ಶಾಹರುಖ್ ಖಾನರ ಬರಲಿರುವ ಪಠಾಣ್ ಚಲನಚಿತ್ರದಲ್ಲಿ `ಬೇಶರಮ ರಂಗ’ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ

ಹಿಂದೂ ಮಹಾಸಭೆಯಿಂದ ಟೀಕೆ

ನವದೆಹಲಿ – ನಟ ಶಾಹರಾಖ್ ಖಾನ್ ರ ಬರಲಿರುವ ಪಠಾಣ್ ಚಲನಚಿತ್ರದಲ್ಲಿ ಒಂದು ಹಾಡನ್ನು ಪ್ರದರ್ಶಿಸಲಾಗಿದೆ. ಇದರಲ್ಲಿ ನಾಯಕಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ (ಅಂತರ್ವಸ್ತ್ರ) ಧರಿಸಿದ್ದು,ಈ ಹಾಡಿನ ಪದಗಳು ಬೇಶರಮ ರಂಗ ಎಂದಿದೆ. ಈ ಬಗ್ಗೆ ಹಿಂದೂ ಮಹಾಸಭೆಯು ಆಕ್ಷೇಪ ವ್ಯಕ್ತಪಡಿಸಿದೆ. ಹಿಂದೂ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜರು ‘ಪಠಾಣ್’ ಚಲನಚಿತ್ರದಲ್ಲಿ ಕೇಸರಿ ಬಣ್ಣವನ್ನು ಅಪಮಾನಿಸಲಾಗಿದೆ ಎಂದು ಹೇಳಿದರು.

ಇದಲ್ಲದೆ ಈ ಚಲನಚಿತ್ರದ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇವರು ಕೂಡ ಪರೋಕ್ಷವಾಗಿ ಟೀಕಿಸಿದ್ದಾರೆ. ‘ಬೇಶರಮ ರಂಗ’ ಹಾಡು ಮಕಿಬಾ ಹಾಡಿನಿಂದ ಕದಿಯಲಾಗಿದೆ, ಎಂದು ಕೂಡ ಅನೇಕರು ಹೇಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ್ನು ಉಪಹಾಸ್ಯ ಮಾಡಲಾಗುತ್ತಿದೆ.