ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗೀ ಆದಿತ್ಯನಾಥ ಇವರನ್ನ ಅವಾಚ್ಯ ಪದಗಳಲ್ಲಿ ನಿಂದಿಸಿರುವ ಸರಪಂಚ ಸತ್ತಾರನ ಬಂಧನ

ಸತ್ತಾರನ ಅವಾಚ್ಯ ಪದಗಳ ನಿಂದನೆಯಿಂದ ಹಿಂದೂಗಳಲ್ಲಿ ಭಯ !

ಸೀತಾಪುರ (ಉತ್ತರಪ್ರದೇಶ) – ಇಲ್ಲಿಯ ಖಾನಾಪುರ ಸಾದಾತ ಗ್ರಾಮದ ಸರಪಂಚ ಸತ್ತಾರ ಇವನು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಪ್ರಧಾನಿ ನರೇಂದ್ರ ಮೋದಿ ಇವರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವನ ಹೇಳಿಕೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿತ್ತು. ಅಂಕಿತ ಎಂಬ ಯುವಕನು ದೂರು ನೀಡಿದ ನಂತರ ಸತ್ತಾರನನ್ನು ಬಂಧಿಸಲಾಗಿದೆ. ಅಂಕಿತ ಇವನು ದೂರಿನಲ್ಲಿ, ಗ್ರಾಮದಲ್ಲಿ ತನ್ನ ಸ್ನೇಹಿತರ ಜೊತೆಗೆ ಹೋಗಿರುವಾಗ ಸತ್ತಾರ ಅಲ್ಲಿ ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿ ಇವರನ್ನು ನಿಂದಿಸುತ್ತಿರುವುದು ಅವನಿಗೆ ಕಂಡಿತು. ಅವನು ಅವರನ್ನು ತಡೆಯುವ ಪ್ರಯತ್ನ ಮಾಡಿದಾಗ ಅವನಿಗೆ ಕೊಲೆಯ ಬೆದರಿಕೆ ನೀಡಿದನು, ಹಾಗೂ ಹಿಂದೂಗಳ ಬಗ್ಗೆ ಕೂಡ ಆಕ್ಷೇಪಾರ್ಹ ಮಾತನಾಡುತ್ತಿದ್ದನು. ಅದೇ ಸಮಯದಲ್ಲಿ ಸ್ಥಳೀಯ ಹಿಂದೂ ಹೆದರಿದರು ಮತ್ತು ಅವರು ಮನೆ ಮತ್ತು ಅಂಗಡಿಗಳು ಮುಚ್ಚಿದರು. ಸತ್ತಾರ ಇವನ ಹೇಳಿಕೆ ಅಂಕಿತನು ಧ್ವನಿಮುದ್ರಿಸಿ ಪ್ರಸಾರ ಮಾಡಿದನು ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಇಂತಹ ಹೇಡಿ ಹಿಂದೂಗಳ ಏನು ಉಪಯೋಗ ? ಹಿಂದೂಗಳು ಧರ್ಮಾಚರಣೆ ಮಾಡದೇ ಇದ್ದರಿಂದ ಅವರಲ್ಲಿ ಧರ್ಮಾಭಿಮಾನ ಮತ್ತು ಕ್ಷಾತ್ರತೇಜ ನಿರ್ಮಾಣವಾಗುವುದಿಲ್ಲ, ಇದು ವಸ್ತುಸ್ಥಿತಿ ಇದೆ. ಅದಕ್ಕಾಗಿ ಹಿಂದೂಗಳ ಸಂಘಟನೆಯು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಅವರಲ್ಲಿ ಧರ್ಮಾಭಿಮಾನ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ !
  • ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂಗಳಿಗೆ ಭಯ ಅನಿಸುವುದು, ಇದು ಬೇರೆ ಕಡೆಯ ಹಿಂದೂಗಳಿಗೆ ಅಪೇಕ್ಷಿತವಾಗಿಲ್ಲ !