ಮುಸ್ಲೀಂ ರಾಷ್ಟ್ರೀಯ ಮಂಚನ ಅಲೀಗಡ ಜಿಲ್ಲಾ ಸಂಯೋಜಕ ಮೌಲಾನಾ ರಾವ ಮುಶರ‍್ರಫರವರ ನೇರವಾದ ಪ್ರತಿಪಾದನೆ !
(ಮೌಲಾನಾ ಅಂದರೆ ಇಸ್ಲಾಮಿನ ಅಧ್ಯಯನಕಾರರು)
(ಇಮಾಮ ಅಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು)
ಅಲೀಗಡ (ಉತ್ತರಪ್ರದೇಶ) – ಕರ್ಣಾವತಿಯಲ್ಲಿರುವ ಜಾಮಾ ಮಸೀದಿಯ ಇಮಾಮ ಶಬ್ಬೀರ ಅಹಮದ ಸಿದ್ದಿಕಿಯವರು ‘ಚುನಾವಣೆಯಲ್ಲಿ ಮಹಿಳೆಯರನ್ನು ಅಭ್ಯರ್ಥಿಗಳಾಗಿಸಬಾರದು’ ಎಂದು ಕರೆ ನೀಡಿದ್ದರು. ಇದರ ಮೇಲೆ ಮುಸ್ಲೀಂ ರಾಷ್ಟ್ರೀಯ ಮಂಚ್‌ನ ಜಿಲ್ಲಾ ಸಂಯೋಜಕರು ಹಾಗೂ ದೇವಬಂದನ ಮೌಲಾನಾ ರಾವ ಮುಶರ‍್ರಫರವರು ಟೀಕಿಸಿದ್ದಾರೆ. ಅವರು, ಮಸೀದಿಯಲ್ಲಿ ಹೋಗುವ ಮಹಿಳೆಯರು ಇಮಾಮರಿಂದ ಚುಡಾಯಿಸಲ್ಪಡುತ್ತಾರೆ ಅಥವಾ ಅವರ ಅನುಯಾಯಿಗಳಿಂದ ಅವರ ಮೇಲೆ ಬಲಾತ್ಕಾರದ ಪ್ರಯತ್ನಗಳಾಗುತ್ತವೆ. ಆದುದರಿಂದ ಮುಸಲ್ಮಾನ ಮಹಿಳೆಯರು ಮುಸೀದಿಗಳಿಗೆ ಹೋಗುವುದಿಲ್ಲ, ಎಂದು ಹೇಳಿದರು.
Deoband’s Maulana Rao Musharraf lashes out at Shahi Imam of Jama Masjid, says women don’t go to mosques as imams molest themhttps://t.co/QgVp1bQLnD
— OpIndia.com (@OpIndia_com) December 6, 2022
ಮೌಲಾನಾ ರಾವ ಮುಶರ‍್ರಫರವರು ಮಾತನಾಡುತ್ತ, ಮಹಿಳೆಯರಿಗೆ ಮಸೀದಿಗಳಿಗೆ ಹೋಗಲು ನಿರ್ಬಂಧವಿಲ್ಲ. ಮುಸಲ್ಮಾನ ಪುರುಷ ಹಾಗೂ ಮಹಿಳೆಯರು ಹಜ್ ಯಾತ್ರೆ ಮಾಡಬಲ್ಲರು, ಹೀಗಿರುವಾಗ ಮಸೀದಿಗೆ ಹೋಗಲಾರರೇ ? ಕುರಾನ ಮತ್ತು ಹದೀಸ (ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ ಮಹಂಮದ ಪೈಗಂಬರರು ಹೇಗೆ ವರ್ತಿಸಿದರು, ಹೇಗೆ ಮಾತನಾಡಿದರು ಎಂಬುದರ ಸಂಗ್ರಹ)ಗಳಲ್ಲಿ ಮಹಿಳೆಯರನ್ನು ಮಸೀದಿಗೆ ಹೋಗದಂತೆ ತಡೆಯಲಿಲ್ಲ. ಮುಸಲ್ಮಾನ ಮಹಿಳೆಯರೇ ಸ್ವತಃ ಮಸೀದಿಗಳಿಗೆ ಹೋಗುವುದನ್ನು ನಿಲ್ಲಿಸಿದರು, ಏಕೆಂದರೆ ಅಲ್ಲಿ ಇಮಾಮರು ಅವರನ್ನು ಚುಡಾಯಿಸದರೆ ಅವರ ಅನುಯಾಯಿಗಳು ಬಲಾತ್ಕಾರ ಮಾಡಲು ಪ್ರಯತ್ನಿಸುತ್ತಾರೆ. ಇಸ್ಲಾಂ ಮಹಿಳೆಯರಿಗೆ ಸಮಾನತೆಯ ಅಧಿಕಾರವನ್ನು ನೀಡಿರದಿದ್ದರೆ ಬೆನಝೀರ ಭುಟ್ಟೊ ಮತ್ತು ಶೇಖ ಹಸೀನಾರವರು ಪ್ರಧಾನಮಂತ್ರಿಯ ಪದವಿಯನ್ನು ಹೇಗೆ ತಲುಪುತ್ತಿದ್ದರು ? ಇಮಾಮ ಶಬ್ಬೀರರಂತೆ ಮಾತನಾಡುವವರ ಮೇಲೆ ನಿರ್ಬಂಧ ಹೇರಬೇಕು. ಭಾರತದಲ್ಲಿನ ಕಾನೂನು ಮಹಿಳೆಯರಿಗೆ ಸಮಾನತೆಯ ಅಧಿಕಾರವನ್ನು ನೀಡುತ್ತದೆ. ಮತದಾನ ಮಾಡುವುದರೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ವರೆಗಿನ ಅಧಿಕಾರವನ್ನು ನೀಡುತ್ತದೆ, ಎಂದು ಹೇಳಿದರು.
ಸಂಪಾದಕೀಯ ನಿಲುವು
|