ಮೆಕ್ಸಿಕೋದ `ಗ್ವಾದಾಲಾಹಾರಾ ಇಂಟರ್ನ್ಯಾಶನಲ್ ಬುಕ್ ಫೇರ್’ನಲ್ಲಿ ಸನಾತನ ಸಂಸ್ಥೆಯ ಗ್ರಂಥಗಳ ಪ್ರದರ್ಶನ !

ಗ್ವಾದಾಲಾಹಾರಾ ಇಂಟರ್ ನ್ಯಾಶನಲ್ ಬುಕ್ ಫೇರ್

ನವದೆಹಲಿ – `ಗ್ವಾದಾಲಾಹಾರಾದಲ್ಲಿ (ಮೆಕ್ಸಿಕೋ) 2021 ರಲ್ಲಿ ನಡೆದ `ಗ್ವಾದಾಲಾಹಾರಾ ಇಂಟರ್ ನ್ಯಾಶನಲ್ ಬುಕ್ ಫೇರ್’ನಲ್ಲಿ (ಗ್ವಾದಾಲಾಹಾರಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ) ಸನಾತನದ ಗ್ರಂಥಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಭಾರತ ಸರಕಾರದ `ರಾಷ್ಟ್ರೀಯ ಪುಸ್ತಕ ನ್ಯಾಸ’ದ ವತಿಯಿಂದ ಈ ಗ್ರಂಥಗಳನ್ನು ಈ ಅಂತಾರಾಷ್ಟ್ರೀಯ ಪುಸ್ತಕ ಮೇಳಕ್ಕೆ ಕಳುಹಿಸಲಾಗಿತ್ತು. ಈ ಮೇಳದಲ್ಲಿ ಭಾರತದಿಂದ ಕಳುಹಿಸಲಾದ 33 ಪ್ರಕಾಶಕರ 160 ಪುಸ್ತಕಗಳು ಇವೆ.

ಈ ಅಂತಾರಾಷ್ಟ್ರೀಯ ಮೇಳದಲ್ಲಿ, ಸನಾತನ ಸಂಸ್ಥೆಯ ‘ವಿಕಾರ-ನಿರ್ಮೂಲನೆಗಾಗಿ ನಾಮಜಪ’ (ಆಂಗ್ಲ), `ತನ್ನಲ್ಲಿರುವ ಸ್ವಭಾವದೋಷಗಳನ್ನು ಹೇಗೆ ಕಂಡುಹಿಡಿಯುವುದು?’ (ಆಂಗ್ಲ), `ಶಾಂತ ನಿದ್ರೆಗಾಗಿ ಏನು ಮಾಡಬೇಕು?’ (ಆಂಗ್ಲ), ಅಧ್ಯಾತ್ಮಿಕ ಪ್ರಾಸ್ತಾವಿಕ ವಿವೇಚನೆ (ಸ್ಪ್ಯಾನಿಶ್) ಹಾಗೂ `ಅಹಂ-ನಿರ್ಮೂಲನೆಗಾಗಿ ಸಾಧನೆ’ (ಆಂಗ್ಲ ಮತ್ತು ಸ್ಪ್ಯಾನಿಶ್) ಈ ಗ್ರಂಥಗಳನ್ನು ಪ್ರದರ್ಶಿಸಲಾಯಿತು. `ರಾಷ್ಟ್ರೀಯ ಪುಸ್ತಕ ನ್ಯಾಸ’ದ ಮಾಹಿತಿಪುಸ್ತಕದಲ್ಲಿ ಮೆಕ್ಸಿಕೋದಲ್ಲಿ ಪ್ರದರ್ಶಿಸಲಾದ ಪುಸ್ತಕಗಳ ಮಾಹಿತಿಯನ್ನು ಕೊಡಲಾಗಿದೆ.