲಿ ‘ಕ್ರಿಸ್ಮಸ್ ಟ್ರೀ’ ಇಡುವ ‘ಫ್ಯಾಷನ್’ ಹೆಚ್ಚುತ್ತಿದೆ. ಇದು ಆಂಗ್ಲ ಶಿಕ್ಷಣದ ಸ್ವಾಭಾವಿಕ ಪರಿಣಾಮವಾಗಿದೆ. ಎಂದಾದರೂ ಮುಸಲ್ಮಾನನ್ನು ‘ಸಾಂತಾ ಕ್ಲಾಸ್’ ಆಗಿರುವುದು ನೋಡಿದ್ದೀರಾ ? ಎಂದು ಇಲ್ಲ ! ಇಂತಹ ನಿಷ್ಪ್ರಯೋಜಕ ‘ಸೆಕ್ಯುಲಾರ್’ ಹುಳ ಕೇವಲ ಹಿಂದುಗಳಿಗೆ ಕಚ್ಚಿರುವ ಹಾಗೆ ಕಾಣುತ್ತದೆ’, ಎಂದು ಗೋವಾದಲ್ಲಿನ ‘ಭಾರತ ಮಾತಾ ಕಿ ಜೈ’ ಸಂಘಟನೆಯ ಪ್ರಾ. ಸುಭಾಷ್ ವೆಲಿಂಗಕರ ಇವರು ಟ್ವೀಟ್ ಮಾಡಿದ್ದಾರೆ.