ಎಂ.ಐ.ಎಂ.ನ ಉತ್ತರ ಪ್ರದೇಶದ ಅಧ್ಯಕ್ಷ ಶೌಕತ ಅಲಿಯವರ ಪ್ರಶ್ನೆ
ಮುರಾದಾಬಾದ (ಉತ್ತರಪ್ರದೇಶ)– ಹಿಂದೂಗಳು ಕಾವಡ ಯಾತ್ರೆ ನಡೆಸಿ ಸಂಚಾರ ಬಂದಿ ಮಾಡಬಹುದಾದರೆ ನಾವು ರಸ್ತೆಯ ಮೇಲೆ ನಮಾಜ್ ಪಠಣೆ ಏಕೆ ಮಾಡಬಾರದು ? ಎಂದು ಎಂ.ಐ.ಎಂ .ನ ಉತ್ತರ ಪ್ರದೇಶದ ಅಧ್ಯಕ್ಷ ಶೌಕತ್ ಅಲಿ ಇವರು ಕೇಳಿರುವ ಪ್ರಶ್ನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ವಿಡಿಯೋ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ನಡೆದಿರುವ ಸ್ಥಳೀಯ ಸ್ವರಾಜ್ಯ ಸಂಸ್ಥೆಯ ಚುನಾವಣೆ ಸಮಯದಲ್ಲಿ ಮುರಾದಾಬಾದ ಇಲ್ಲಿ ನಡೆದಿರುವ ಸಭೆಯ ಸಮಯದಾಗಿದೆ ಎಂದು ಹೇಳಲಾಗುತ್ತಿದೆ.
‘हिंदू सड़कों पर काँवड़ निकाल सकते हैं, लेकिन मुस्लिम नमाज नहीं पढ़ सकते’: हिंदुओं की शादी की ‘रखैल’ से तुलना करने वाले AIMIM नेता शौकत अली ने फिर जहर उगला#ShaukatAli #AIMIMhttps://t.co/T4P18HC4QP
— ऑपइंडिया (@OpIndia_in) December 11, 2022
ಶೌಕತ್ ಅಲಿ ಮಾತು ಮುಂದುವರೆಸಿ , ಕಾವಡ ಯಾತ್ರೆಯಿಂದ ಒಂದು ತಿಂಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದಾಗಿತ್ತು ಮತ್ತು ಪೊಲೀಸ ಅಧಿಕಾರಿಗಳು ಕಾವಡ ಯಾತ್ರಿಕರ ಕಾಲು ಒತ್ತುತ್ತಿದ್ದರು. ನಮಗೆ ಇದರ ಬಗ್ಗೆ ಯಾವುದೇ ಆಕ್ಷೇಪ ಇಲ್ಲ, ಆದರೆ ಯಾವಾಗ ಯಾವುದಾದರು ಮಾಲಿನಲ್ಲಿ (ದೊಡ್ಡ ವ್ಯಾಪಾರಿ ಸಂಕುಲದಲ್ಲಿ) ಅಥವಾ ರಸ್ತೆಯ ಮೇಲೆ ನಮಾಜ್ ಪಠಣೆ ಮಾಡಿದರೆ ಆಕಾಶ ಪಾತಾಳ ಒಂದು ಮಾಡುತ್ತಾರೆ. ಕೆಲವರಿಗಂತೂ ನಮ್ಮ ಅಜಾನದಿಂದ ಕೂಡ (ನಮಾಜ ಪಠಣೆಗಾಗಿ ಕರೆಯವ ಆವಾಹನೆ ) ತೊಂದರೆಯಾಗುತ್ತದೆ. ಒಂದೇ ದೇಶದಲ್ಲಿ ಎರಡು ಕಾನೂನು ಏಕೆ ?(ಈ ದೇಶದಲ್ಲಿ ಎರಡು ಕಾನೂನು ಇದೆ, ಒಂದು ಮುಸಲ್ಮಾನರಿಗಾಗಿ ಮತ್ತು ಇನ್ನೊಂದು ಹಿಂದೂಗಳಿಗಾಗಿ ಮುಸಲ್ಮಾನರಿಗೆ ಅದು ಬೇಡ ಎನಿಸಿದರೆ ಆಗ ಅವರು ಸಮಾನ ನಾಗರೀಕ ಕಾನೂನಿಗೆ ಒತ್ತಾಯಿಸಬೇಕು. ನಮಾಜ ಪಠಣೆಯಿಂದ ಶೌಕತ್ ಅಲಿ ಇವರಿಗೆ ಎರಡು ಕಾನೂನು ಕಾಣುತ್ತದೆ, ಆದರೆ ಅನೇಕ ಪತ್ನಿಯರು ಮಾಡಿಕೊಳ್ಳುವುದು, ಮಕ್ಕಳನ್ನು ಹುಟ್ಟಿಸುವುದು, ತಲಾಕ್ ಸಮಯದಲ್ಲಿ ಕಾನೂನು ಕಾಣುವುದಿಲ್ಲ ಇದನ್ನು ಅರ್ಥಮಾಡಿಕೊಳ್ಳಿ !-ಸಂಪಾದಕರು) ಹಿಂದೂಗಳು ಕಾವಡ ಯಾತ್ರೆ ನಡೆಸಿ ಸಂಚಾರ ಬಂದಿ ಮಾಡುತ್ತಾರೆ, ಹಾಗಾದರೆ ನಾವು ರಸ್ತೆಯ ಮೇಲೆ ನಮಾಜ ಪಠಣ ಏಕೆ ಮಾಡಬಾರದು ?
ಸಂಪಾದಕೀಯ ನಿಲುವು
|