ಮಧ್ಯಪ್ರದೇಶದಲ್ಲಿ ಶಾಹಾರುಖ್ ಖಾನ್ ಇವರ ಚಲನಚಿತ್ರದ ಚಿತ್ರೀಕರಣ ಹನುಮಾನ್ ಚಾಲೀಸಾ ಪಠಣೆ ಮಾಡಿ ತಡೆಯಲಾಯಿತು !

ಜಬಲಪುರ (ಮಧ್ಯಪ್ರದೇಶ) – `ಪಠಾಣ’ ಚಲನಚಿತ್ರದಲ್ಲಿ ಕೇಸರಿ ಬಣ್ಣಕ್ಕೆ ಅಪಮಾನ ಆಗಿರುವುದರಿಂದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇವರು ನಾಯಕ ಶಾಹರುಖ ಖಾನ್ ಇವರ `ಡಂಕಿ’ ಈ ಮುಂಬರುವ ಚಲನಚಿತ್ರವನ್ನು ಬೇಡಘಾಟ್ ಈ ಪರಿಸರದಲ್ಲಿ ನಡೆಯುತ್ತಿರುವ ಚಿತ್ರೀಕರಣದ ಸಮಯದಲ್ಲಿ ಹನುಮಾನ ಚಾಲೀಸಾದ ಪಠಣೆ ಮಾಡಿದರು. ಆದ್ದರಿಂದ ಚಿತ್ರೀಕರಣ ನಿಲ್ಲಿಸಲಾಯಿತು. ಈ ಚಿತ್ರೀಕರಣದ ಸಮಯದಲ್ಲಿ ಶಾಹರುಖ ಖಾನ್ ಅಥವಾ ಇತರ ಯಾವುದೇ ದೊಡ್ಡ ಕಲಾವಿದ ಉಪಸ್ಥಿತರಿರಲಿಲ್ಲ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಈ ಚಿತ್ರೀಕರಣದ ವಿರುದ್ಧ ಇಲ್ಲಿಯ ತಹಶೀಲದಾರರಿಗೆ ಮನವಿ ನೀಡಿದ್ದರು, ಅದರಲ್ಲಿ, ಯಾರು ಕೇಸರಿ ಬಣ್ಣಕ್ಕೆ ಅವಮಾನ ಮಾಡುತ್ತಾರೆ ಅಂತಹವರ ಚಲನ ಚಿತ್ರದ ಚಿತ್ರೀಕರಣ ನರ್ಮದೇಯ ತಪೋ ಭೂಮಿಯಲ್ಲಿ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ.

ಬಿಹಾರದಲ್ಲಿ ಶಾಹರುಖ್ ಖಾನ್, ದೀಪಿಕಾ ಪಡುಕೋಣೆ ಮುಂತಾದವರ ವಿರುದ್ಧ ದೂರ ದಾಖಲು.

ಬಿಹಾರದಲ್ಲಿ ನ್ಯಾಯವಾದಿ ಸುಧೀರ ಓಜಾ ಇವರು ಮುಜಫ್ಫರಪುರದ ಮುಖ್ಯ ನ್ಯಾಯದಂಡಾಧಿಕಾರಿ ನ್ಯಾಯಾಲಯದಲ್ಲಿ `ಪಠಾಣ’ ಚಲನಚಿತ್ರದ ನಿರ್ಮಾಪಕ ಆದಿತ್ಯ ಚೋಪ್ರಾ, ನಾಯಕ ಶಾಹರುಖ್ ಖಾನ್, ನಾಯಕಿ ದೀಪಿಕಾ ಪಡುಕೋಣೆ ಸಹಿತ ೫ ಜನರ ವಿರುದ್ಧ ದೂರ ದಾಖಲಿಸಲಾಗಿದೆ. ಧಾರ್ಮಿಕ ಭಾವನೆಗೆ ದಕ್ಕೆ ತರುವುದು ಮತ್ತು ಆಶ್ಲೀಲತೆ ಹರಡಿಸುವುದು, ಇದಕ್ಕಾಗಿ ದೂರು ನೀಡಲಾಗಿದೆ. ನ್ಯಾಯಾಲಯದಲ್ಲಿ ದೂರು ಸ್ವೀಕರಿಸಿ ಅದರ ಬಗ್ಗೆ ಜನವರಿ ೩, ೨೦೨೩ ರಂದು ವಿಚಾರಣೆ ನಡೆಯುವುದೆಂದು ಹೇಳಲಾಗಿದೆ. ನ್ಯಾಯವಾದಿ ಓಜಾ ಇವರು, ಪಠಾಣ ಚಲನಚಿತ್ರದಲ್ಲಿನ ಬೇಶರಮ ರಂಗ ಹಾಡಿನಲ್ಲಿ ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಗುರಿ ಮಾಡಲಾಗಿದೆ, ಎಂದು ಹೇಳಿದರು.