ದಕ್ಷಿಣದ ೩ ರಾಜ್ಯಗಳಲ್ಲಿ `ಮಂಡೌಸ್’ ಬಿರುಗಾಳಿಯ ಸಾಧ್ಯತೆ

ಚೆನ್ನೈ (ತಮಿಳುನಾಡು) – ಹವಾಮಾನ ಇಲಾಖೆಯಿಂದ ದಕ್ಷಿಣದ ೩ ರಾಜ್ಯಗಳಲ್ಲಿ `ಮಂಡೌಸ್’ ಬಿರುಗಾಳಿ ಬರುವ ಎಚ್ಚರಿಕೆ ನೀಡಲಾಗಿದೆ. ಪ್ರಸ್ತುತ ಈ ಬಿರುಗಾಳಿಯಿಂದ ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ಮಳೆ ಬೀಳುತ್ತಿದೆ. ತಮಿಳುನಾಡು, ಪಾಂಡಿಚರಿ ಮತ್ತು ದಕ್ಷಿಣ ಆಂಧ್ರಪ್ರದೇಶದಲ್ಲಿ ಈ ಬಿರುಗಾಳಿ ಬರುವ ಸಾಧ್ಯತೆ ಇದೆ. ಬಿರುಗಾಳಿ `ಮಂಡೌಸ’ ಈ ಹೆಸರು ಸಂಯುಕ್ತ ಅರಬ ಅಮರಾತ ನೀಡಿದೆ. ಅರಬಿ ಭಾಷೆಯಲ್ಲಿ ಇದರ ಅರ್ಥ `ಖಜಿನಾ’ ಎಂದಾಗುತ್ತದೆ.

ಹವಾಮಾನ ಇಲಾಖೆಯ ಹೇಳಿಕೆಯ ಪ್ರಕಾರ, ಈ ಬಿರುಗಾಳಿಯಿಂದ ಪಂಜಾಬ, ಹರಿಯಾಣ, ಉತ್ತರಪ್ರದೇಶ, ದೆಹಲಿ ಮತ್ತು ರಾಜಸ್ಥಾನ ಈ ರಾಜ್ಯಗಳಲ್ಲಿ ೩ ದಿನ ಮೋಡ ಕವಿದ ವಾತಾವರಣ ಮತ್ತು ಮಳೆ ಬೀಳುವ ಸಾಧ್ಯತೆ ಇದೆ. ಇದರಿಂದ ಉತ್ತರ ಭಾರತದಲ್ಲಿ ಚಳಿಯ ಹೊಸ ಹಂತ ಶುರುವಾಗುವ ಸಾಧ್ಯತೆ ಇದೆ.