ನಾಲ್ಕು ಹೆಂಡತಿಯರಿರುವುದು ಅಸ್ವಾಭಾವಿಕ !

ಕೇಂದ್ರ ಸಚಿವ ನಿತಿನ್ ಗಡ್ಕರಿ ಇವರಿಂದ ಸಮಾನ ನಾಗರೀಕ ಕಾನೂನಿಗೆ ಬೆಂಬಲ !

ಭಾಗ್ಯನಗರ (ತೆಲಂಗಾಣ) – ನಿಮಗೆ ಎಲ್ಲಿ ೨ ನಾಗರೀಕ ಕಾನೂನು ಇರುವಂತಹ ಯಾವುದಾದರೂ ಇಸ್ಲಾಮಿ ದೇಶದ ಪರಿಚಯ ಇದೆಯಾ ? ಒಬ್ಬ ಪುರುಷನು ಮಹಿಳೆಯ ಜೊತೆ ವಿವಾಹ ಮಾಡಿಕೊಂಡರೆ ಅದು ಸ್ವಾಭಾವಿಕವಾಗಿದೆ; ಆದರೆ ಒಬ್ಬ ಪುರುಷನು ೪ ಮಹಿಳೆಯರ ಜೊತೆ ವಿವಾಹ ಮಾಡಿಕೊಂಡರೆ ಅದು ಅಸ್ವಾಭಾವಿಕವಾಗಿದೆ. ಮುಸಲ್ಮಾನ ಸಮಾಜದಲ್ಲಿ ಮುಂದುವರೆದವರು ಮತ್ತು ಸುಶಿಕ್ಷಿತ ಜನರು ೪ ವಿವಾಹ ಮಾಡಿಕೊಳ್ಳುವುದಿಲ್ಲ. ಸಮಾನ ನಾಗರೀಕ ಕಾನೂನು ಇದು ಯಾವುದಾದರೂ ಧರ್ಮದ ವಿರೋಧದಲ್ಲಿ ಇಲ್ಲ. ಈ ಕಾನೂನು ದೇಶದ ಪ್ರಗತಿಗಾಗಿ ಇದೆ, ಎಂದು ಹೇಳುತ್ತಾ ಕೇಂದ್ರ ಸಚಿವ ನಿತಿನ ಗಡ್ಕರಿ ಇವರು ಸಮಾನ ನಾಗರೀಕ ಕಾನೂನನ್ನು ಬೆಂಬಲಿಸಿದರು. ಅವರು `ಆಜ ತಕ’ ಈ ಹಿಂದಿ ವಾರ್ತಾ ವಾಹಿನಿಯ ಕಾರ್ಯಕ್ರಮದಲ್ಲಿ `ಕೇಂದ್ರ ಸರಕಾರ ಸಮಾನ ನಾಗರೀಕ ಕಾನೂನು ದೇಶಾದ್ಯಂತ ಜಾರಿ ಮಾಡುವುದಕ್ಕಾಗಿ ಕಾನೂನು ಏಕೆ ತರುತ್ತಿಲ್ಲ ?’ ಎಂಬ ಪ್ರಶ್ನೆ ಗಡ್ಕರಿಯವರಿಗೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸುವಾಗ ಗಡ್ಕರಿಯವರು ಈ ಹೇಳಿಕೆ ನೀಡಿದರು. `ಪ್ರಸ್ತುತ ಈ ವಿಷಯ ಚರ್ಚೆಯಲ್ಲಿದ್ದು ರಾಜ್ಯ ಸರಕಾರಗಳು ಜೊತೆಗೂಡಿದರೆ, ಆಗ ಈ ಕಾನೂನಿನ ಲಾಭ ದೇಶಾದ್ಯಂತದ ಜನರಿಗೆ ಆಗಬಹುದು’, ಎಂದು ಕೂಡ ಗಡ್ಕರಿಯುವರು ಹೇಳಿದರು. ಅವರ ಈ ಹೇಳಿಕೆಯ ನಂತರ ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದ್ದುದ್ದೀನ್ ಓವೈಸಿ ಇವರು ಟೀಕಿಸಿದರು.

ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಿ ತೋರಿಸಿ ! (ಅಂತೆ) – ಅಸದ್ದುದ್ದೀನ್ ಓವೈಸಿ ಇವರು ಗಡ್ಕರಿಯವರಿಗೆ ಸವಾಲು

ಮಹಿಳೆಯರಿಗೆ ಶಬರಿಮಲೈ ದೇವಸ್ಥಾನದಲ್ಲಿ ಪ್ರವೇಶ ನೀಡುವುದಕ್ಕಾಗಿ ನಾನು ನಿತಿನ ಗಡ್ಕರಿ ಇವರಿಗೆ ಸವಾಲು ನೀಡುತ್ತೇನೆ. ನಿಮ್ಮ ಸಂಸ್ಕೃತಿ ಮತ್ತು ನಮ್ಮದು ಸಂಸ್ಕೃತಿ ಅಲ್ಲವೇ ?, ಎಂದು ಅಸದ್ದುದ್ದೀನ್ ಓವೈಸಿ ಇವರು ವಿಚಾರಿಸಿದರು. ಅವರು ತಮ್ಮ ಮಾತನ್ನು ಮುಂದುವರಿಸಿ, ಮುಸಲ್ಮಾನ ಪತ್ನಿ ಇವರು ಕಾನೂನಿನ ಪ್ರಕಾರ ಪತ್ನಿ ಆಗಿದ್ದಾರೆ. ಅವರ ಪಾಲನೆ ಪೋಷಣೆಯ ಖರ್ಚು ಮತ್ತು ಆಸ್ತಿಯಲ್ಲಿ ಪಾಲು ಸಿಗುತ್ತದೆ. (ಹೀಗಿದ್ದರೆ ಶಹಬಾನೊಗೆ ಜೀವನಾಂಶ ನೀಡುವುದಕ್ಕೆ ಮುಸಲ್ಮಾನರು ಏಕೆ ವಿರೋಧಿಸಿದ್ದರು ? ಆಗಿನ ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹೇರಿ ಸಂಸತ್ತಿನಲ್ಲಿ ಕಾನೂನನ್ನು ಬದಲಾಯಿಸಿ ಸರ್ವೋಚ್ಚ ನ್ಯಾಯಾಲಯದ ಆದೇಶ ಏಕೆ ತಿರಸ್ಕರಿಸಿದರು ? ಇದರ ಉತ್ತರ ಓವೈಸಿ ನೀಡುವರೆ ? – ಸಂಪಾದಕರು)

ಸಂಪಾದಕೀಯ ನಿಲುವು

ಓವೈಸಿ ಇವರು ಮೊದಲು ಮುಸಲ್ಮಾನ ಮಹಿಳೆಯರಿಗೆ ಮಸೀದಿಯಲ್ಲಿ ಪ್ರವೇಶ ನೀಡಿ ತೋರಿಸಬೇಕು. ಅವರ ಪಂಥದಲ್ಲಿ ಇರುವ ಬುರ್ಖಾ, ಹಿಜಾಬ್ ಮತ್ತು ನಿಕಾಹ್ ಹಲಾಲ ಈ ಪದ್ಧತಿಗಳನ್ನು ರದ್ದುಪಡಿಸಿ ತೋರಿಸಬೇಕು ಮತ್ತು ಅದರ ನಂತರ ಮಾತನಾಡಬೇಕು !