ಭಾರತದಲ್ಲಿನ ವಾಸ್ತವ ಎಂದರೆ ಭ್ರಷ್ಟಾಚಾರ !

`ಇನ್ಫೋಸಿಸ’ ಕಂಪನಿಯ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಇವರ ಸ್ಪಷ್ಟ ಅಭಿಪ್ರಾಯ !

`ಇನ್ಫೋಸಿಸ’ ಕಂಪನಿಯ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ

ಅಮರಾವತಿ (ಆಂಧ್ರಪ್ರದೇಶ) – ಭಾರತದಲ್ಲಿನ ವಾಸ್ತವ ಎಂದರೆ `ಭ್ರಷ್ಟಾಚಾರ, ಹಾಳಾದ ರಸ್ತೆ, ಮಾಲಿನ್ಯ ಮತ್ತು ಹೆಚ್ಚಿನ ಸಮಯದಲ್ಲಿ ಅಧಿಕಾರದ ಆಭಾವ’, ಇದಾಗಿದೆ; ಆದರೆ ಸಿಂಗಪುರದಲ್ಲಿ ವಾಸ್ತವ ಎಂದರೆ ಸ್ವಚ್ಛವಾದ ರಸ್ತೆ, ಸ್ವಚ್ಛವಾದ ವಾತಾವರಣ ಮತ್ತು ಜನರ ಬಳಿ ಇರುವ ಅಧಿಕಾರ, ಎಂದು `ಇಂಫೋಸಿಸ್’ ಕಂಪನಿಯ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು ಸ್ಪಷ್ಟವಾಗಿ ಪ್ರತಿಪಾದಿಸಿದರು. ಅವರು ಆಂಧ್ರಪ್ರದೇಶದಲ್ಲಿನ ವಿಝಿಯಾನಗರಮ್ ಜಿಲ್ಲೆಯಲ್ಲಿನ ರಾಜಮ ಪ್ರದೇಶದಲ್ಲಿರುವ `ಜಿ.ಎಂ.ಆರ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಈ ಸಂಸ್ಥೆಯಿಂದ ಆಯೋಜಿಸಲಾಗ ಚರ್ಚೆಯಲ್ಲಿ ಮಾತನಾಡುತ್ತಿದ್ದರು.

೧. ನಾರಾಯಣ ಮೂರ್ತಿ ಮಾತು ಮುಂದುವರಿಸಿ, ಯುವಕರು ಸಮಾಜದಲ್ಲಿ ಬದಲಾವಣೆ ಮಾಡುವ ದೃಷ್ಟಿಯಿಂದ ತಮ್ಮ ಮಾನಸಿಕತೆ ಸಿದ್ಧಗೊಳಿಸಬೇಕು. ತಮ್ಮ ಸ್ವಂತದ ಹಿತಕ್ಕಿಂತ ಮೊದಲು ಜನರ, ಸಮಾಜದ ಮತ್ತು ದೇಶದ ಹಿತ ಎದುರಿಗಿಟ್ಟುಕೊಳ್ಳಬೇಕು.

೨. ನಾವೆಲ್ಲರೂ ಯಾವುದೇ ಕೊರತೆಯ ಕಡೆಗೆ `ಬದಲಾವಣೆಯ ಒಂದು ಅವಕಾಶ’ ಎಂದು ನೋಡಬೇಕು. ಬೇರೆ ಯಾರಾದರೂ ನೇತೃತ್ವ ವಹಿಸುವ ದಾರಿ ನೋಡುವ ಬದಲು ನೀವೆಲ್ಲರೂ ಸ್ವತಃ ನೇತೃತ್ವ ವಹಿಸುವುದಕ್ಕಾಗಿ ಮುಂದೆ ಬರುವ ಅವಶ್ಯಕತೆ ಇದೆ ಎಂದು ನಾರಾಯಣಮೂರ್ತಿ ಇವರು ಕರೆ ನೀಡಿದರು.

ಸಂಪಾದಕೀಯ ನಿಲುವು

ಈ ವಾಸ್ತವ ಭಾರತೀಯರು ಸ್ವೀಕರಿಸಿರುವುದರಿಂದ `ಅದು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ’, ಅದನ್ನು ಕೂಡ ಸ್ವೀಕರಿಸಿದ್ದಾರೆ. ಈ ಸೋತಿರುವ ಮಾನಸಿಕತೆ ಬದಲಾಯಿಸುವುದಕ್ಕಾಗಿ ಜನರೇ ಅದರ ವಿರುದ್ಧ ಸಂಘಟಿತರಾಗುವುದು ಅವಶ್ಯಕವಾಗಿದೆ !