ವಾರಾಣಸಿಯಲ್ಲಿ ವಾಟ್ಸ್‌ ಆಪ್‌ನ ಮೂಲಕ ಇಸ್ಲಾಂನ್ನು ಸ್ವೀಕರಿಸುವಂತೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ !

* ದೂರಿನ ನಂತರ ಪೊಲೀಸರಿಂದ ತನಿಖೆ ಆರಂಭ !

* ಇಸ್ಲಾಮೀ ದೇಶಗಳಲ್ಲಿ ಹಿಂದೂಗಳು ಎಂದಾದರೂ ಇಂತಹ ಪ್ರಯತ್ನ ಮಾಡಬಲ್ಲರೇ ? ಜಾತ್ಯಾತೀತ ದೇಶದಲ್ಲಿ ಹಿಂದೂಗಳು ಇತರರ ಮತಾಂತರ ಮಾಡುವ ಧೈರ್ಯವನ್ನು ತೋರಿಸುವುದಿಲ್ಲ; ಆದರೆ ಮುಸಲ್ಮಾನ ಮತ್ತು ಕ್ರೈಸ್ತರು ಹಿಂದೂಗಳನ್ನು ತಮ್ಮ ಧರ್ಮಕ್ಕೆ ತರಲು ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ ಹಾಗೂ ಅದಕ್ಕಾಗಿ ಸಾಮ, ದಾಮ, ದಂಡ ಮತ್ತು ಭೇದಗಳನ್ನು ಬಳಸುತ್ತಾರೆ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !

ವಾಟ್ಸ್‌ ಆಪ್‌ನ ಮೂಲಕ ಇಸ್ಲಾಂನ್ನು ಸ್ವೀಕರಿಸುವಂತೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ

ವಾರಾಣಸಿ (ಉತ್ತರಪ್ರದೇಶ) – ಇಲ್ಲಿ ಕೆಲವು ಮುಸಲ್ಮಾನರಿಂದ ವಾಟ್ಸ ಆಪ್‌ನ ಮೂಲಕ ನಾಗರೀಕರಿಗೆ ಮತಾಂತರ ಮಾಡಲು ಕರೆ ನೀಡಲಾಗುತ್ತಿದೆ. ಇದರಲ್ಲಿ ಇಸ್ಲಾಮಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು ಇಸ್ಲಾಂನ್ನು ಸ್ವೀಕರಿಸುವಂತೆ ಕರೆ ನೀಡಲಾಗಿದೆ. ವಾರಾಣಸಿಯಲ್ಲಿ ಅನೇಕರಿಗೆ ತಮ್ಮ ವಾಟ್ಸ್‌ ಆಪ್‌ನಲ್ಲಿ ಇಂತಹ ಸಂದೇಶಗಳು ಬರುತ್ತಿವೆ. ಈ ಪ್ರಕರಣದಲ್ಲಿ ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿನ ಮೃತ್ಯುಂಜಯ ಎಂಬ ಉದ್ಯಮಿ ಯುವಕನು ಪೊಲೀಸರಲ್ಲಿ ದೂರನ್ನು ನೋಂದಾಯಿಸಿದ್ದಾನೆ. ವಾರಾಣಸಿ ಪೊಲೀಸರು ನೀಡಿರುವ ಮಾಹಿತಿಯ ಅನುಸಾರ ಈ ಪ್ರಕರಣವನ್ನು ‘ಸಾಯಬರ ಸೆಲ್‌’ಗೆ ವಹಿಸಲಾಗಿದೆ. ತನಿಖೆಯ ವರದಿ ದೊರೆಯುತ್ತಲೇ ಅಪರಾಧಿಗಳ ಮೇಲೆ ತ್ವರಿತವಾಗಿ ಕಾರ್ಯಾಚರಣೆ ನಡೆಸಲಾಗುವುದು.

(ಸೌಜನ್ಯ: Capital TV Uttar Pradesh)

ಮೃತ್ಯುಂಜಯರವರ ವಾಟ್ಸ್‌ ಆಪ್‌ನಲ್ಲಿ ಕಳುಹಿಸಲಾದ ಸಂದೇಶದಲ್ಲಿ ಹೀಗೆ ಹೇಳಲಾಗಿದೆ, ನಮ್ಮ ‘ಚ್ಯಾಟ್‌’(ಸಂಭಾಷಣೆ)ನಲ್ಲಿ ತಮಗೆ ಸ್ವಾಗತ. ನೀವು ಇಸ್ಲಾಮಿನ ಬಗ್ಗೆ ಮುಕ್ತವಾಗಿ ಏನು ಬೇಕಾದರೂ ಕೇಳಬಹುದು. ನಾನು ನಿಮಗೆ ಇಸ್ಲಾಂ ಸ್ವೀಕರಿಸಲು ಸಹಾಯ ಮಾಡಬಲ್ಲೆನು’. ಇದರೊಂದಿಗೆ ಸಂದೇಶ ಕಳುಹಿಸಿದವನು ಇಸ್ಲಾಮಿನ ಉದಯ ಹಾಗೂ ಇತಿಹಾಸದ ಬಗ್ಗೆ ಮಾಹಿತಿಯನ್ನು ಕಳುಹಿಸಿದ್ದಾನೆ. ಮೃತ್ಯುಂಜಯರವರು ತಮ್ಮ ಪರಿಚಯದ ಇತರರಿಗೂ ಈ ಸಂದೇಶ ಬಂದಿದೆ, ಎಂದು ಹೇಳಿದ್ದಾರೆ.