ಶಾಹರೂಖ ಖಾನರು ಇಂತಹದೇ ಚಲನಚಿತ್ರವನ್ನು ಮಹಮ್ಮದ ಪೈಗಂಬರರ ಮೇಲೆ ತಯಾರಿಸಿ ತೋರಿಸಬೇಕು.

ಮಧ್ಯಪ್ರದೇಶದ ವಿಧಾನಸಭಾಧ್ಯಕ್ಷ ಗಿರೀಶ ಗೌತಮ ಇವರ ಆಹ್ವಾನ

ಮಧ್ಯಪ್ರದೇಶದ ವಿಧಾನಸಭಾಧ್ಯಕ್ಷ ಗಿರೀಶ ಗೌತಮ

ಭೋಪಾಲ(ಮಧ್ಯಪ್ರದೇಶ)– ಶಾಹರೂಖ ಖಾನರು ತಮ್ಮ ಮಗಳೊಂದಿಗೆ `ಪಠಾಣ’ ಚಲನಚಿತ್ರವನ್ನು ನೋಡಬೇಕು ಮತ್ತು ಆ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡುತ್ತ ಸಂಪೂರ್ಣ ಜಗತ್ತಿಗೆ ತಿಳಿಸಬೇಕು. ಶಾಹರೂಖ ಖಾನ ಇಂತಹುದೇ ಚಲನಚಿತ್ರವನ್ನು ಮಹಮ್ಮದ ಪೈಗಂಬರರ ಮೇಲೆ ತಯಾರಿಸಿ ಅದನ್ನು ಪ್ರಸಾರ ಮಾಡಿ ತೋರಿಸಬೇಕು ಎಂದು ನಾನು ಅವರಿಗೆ ಕರೆ ನೀಡುತ್ತೇನೆ ಎಂದು ಮಧ್ಯಪ್ರದೇಶದ ವಿಧಾನಸಭೆಯ ಅಧ್ಯಕ್ಷರಾದ ಗಿರೀಶ ಗೌತಮ ಇವರು ಹೇಳಿಕೆ ನೀಡಿದ್ದಾರೆ. ಈ ಹಿಂದೆ ರಾಜ್ಯದ ಗೃಹಮಂತ್ರಿ ನರೋತ್ತಮ ಮಿಶ್ರಾ ಇವರೂ ಕೂಡ `ಸದರಿ ಚಲನಚಿತ್ರದಲ್ಲಿ ಬದಲಾವಣೆ ಮಾಡದಿದ್ದರೆ, ಅದನ್ನು ನಾವು ನಿರ್ಬಂಧಿಸುತ್ತೇವೆ’, ಎಂದು ಎಚ್ಚರಿಕೆ ನೀಡಿದ್ದರು.

ಕಾಂಗ್ರೆಸ್ ಮುಖಂಡರಿಂದಲೂ ಕೂಡ ಪಠಾಣ ಚಲನಚಿತ್ರಕ್ಕೆ ವಿರೋಧ

ವಿರೋಧ ಪಕ್ಷದ ನಾಯಕ ಡಾ. ಗೋವಿಂದ ಸಿಂಹ ಇವರಲ್ಲದೇ, ಕೇಂದ್ರೀಯ ಮಂತ್ರಿ ಸುರೇಶ ಪಚೌರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರೂ ಪಠಾಣ ಚಲನಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಚೌರಿಯವರು ಮಾತನಾಡುತ್ತಾ, ಈ ಅಂಶ `ಪಠಾಣ’ ಚಲನಚಿತ್ರಕ್ಕೆ ಸಂಬಂಧಿಸಿಲ್ಲ. ಆದರೆ ಬಟ್ಟೆಗೆ ಸಂಬಂಧಿಸಿದೆ. ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಮಹಿಳೆಯು ಇಂತಹ ಬಟ್ಟೆಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಂಗ ಪ್ರದರ್ಶನ ಮಾಡುವುದು ಯೋಗ್ಯವಲ್ಲ. ಅವಳು ಹಿಂದೂ ಅಥವಾ ಮುಸಲ್ಮಾನ ಅಥವಾ ಇತರೆ ಯಾವುದೇ ಧರ್ಮದವಳಾಗಿರಲಿ ಎಂದು ಹೇಳಿದ್ದಾರೆ