ಸಿವಾನ್‌ನಲ್ಲಿ ಹಿಂದೂವಿನಂತೆ ನಟಿಸಿ ಒಬ್ಬ ಹಿಂದೂ ಹುಡುಗಿಯನ್ನು ಮದುವೆಯಾದ ಮುಸ್ಲಿಂ ಯುವಕ

ಬಿಹಾರದಲ್ಲಿ ’ಲವ್ ಜಿಹಾದ್’ ಪ್ರಕರಣ ಬಹಿರಂಗ!

ಸಿವಾನ್ (ಬಿಹಾರ) : ಸಿವಾನ್ (ಬಿಹಾರ) ಜಿಲ್ಲೆಯ ನಿರಾಲಾ ನಗರ ಪ್ರದೇಶದಲ್ಲಿ ’ಲವ್ ಜಿಹಾದ್’ನ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ಮುಸ್ಲಿಂ ಯುವಕ ಹಿಂದೂವಿನಂತೆ ನಟಿಸಿ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸೆಳೆದುಕೊಂಡು ನಂತರ ಅವಳನ್ನು ಮದುವೆಯಾದನು. ಆರೋಪಿ ಯುವಕನು ಟ್ಯೂಷನ್ ಸೆಂಟರ್ ನಡೆಸುತ್ತಿದ್ದ. ಪೀಡಿತೆಯು ಆ ಟ್ಯೂಷನ್ ಕೇಂದ್ರಕ್ಕೆ ಕಲಿಯಲು ಹೋಗುತ್ತಿದ್ದಳು. ಪೀಡಿತೆಯು ಟ್ಯೂಷನ್ ಮುಗಿದ ನಂತರ, ಆರೋಪಿ ಯುವಕನು ಅವಳನ್ನು ಟ್ಯೂಷನ್ ಕೇಂದ್ರದಲ್ಲಿ ಉದ್ಯೋಗಿಯಾಗಿ ನೇಮಿಸಿದನು. ಯುವಕನು ತನ್ನ ನಿಜವಾದ ಗುರುತನ್ನು ಮರೆಮಾಚುತ್ತಿದ್ದನು ಮತ್ತು ತಾನು ಸಮೀರ್ ಖನ್ನಾ ಎಂದು ಹೇಳುತ್ತಿದ್ದನು. ಅವನು ಹಿಂದೂವಿನಂತೆ ತನ್ನ ಮಣಿಕಟ್ಟಿಗೆ ಪವಿತ್ರ ದಾರವನ್ನು ಕಟ್ಟಿದ್ದನು. ಅವನು ಪೀಡಿತ ಯುವತಿಯನ್ನು ತನ್ನ ಪ್ರೀತಿಯ ಜಾಲದಲ್ಲಿ ಸಿಲುಕಿಸಿದನು ನಂತರ ಅವಳನ್ನು ಮದುವೆಯಾದನು. ಮದುವೆ ಸಮಾರಂಭ ಮುಗಿದ ನಂತರ ಅವರ ನಿಜವಾದ ಗುರುತನ್ನು ಬಹಿರಂಗವಾಯಿತು. ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಘಟನೆಯನ್ನು ದಾಖಲಿಸಿ ತನಿಖೆಗೆ ಆದೇಶಿಸಿದ್ದಾರೆ.