ಸುರೇಶನು ವಿಮಾನ ಹಾರಿಸಿದನು, ಮತ್ತು ಅಬ್ದುಲ್ಲನು ವಿಮಾನ ಹಾರಿಸಿದನು, ಇದರಲ್ಲಿನ ಬದಲಾದ  ಅರ್ಥ ಹೇಳುತ್ತಿರುವುದು !

  • ಪಾಟಲಿಪುತ್ರ (ಬಿಹಾರ) ಇಲ್ಲಿಯ ಖಾನ್ ಸರ್ ಇವರ ಹಳೆ ವಿಡಿಯೋದ  ಪ್ರಸಾರ !

  • ಕಾಂಗ್ರೆಸ್ ನಿಂದ ಖಾನ್ ಸರರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ

ಪಾಟಲಿಪುತ್ರ (ಬಿಹಾರ) – ಇಲ್ಲಿಯ ಮನೆ ಪಾಠ ನಡೆಸುವ ಪ್ರಸಿದ್ಧ ಶಿಕ್ಷಕ ಖಾನ್ ಸರ ಇವರ ಒಂದು ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಅವರು ವಿದ್ಯಾರ್ಥಿಗಳಿಗೆ ವ್ಯಾಕರಣವನ್ನು ಕಲಿಸುವಾಗ ದ್ವಂದ್ವ ಸಮಾಸ (ಎರಡು ಪದಗಳು ಸಮಾನ ಮಹತ್ವದ್ದಾಗಿರುತ್ತವೆ ಅದಕ್ಕೆ ದ್ವಂದ್ವ ಸಮಾಸ ಎನ್ನುತ್ತಾರೆ.) ಇದರ ಮಾಹಿತಿ ನೀಡುತ್ತಿದ್ದಾರೆ. ಇದರಲ್ಲಿ ಅವರು ಉದಾಹರಣೆ ನೀಡುವಾಗ ಸುರೇಶ ಮತ್ತು ಅಬ್ದುಲ್ ಈ ಹೆಸರುಗಳನ್ನು ಒಂದು ವಾಕ್ಯದಲ್ಲಿ ಉಪಯೋಗಿಸಿದಾಗ ಅದರ ಅರ್ಥ ಹೇಗೆ ಬದಲಾಗುತ್ತದೆ ಇದನ್ನು ಹೇಳಲು ಪ್ರಯತ್ನಿಸಿದ್ದಾರೆ; ಆದರೆ ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಾ ಖಾನ್ ಸರ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

೧. ಖಾನ್ ಸರರು ಉದಾಹರಣೆ ನೀಡುವಾಗ ಸುರೇಶನು ವಿಮಾನ ಹಾರಿಸಿದನು. ಈ ವಾಕ್ಯ ಹೇಳಿದರೆ ಮತ್ತು ನಂತರ ಅದೇ ವಾಕ್ಯದಲ್ಲಿ ಹೆಸರು ಬದಲಾಯಿಸಿ ಅಬ್ದುಲ್ಲನು ವಿಮಾನ ಹಾರಿಸಿದನು ಎಂದು ಹೇಳಿದರು. ಇದರಲ್ಲಿ ಅಬ್ದುಲ್ಲನು ವಿಮಾನ ಹಾರಿಸಿದನು ಎಂದರೆ ಉದ್ವಸ್ಥಗೊಳಿಸಿದನು ಎಂದು ಅವರು ಹೇಳಿದರು.

೨. ಕಾಂಗ್ರೆಸ್ಸಿನ ನಾಯಕೀ ಸುಪ್ರಿಯಾ ಶ್ರೀನೆತ ಇವರು ಈ ವಾಕ್ಯಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾ ಖಾನ್ ಸರ ಇವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಹಾಗೂ ಈ ವಿಡಿಯೋದಲ್ಲಿ ಯಾವ ಜನರು ನಗುತ್ತಿದ್ದಾರೆ ಅವರು ಯೋಚನೆ ಮಾಡುವುದು ಅವಶ್ಯಕವಾಗಿದೆ ಎಂದು ಕೂಡ ಅವರು ಹೇಳಿದರು.

೩. ಇನ್ನೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಖಾನ್ ಸರ್ ಇವರನ್ನು  ಸಮರ್ಥನೆ ಕೂಡ ಮಾಡಿದ್ದಾರೆ. ಖಾನ್ ಸರ್ ಇವರ ಹೇಳಿಕೆ ವ್ಯಂಗ್ಯವಾಗಿದ್ದು ಈ ವಿಡಿಯೋದ ಕೇವಲ ಕೆಲವು ಭಾಗ ಪ್ರಸಾರ ಮಾಡಲಾಗುತ್ತಿದೆ ಎಂಬುದು ಅವರ ಹೇಳಿಕೆಯಾಗಿದೆ.

ಸಂಪಾದಕೀಯ ನಿಲುವು

ಖಾನ್ ಸರರು ಏನು ಹೇಳಲು ಪ್ರಯತ್ನಿಸಿದ್ದಾರೆ, ಎಂಬ ಬಗ್ಗೆ ಕಾಂಗ್ರೆಸ್ ಯಾವತ್ತೂ ಮಾತನಾಡುವುದಿಲ್ಲ. ಆದರೆ ಹಿಂದೂಗಳನ್ನು ‘ಕೇಸರಿ ಭಯೋತ್ಪಾದಕರು’ ಎನ್ನುವುದರಲ್ಲಿ ಮಾತ್ರ ಕಾಂಗ್ರೆಸ್ ಎಲ್ಲರಿಗಿಂತ ಮುಂದೆ ಇರುತ್ತದೆ !