‘ಫಾಡೂ : ಅ ಲವ್ ಸ್ಟೋರಿ’ ಎಂಬ ಹೆಸರಿನ ಮರಾಠಿ ವೆಬ್ ಸರಣಿಯಲ್ಲಿ (ಸೀರೀಸ್ ನಲ್ಲಿ) ಶ್ರೀ ಗಣೇಶನ ಅವಮಾನ!

ಶ್ರೀ ಗಣೇಶನಲ್ಲಿ ಪ್ರಾರ್ಥಿಸುವಾಗ ಕಾಬಾ ಮತ್ತು ಚರ್ಚ್ ಗಳ ಉಲ್ಲೇಖವಿರುವ ಮಿರ್ಜಾ ಗಾಲಿಬ್ ಅವರ ಶೇರ್ (ಪದ್ಯದ ಒಂದು ವಿಧ) ಕೇಳಿಸುವ ಹೀನ ಕೃತ್ಯ !

ಮುಂಬೈ – ‘ಸೋನಿ ಲಿವ್’ ನ ‘ಒಟಿಟಿ’ ಪ್ಲಾಟ್‌ಫಾರ್ಮ್‌ನಲ್ಲಿ (‘ಓವರ್ ದಿ ಟಾಪ್’ ನಲ್ಲಿ ವೀಕ್ಷಕರು ಮನರಂಜನಾ ಕಾರ್ಯಕ್ರಮಗಳನ್ನು ನೋಡಬಹುದು.) ‘ಫಾಡೂ : ಅ ಲವ್ ಸ್ಟೋರಿ’ ಎಂಬ ವೆಬ್ ಸರಣಿಯಲ್ಲಿ / ಸೀರೀಸ್ ನಲ್ಲಿ ಗಣೇಶನ ಪೂಜೆಯ ಅವಮಾನ ಮಾಡಲಾಗಿದೆ. ಇದರಲ್ಲಿ ಗಣೇಶನಲ್ಲಿ ಪ್ರಾರ್ಥಿಸುವಾಗ ಮಿರ್ಜಾ ಗಾಲಿಬ್ ಅವರ ಶೇರ್ ಅನ್ನು (ಚಿಕ್ಕ ಕವಿತೆಯನ್ನು) ಕೇಳಿಸಲಾಗುತ್ತಿದೆ ಎಂದು ತೋರಿಸಲಾಗಿದೆ. ಈ ಸರಣಿಯ/ಸೀರೀಸ್ ನ ಮೂಲ ವಿಷಯಕ್ಕೂ ಈ ದೃಶ್ಯಕ್ಕೂ ಯಾವುದೇ ಸಂಬಂಧವಿಲ್ಲ. ಈ ಪ್ರಸಂಗವನ್ನು ಹಾಸ್ಯವನ್ನು ಸೃಷ್ಟಿಸುವುದಕ್ಕಾಗಿ ಸೇರಿಸಿಕೊಳ್ಳಲಾಗಿದೆ. ಅಶ್ವಿನಿ ಅಯ್ಯರ್ ತಿವಾರಿ ಈ ವೆಬ್ ಸೀರೀಸ್‌ನ ನಿರ್ದೇಶಕರಾಗಿದ್ದು, ಸೌಮ್ಯ ಜೋಶಿ ಬರಹಗಾರರಾಗಿದ್ದಾರೆ. ಈ ದೃಶ್ಯದಲ್ಲಿ ನಾಯಕಿಯ ತಂದೆ ಆಕೆಯ ಪರೀಕ್ಷೆಯ ಫಲಿತಾಂಶವನ್ನು ಎದುರು ನೋಡುತ್ತಿರುವಾಗ ಗಣೇಶನಲ್ಲಿ ಪ್ರಾರ್ಥಿಸುತ್ತಾ ಗಾಲಿಬ್‌ನ ಶೇರ್ ಅನ್ನು ಕೇಳೀಸುತ್ತಿದ್ದಾರೆ. ಇದರಲ್ಲಿ ‘ಕಾಬಾ’ (ಮೆಕ್ಕಾದಲ್ಲಿರುವ, ಮುಸಲ್ಮಾನರ ಪವಿತ್ರ ಮಸೀದಿ. ಮುಸಲ್ಮಾನರು ಹಜ್ ಯಾತ್ರೆಗೆ ಇಲ್ಲಿಗೆ ಹೋಗುತ್ತಾರೆ.) ಮತ್ತು ‘ಕಲೀಸ್’ (ಚರ್ಚ್) ಪದಗಳನ್ನು ಉಲ್ಲೇಖವಿದೆ. ಈ ಸಮಯದಲ್ಲಿ ಒಬ್ಬ ವ್ಯಕ್ತಿ ಅವರನ್ನು ನಿಲ್ಲಿಸುತ್ತಾನೆ. ಆಗ ಆ ತಂದೆಯು, ನಾನು ಗಣಪತಿ ಬಾಪ್ಪಾಗೆ ಗಾಲಿಬ್ ನ ಶೇರ್ ಅನ್ನು ಕೇಳಿಸುತ್ತಿದ್ದೇನೆ; ಇದು ಕೂಡ ಒಂದು ರೀತಿಯ ಪೂಜೆಯೇ ಅಲ್ಲವಾ, ಎಂದು ಕೇಳುತ್ತಾರೆ.

ಸಂಪಾದಕೀಯ ನಿಲುವು

ವೆಬ್ ಸರಣಿ (ಸೀರೀಸ್) ಅಥವಾ ಇತರ ಮನರಂಜನಾ ಕಾರ್ಯಕ್ರಮದಲ್ಲಿ ಚರ್ಚ್ ಅಥವಾ ಮಸೀದಿಯಲ್ಲಿ ಹಿಂದೂಗಳ ಧಾರ್ಮಿಕ ಮಂತ್ರವನ್ನು ಹಾಕುವ ಧೈರ್ಯ ಯಾರಾದರೂ ಮಾಡಬಲ್ಲರೇ ?