ಗಾಝಿಯಾಬಾದ ( ಉತ್ತರಪ್ರದೇಶ) ಇಲ್ಲಿಯ ಮಹಂತ ಮಾರ್ತಾಂಡ ಪಶುಪತಿ ಇವರಿಗೆ ಶಿರಶ್ಚೇಧದ ಬೆದರಿಕೆ

ಗಾಝೀಯಾಬಾದ (ಉತ್ತರ ಪ್ರದೇಶ) – ಇಲ್ಲಿಯ ಮಹಂತ ಮಾರ್ತಂಡ ಪಶುಪತಿ ಇವರಿಗೆ ಬಂಗಾಲದ ಸಿಲಿಗುಡಿಯಿಂದ ಮಂಜುರ ಅಹಮದ್ ಎಂಬ ವ್ಯಕ್ತಿಯು `ನೀವು ಹಿಂದುತ್ವದ ಬಗ್ಗೆ ಬಹಳ ಮಾತನಾಡುತ್ತೀರಿ. ಇಸ್ಲಾಂ ಸರ್ವಶ್ರೇಷ್ಠವಾಗಿದೆ ಮತ್ತು ಇರಲಿದೆ. ಇನ್ಷಾ ಅಲ್ಲಹ. ನಿಮ್ಮನ್ನು ಮುಗಿಸ ಬೇಕಾಗಬಹುದು, ನಿಮ್ಮ ಶಿರಶ್ಚೇಧ ಮಾಡಬೇಕಾಗುತ್ತದೆ. ಮೋದಿ-ಯೋಗಿ ಕೂಡ ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ’, ಎಂದು ಪತ್ರದ ಮೂಲಕ ಬೆದರಿಕೆ ನೀಡಿದ್ದಾನೆ. ಮಹಾಂತರು ಸಾಹಿಬಾಬಾದ ಪೊಲೀಸರಿಗೆ ಮಾಹಿತಿ ನೀಡಿ ಬೆದರಿಕೆ ನೀಡುವವರನ್ನು ಬಂಧಿಸಲು ಆಗ್ರಹಿಸಿದ್ದಾರೆ. ಎರಡು ತಿಂಗಳಲ್ಲಿ ಮಹಂತರಿಗೆ ಸಿಕ್ಕಿರುವ ಇದು ಐದನೇ ಬೆದರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ ೧೭, ೨೦೨೨ ರಂದು ಮಹಂತ ಮಾರ್ತಾಂಡ ಇವರಿಗೆ ಪತ್ರ ಕಳಿಸಿ ಶಿರಶ್ಚೇಧದ ಬೆದರಿಕೆ ನೀಡಲಾಗಿತ್ತು. ಮಾರ್ತಾಂಡ ಪಶುಪತಿ ಇವರು ನೇಪಾಳದ ಪಶುಪತಿ ಅಖಾಡದ ಮಹಂತರಾಗಿದ್ದಾರೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಇವರ ಸರಕಾರ ಇರುವಾಗ ಮಹಂತರಿಗೆ ಈ ರೀತಿಯ ಬೆದರಿಕೆ ಸಿಗುವುದು ಅಪೇಕ್ಷಿತವಿಲ್ಲ. ಈ ಪ್ರಕರಣದಲ್ಲಿ ಸರಕಾರ ತಪ್ಪಿತಸ್ಥರ ಮೇಲೆ ಕಠೀಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !