ವಿಷಪೂರಿತ ಮದ್ಯ ಸೇವಿಸಿ ಸಾಯುವವರಿಗೆ ಒಂದು ರೂಪಾಯಿ ಪರಿಹಾರವನ್ನೂ ನೀಡುವುದಿಲ್ಲ ! – ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಸ್ಪಷ್ಟ ಹೇಳಿಕೆ

ಮುಖ್ಯಮಂತ್ರಿ ನಿತೀಶ ಕುಮಾರ

ಪಾಟಲಿಪುತ್ರ (ಬಿಹಾರ) – ಬಿಹಾರದ ಛಪರಾ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವಿಸಿ ಇಲ್ಲಿಯವೆರೆಗೆ 59 ಜನರು ಸಾವನ್ನಪ್ಪಿದ ನಂತರ, ಇದೀಗ ಸಿವಾನ್‌ನಲ್ಲಿ 5 ಜನರು ಮತ್ತು ಬೇಗುಸರಾಯನಲ್ಲಿ ಒಬ್ಬರು ವಿಷಪೂರಿತ ಮದ್ಯದಿಂದ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ವಿಧಾನಸಭೆಯಲ್ಲಿ ಸತತ ಮೂರನೇ ದಿನವೂ ಕೋಲಾಹಲ ಉಂಟಾಯಿತು. ವಿರೋಧ ಪಕ್ಷಗಳು ಸರಕಾರ ವಿಸರ್ಜನೆಗೆ ಒತ್ತಾಯಿಸಿದವು. ವಿರೋಧಿ ಪಕ್ಷದ ನಾಯಕ ವಿಜಯ ಸಿನ್ಹಾ ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ನಿತೀಶ ಕುಮಾರ ಇವರು, ‘ವಿಷಪೂರಿತ ಮದ್ಯಸೇವೆನೆಯಿಂದ ಅವರು ಸಾವನ್ನಪ್ಪಿದ್ದಾರೆ ಅಂದ ಮೇಲೆ ಸರಕಾರ ಅವರಿಗೆ ಏಕೆ ಪರಿಹಾರ ನೀಡಬೇಕು ? ಸರಕಾರ ಒಂದು ಪೈಸೆಯನ್ನೂ ಕೊಡುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

ಸಂಪಾದಕೀಯ ನಿಲುವು

ನಿತೀಶ ಕುಮಾರ ತೆಗೆದುಕೊಂಡಿರುವ ನಿರ್ಧಾರ ಸೂಕ್ತವಾಗಿದೆ. ಇದರೊಂದಿಗೆ ಕಳೆದ 6 ವರ್ಷಗಳಿಂದ ರಾಜ್ಯದಲ್ಲಿ ಮದ್ಯ ನಿಷೇಧ ಇರುವಾಗ ರಾಜ್ಯದಲ್ಲಿ ಮದ್ಯ ಸಿಗುವುದಾದರೂ ಹೇಗೆ ?, ಈ ವಿಷಯದಲ್ಲಿ ಅವರು ವಿಫಲರಾಗಲು ಹಾಗೂ ವಿಫಲರಾಗುತ್ತಲೇ ಇರಲು ಕಾರಣವೇನು?, ಅಲ್ಲದೆ ಇನ್ನು ಮುಂದೆ ಇದನ್ನು ತಡೆಯಲು ಅವರು ಏನು ಮಾಡಲಿದ್ದಾರೆ?, ಇದನ್ನೂ ಅವರು ಹೇಳಬೇಕು!