ಮುಂಬರುವ `ಪಠಾಣ’ ಚಲನಚಿತ್ರ ಬಹಿಷ್ಕರಿಸಿರಿ !

ಅಯೋಧ್ಯೆಯಲ್ಲಿನ ಮಹಂತ ರಾಜುದಾಸ ಇವರ ಒತ್ತಾಯ

ಮಹಂತ ರಾಜು ದಾಸ (ಎಡಬದಿಗೆ) ಮತ್ತು ನಟ ಶಾಹರುಖ್ ಖಾನ್(ಬಲಬದಿಗೆ)

ಅಯೋಧ್ಯೆ – ಇಲ್ಲಿಯ ಮಹಂತ ರಾಜುದಾಸ ಇವರು ನಾಯಕ ಶಾಹರುಖ್ ಖಾನ್ ಇವರ ಮುಖ್ಯ ಪಾತ್ರದಲ್ಲಿನ ಮುಂಬರುವ `ಪಠಾಣ’ ಚಲನಚಿತ್ರ ಬಹಿಷ್ಕರಿಸಲು ಒತ್ತಾಯಿಸಿದ್ದಾರೆ. `ಪಠಾಣ’ ಚಲನಚಿತ್ರ ಯಾವ ಯಾವ ಸಿನೆಮಾ ಗೃಹದಲ್ಲಿ ಪ್ರದರ್ಶನಗೊಳ್ಳುತ್ತದೆ ಆ ಸಿನಿಮಾ ಗೃಹಗಳನ್ನು ಸುಡಲಾಗುವುದೆಂದು’ ಎಚ್ಚರಿಕೆ ನೀಡಿದ್ದಾರೆ.

ಮಹಂತ ರಾಜು ದಾಸ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹಿಂದಿ ಚಲನಚಿತ್ರ ನಿರ್ಮಿತಿ ಹಾಗೂ `ಹಾಲಿವುಡ್’ ನಲ್ಲಿ ಸತತವಾಗಿ `ಸನಾತನ ಧರ್ಮ’ದ ಬಗ್ಗೆ ಹೇಗೆ ಕೀಳಾಗಿ ತೋರಿಸಬಹುದು ? ಇದರ ಪ್ರಯತ್ನ ಮಾಡಲಾಗುತ್ತದೆ. ಹಿಂದೂ ದೇವತೆಗಳ ಅವಮಾನ ಹೇಗೆ ಮಾಡಬಹುದು?’, ಇದರ ಅವಕಾಶವನ್ನು ಹುಡುಕುತ್ತಾರೆ. `ಪಠಾಣ’ ಚಲನಚಿತ್ರದಲ್ಲಿ ನಾಯಕಿ ದೀಪಿಕಾ ಪಡುಕೋಣೆ ಇವರು `ಬೇಶರಂ ರಂಗ’ ಈ ಹಾಡಿನಲ್ಲಿ ಕೇಸರಿ ಬಣ್ಣದ ಒಳುಡುಪು ಧರಿಸಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದಕ್ಕಾಗಿ ಇದೆಲ್ಲವೂ ಉದ್ದೇಶಪೂರ್ವಕವಾಗಿ ಮಾಡಲಾಗುತ್ತದೆ. ಜನರು ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾನು ಎಲ್ಲಾ ವೀಕ್ಷಕರಲ್ಲಿ, ಅವರು “ಪಠಾಣ ಚಲನಚಿತ್ರ ಬಹಿಷ್ಕರಿಸಬೇಕು” ಎಂದು ವಿನಂತಿಸುತ್ತೇನೆ. ಹಿಂದೂ ಮಹಾ ಸಭೆಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜರು ಈ ಚಲನಚಿತ್ರವನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ.

ಇಂದೋರಿನಲ್ಲಿ ವೃತ್ತದಲ್ಲಿ ನಾಯಕಿ ದೀಪಿಕಾ ಮತ್ತು ನಾಯಕ ಶಾಹರುಖ್ ಇವರ ಪುತ್ತಳಿಗೆ ಬೆಂಕಿ

ಚಲನಚಿತ್ರದಲ್ಲಿ ಬದಲಾವಣೆ ಮಾಡಲಿಲ್ಲವೆಂದರೆ ರಾಜ್ಯದಲ್ಲಿ ಈ ಚಲನಚಿತ್ರ ಪ್ರಸಾರಗೊಳಿಸ ಬೇಕೆ ಅಥವಾ ಬೇಡ ? ಇದರ ಯೋಚನೆ ಮಾಡುವೆವು ? – ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಯವರ ಎಚ್ಚರಿಕೆ

ಇಂದೂರು (ಮಧ್ಯಪ್ರದೇಶ) – ಮಧ್ಯ ಪ್ರದೇಶದ ಗೃಹ ಸಚಿವರಾದ ನರೋತ್ತಮ ಮಿಶ್ರಾ ಇವರು `ಪಠಾಣ’ ಚಲನಚಿತ್ರದಲ್ಲಿನ `ಬೇಶರಂ ರಂಗ’ ಈ ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಇಲ್ಲಿ ಆಂದೋಲನ ನಡೆಸಲಾಯಿತು. `ವೀರ ಶಿವಾಜಿ’ ಹೆಸರಿನ ಗುಂಪಿನಿಂದ ಆಂದೋಲನದಲ್ಲಿ ನಾಯಕಿ ದೀಪಿಕಾ ಮತ್ತು ನಾಯಕ ಶಾಹರುಖ್ ಖಾನ್ ಇವರ ಪುತ್ತಳಿಯನ್ನು ದಹಿಸಲಾಯಿತು. `ಈ ಚಲನಚಿತ್ರದ ಮೇಲೆ ನಿಷೇಧ ಹೇರಬೇಕೆಂದು’ ಈ ಆಂದೋಲನಕಾರರು ಒತ್ತಾಯಿಸಿದ್ದಾರೆ. ಈ ಚಲನಚಿತ್ರ ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ನರೋತ್ತಮ ಮಿಶ್ರಾ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, `ಪಠಾಣ’ ಚಲನಚಿತ್ರ ದೋಷಪೂರಿತವಾಗಿದ್ದು ವಿಷಾಕಾರಿ ಮಾನಸಿಕತೆಯ ಮೇಲೆ ಆಧಾರಿತವಾಗಿದೆ. `ಬೇಶರಂ ರಂಗ’ ಈ ಹಾಡಿನ ಪದಗಳು ಮತ್ತು ಕಲಾವಿದರು ಧರಿಸಿರುವ ಕೇಸರಿ ಮತ್ತು ಹಸಿರು ಬಟ್ಟೆ ಇದರಲ್ಲಿ ನಿರ್ಮಾಪಕರು ಬದಲಾವಣೆ ಮಾಡುವುದು ಅವಶ್ಯಕವಾಗಿದೆ. ಕೆಲವು ದೃಶ್ಯಗಳಲ್ಲಿ ಬದಲಾವಣೆ ಮಾಡಬೇಕು ಇಲ್ಲವಾದರೆ ಮಧ್ಯಪ್ರದೇಶದಲ್ಲಿ ಈ ಚಲನಚಿತ್ರ ಯಾವ ಸಿನಿಮಾ ಗೃಹದಲ್ಲಿ ಪ್ರದರ್ಶಿತ ಗೊಳಿಸಲು ಬಿಡಬೇಕಾ ಅಥವಾ ಬೇಡವೋ ? ಇದರ ಬಗ್ಗೆ ನಾವು ನಿರ್ಣಯ ತೆಗೆದುಕೊಳ್ಳುವೆವು ಎಂದು ಹೇಳಿದರು.