ಮುಝಪ್ಪರಪೂರ- ಇಲ್ಲಿ ಪಾಕಿಸ್ತಾನದ’ಆಯ್.ಎಸ್. ಆಯ್. ‘ಗುಪ್ತಚರ ಸಂಸ್ಥೆ ಯ ಒಬ್ಬ ಗೂಢಚಾರಿಣಿ ರಕ್ಷಣಾ ಸಚಿವಾಲಯ ದ ಒಬ್ಬ ಬೆರಳಚ್ಚು ಗಾರನನ್ನು ತನ್ನ ಪ್ರೇಮದ ಜಾಲದಲ್ಲಿ ಸೆಳೆದು ಕೊಂಡು, ಅವನ ಮೂಲಕ ಸಚಿವಾಲಯಕ್ಕೆ ಸಂಬಂಧಿಸಿದ ಮಹತ್ವದ ಕಾಗದ ಪತ್ರ ಗಳನ್ನು ‘ಆಯ್.ಎಸ್‌ಆಯ್.’ಗೆ ಕಳುಹಿಸಿ ದಳು. ಈ ಪ್ರಕರಣದಲ್ಲಿ ಪೊಲೀಸರು ಸರಕಾರಿ ಬೆರಳಚ್ಚು ಗಾರ ರವಿ ಚೌರಸಿಯಾನನ್ನು ಬಂಧಿಸಿದ್ದಾರೆ.
ಫೇಸ್ಬುಕ್ ನಲ್ಲಿ ರವಿ ಚೌರಸಿಯಾನನ್ನು ಶಾನವಿ ಶರ್ಮಾ ಹೆಸರಿನ ಯುವತಿ ಯೊಂದಿಗೆ ಪರಿಚಯವಾಯಿತು. ಶಾನವಿ ಅವನನ್ನು ಪ್ರೀತಿಯ ಜಾಲದಲ್ಲಿ ಕೆಡವಿದಳು. ತದನಂತರ ರವಿ ಹಣದಾಸೆಗೆ ಅವಳಿಗೆ ಸಂರಕ್ಷಣೆ ಗೆ ಸಂಬಂಧಿಸಿದ ಗೌಪ್ಯತೆ ಯ ಮಾಹಿತಿಯನ್ನು ಪೂರೈಸಿದನು. ತದನಂತರ ಅವಳು ಈ ಮಾಹಿತಿಯನ್ನು ‘ಆಯ್.ಎಸ್.ಆಯ್.ಗೆ ಕಳುಹಿಸಿದಳು. ಹಿರಿಯ ಪೊಲೀಸ್ ಅಧೀಕ್ಷಕ ರಾದ ಜಯಂತ ಕಾಂತ ಇವರು ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯದ ಮಾಹಿತಿ ನೀಡುವಾಗ ಮಾತನಾಡುತ್ತಾ ರವಿ ಚೌರಸಿಯಾ ಅನೇಕ ಗೌಪ್ಯ ಕಾಗದ ಪತ್ರಗಳನ್ನು ‘ಆಯ್.ಎಸ್. ಆಯ್.’ಗೆ ಕಳುಹಿಸಿ ದ್ದಾನೆ. ಈ ವಿಷಯ ದಲ್ಲಿ ಸಿಕ್ಕಿರುವ ದಾಖಲೆ ಗಳ ಆಧಾರದ ಲ್ಲಿ ರವಿ ಚೌರಸಿಯಾನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವು
|