ವಿದ್ಯಾರ್ಥಿನಿಯನ್ನು ಉತ್ತೀರ್ಣಗೊಳಿಸುವುದಕ್ಕಾಗಿ ಶಾರೀರಿಕ ಸಂಬಂಧ ಬೆಳೆಸಲು ಅನಿವಾರ್ಯಗೊಳಿಸುವ ಪ್ರಾಧ್ಯಾಪಕನ ಬಂಧನ !

ಇಂತಹ ಪ್ರಾಧ್ಯಾಪಕರೆಂದರೆ ಶಿಕ್ಷಣ ಕ್ಷೇತ್ರಕ್ಕೆ ಅಂಟಿರುವ ಕಳಂಕ ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !

ಕೋಟ (ರಾಜಸ್ಥಾನ) – ರಾಜಸ್ಥಾನ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಕಲಿಯುತ್ತಿರುವ ಒಬ್ಬ ಬಿ.ಟೆಕ್ ವಿದ್ಯಾರ್ಥಿನಿ ., ಗಿರೀಶ್ ಪರಮಾರ ಎಂಬ ಪ್ರಾಧ್ಯಾಪಕನು ಪರೀಕ್ಷೆಯಲ್ಲಿ ಒಳ್ಳೆಯ ಅಂಕದಿಂದ ಉತ್ತೀರ್ಣ ಗೊಳಿಸಲು ಶಾರೀರಿಕ ಸಂಬಂಧ ಇರಿಸಲು ಅನಿವಾರ್ಯಗೊಳಿಸಿದನು ಎಂದು ಆರೋಪಿಸಿದ್ದಾಳೆ.ಈ ಪ್ರಾಧ್ಯಾಪಕನು ಆಕೆಯನ್ನು ಮೊದಲ ಅಂತಿಮ ವರ್ಷದ ಅರ್ಧ ವಾರ್ಷಿಕ (ಸೆಮಿಸ್ಟರ್) ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿದನು. ಅದರ ನಂತರ ವಿದ್ಯಾರ್ಥಿನಿಗಯನ್ನು ಉತ್ತೀರ್ಣಗೊಳಿಸಲು ಶಾರೀರಿಕ ಸಂಬಂಧ ಇರಿಸುವಂತೆ ಒತ್ತಾಯಿಸಿದನು. ಅರ್ಪಿತ್ ಅಗ್ರವಾಲ ಹೆಸರಿನ ವಿದ್ಯಾರ್ಥಿ ಪ್ರಾಧ್ಯಾಪಕನ ಪ್ರಸ್ತಾಪವನ್ನು ಸಂತ್ರಸ್ತ ವಿದ್ಯಾರ್ಥಿನಿಗೆ ತಲುಪಿಸುತ್ತಿದ್ದನು. ಸಂತ್ರಸ್ತ ವಿದ್ಯಾರ್ಥಿನಿ ಎಲ್ಲ ವಿಷಯವನ್ನು ತನ್ನ ಕುಟುಂಬದವರಿಗೆ ಹೇಳಿದಳು. ಅದರ ನಂತರ ಪ್ರಾಧ್ಯಾಪಕ ಗಿರೀಶ ಪರಮಾರ ಮತ್ತು ಅರ್ಪಿತ್ ಅಗರ್ವಾಲ ಇವರ ವಿರುದ್ಧ ದೂರು ದಾಖಲಿಸಿ ಪೊಲೀಸರು ಅವರನ್ನು ಬಂಧಿಸಿದರು.

೧. ಪ್ರಾಧ್ಯಾಪಕನು ಅನೇಕ ವಿದ್ಯಾರ್ಥಿನಿಯರನ್ನು ಗುರಿ ಮಾಡಿರುವುದು ಬೆಳಕಿಗೆ ಬಂದಿದೆ. ಅರ್ಪಿತನ ಮೂಲಕ ಈ ಪ್ರಾಧ್ಯಾಪಕನು ಇತರ ಕೆಲವು ವಿದ್ಯಾರ್ಥಿನಿಯನ್ನು ಪರೀಕ್ಷೆಯಲ್ಲಿ ಉತ್ತೀರ್ಣ ಗೊಳಿಸುವ ಆಶ್ವಾಸನೆ ನೀಡಿ ಅವರ ಮೇಲೆ ಶಾರೀರಿಕ ಸಂಬಂಧಕ್ಕಾಗಿ ಒತ್ತಡ ಹೇರಿರುವುದು ತಿಳಿದು ಬಂದಿದೆ. ಇನ್ನೊಬ್ಬ ವಿದ್ಯಾರ್ಥಿನಿ ಕೂಡ ಈ ಪ್ರಾಧ್ಯಾಪಕನ ವಿರುದ್ಧ ದೂರು ದಾಖಲಿಸಿದ್ದಾಳೆ.

೨. ೪೭ ವಯಸ್ಸಿನ ಪ್ರಾಧ್ಯಾಪಕ ಗಿರೀಶ್ ಪರಮಾರ ಐ.ಐ.ಟಿ. ಪದವಿಧರನಿದ್ದು ಚಿನ್ನದ ಪದಕ ಪಡೆದಿದ್ದಾನೆ. (ಉಚ್ಚ ಶಿಕ್ಷಣ ಇರಲಿ ಅಥವಾ ಕಡಿಮೆ ಶಿಕ್ಷಣ ಇದ್ದರು ನೀತಿ ಕಲಿಸದೇ ಇರುವುದರ, ಪರಿಣಾಮ ಇದೆ ಎನ್ನುವುದು, ಇದರಿಂದ ಸ್ಪಷ್ಟವಾಗುತ್ತದೆ ! – ಸಂಪಾದಕರು ) ವಿಶ್ವವಿದ್ಯಾಲಯದ ದಿಂದ ಈ ಹಿಂದೆ ವಿದ್ಯಾರ್ಥಿನಿಯರು ಪ್ರಾಧ್ಯಾಪಕರ ವಿರುದ್ಧ ನೀಡಿರುವ ದೂರುಗಳು ತಿರಸ್ಕರಿಸಲಾಗಿದೆಯೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.