ಮಧ್ಯಪ್ರದೇಶದಲ್ಲಿನ ಮುಸಲ್ಮಾನ ಸಂಘಟನೆಗಳಿಂದಲೂ ‘ಪಠಾಣ’ ಚಲನಚಿತ್ರಕ್ಕೆ ವಿರೋಧ !

  • ಚಲನಚಿತ್ರದಲ್ಲಿನ ಕೆಲವು ದೃಶ್ಯಗಳ ಮೇಲೆ ಆಕ್ಷೇಪ

  • ಸಂಪೂರ್ಣ ದೇಶದಲ್ಲಿ ಎಲ್ಲಿಯೂ ಚಲನಚಿತ್ರ ಪ್ರದರ್ಶಿತವಾಗದಂತೆ ತಡೆಯುವುದಾಗಿ ಎಚ್ಚರಿಕೆ

ಭೋಪಾಲ (ಮಧ್ಯಪ್ರದೇಶ) – ’ಪಠಾಣ’ ಚಲನಚಿತ್ರವನ್ನು ಹಿಂದೂಗಳ ಬೆನ್ನಲ್ಲೇ ಈಗ ಮುಸಲ್ಮಾನರೂ ವಿರೊಧಿಸುತ್ತಿದ್ದಾರೆ. ಉಲೆಮಾ ಬೋರ್ಡ ಹಾಗೂ ‘ಆಲ್‌ ಇಂಡಿಯಾ ಮುಸ್ಲಿಂ ತ್ಯೋಹಾರ ಕಮಿಟಿ’ಯು ‘ಪಠಾಣ’ ಚಲನಚಿತ್ರವನ್ನು ಎಲ್ಲಿಯೂ ಪ್ರದರ್ಶನವಾಗಲು ಬಿಡುವುದಿಲ್ಲ’ ಎಂಬ ಎಚ್ಚರಿಕೆಯನ್ನು ನೀಡಿವೆ. ಈ ಚಲನಚಿತ್ರದಲ್ಲಿನ ‘ಬೇಶರ್ಮ ರಂಗ’ ಹಾಡಿನಲ್ಲಿ ನಟಿ ದೀಪಿಕಾ ಪದುಕೋಣರವರು ಭಗವಾ ಬಣ್ಣದ ಅಂತರ್ವಸ್ತ್ರವನ್ನು ಧರಿಸಿದ್ದರಿಂದ ಹಿಂದೂಗಳು ವಿರೋಧಿಸಿದ್ದಾರೆ, ಆದರೆ ಚಲನಚಿತ್ರದಲ್ಲಿನ ಕೆಲವು ದೃಶ್ಯಗಳು ಆಕ್ಷೇಪಾರ್ಹವಾಗಿವೆ ಎಂದು ಮುಸಲ್ಮಾನ ಸಂಘಟನೆಗಳು ಹೇಳಿವೆ.

೧. ಉಲೆಮಾ ಬೋರ್ಡನ ಅಧ್ಯಕ್ಷರಾದ ಸಯ್ಯದ ಅನಸ ಅಲಿಯವರು ಮಾತನಾಡುತ್ತ, ‘ಪಠಾಣ’ ಎಂಬುದು ಮುಸಲ್ಮಾನರಲ್ಲಿನ ಎಲ್ಲಕ್ಕಿಂತ ಸಮ್ಮಾನಿತ ಸಮಾಜವಾಗಿದೆ. ಈ ಚಲನಚಿತ್ರದಲ್ಲಿ ಕೇವಲ ಪಠಾಣರ ಮಾತ್ರವಲ್ಲ ಸಂಪೂರ್ಣ ಮುಸಲ್ಮಾನರ ಅಪಮಾನ ಮಾಡಲಾಗಿದೆ. ಚಲನಚಿತ್ರದ ಹೆಸರು ‘ಪಠಾಣ’ ಆಗಿದ್ದು ಇದರಲ್ಲಿ ಮಹಿಳೆಯು ಅಶ್ಲೀಲ ನೃತ್ಯ ಮಾಡುತ್ತಿರುವುದು ಕಂಡುಬರುತ್ತಿದೆ. ಆದುದರಿಂದ ನಿರ್ಮಾಪಕರು ಪಠಾಣ ಎಂಬ ಹೆಸರನ್ನು ಬದಲಾಯಿಸಬೇಕು ಮತ್ತು ಅನಂತರ ಬೇಕಾದದ್ದನ್ನು ಮಾಡಲಿ. ಹೀಗೆ ಆಗದಿದ್ದರೆ ನಾವು ಕಾನೂನುಬದ್ಧ ಹೋರಾಟ ಮಾಡುವೆವು, ಎಂದು ಹೇಳಿದರು.

೨. ‘ಆಲ್‌ ಇಂಡಿಯಾ ಮುಸ್ಲಿಂ ತ್ಯೋಹಾರ ಕಮಿಟಿ’ಯ ಅಧ್ಯಕ್ಷರಾದ ಪರಿಜಾದಾ ಖುರ್ರಮ ಮಿಯಾಂ ಚಿಶ್ತಿರವರು ಮಾತನಾಡುತ್ತ ಈ ಚಲನಚಿತ್ರದಲ್ಲಿ ಮುಸಲ್ಮಾನರ ಭಾವನೆಗಳನ್ನು ಕೆರಳಿಸಲಾಗಿದೆ. ಶಾಹರೂಖ ಖಾನ ಇರಲಿ ಅಥವಾ ಬೇರೆ ಯಾವುದೇ ಖಾನ್‌ ಇರಲಿ, ನಾವು ಮುಸಲ್ಮಾನ ಧರ್ಮದ ಅಪಮಾನವಾಗಲು ಬಿಡುವುದಿಲ್ಲ, ಎಂದು ಹೇಳಿದರು.