ಉತ್ತರಾಖಂಡದ ನೇಪಾಳ ಗಡಿಯಲ್ಲಿ ನೇಪಾಳಿ ಜನರಿಂದ ಭಾರತೀಯ ಕಾರ್ಮಿಕರ ಮೇಲೆ ಕಲ್ಲು ತೂರಾಟ

ಡೆಹ್ರಾಡೂನ (ಉತ್ತರಖಂಡ) – ಉತ್ತರಖಂಡ ಮತ್ತು ನೇಪಾಳದ ಗಡಿಯಲ್ಲಿರುವ ಕಾಲಿ ನದಿಯ ಮೇಲೆ ಸೇತುವೆ ಕಟ್ಟುವ ಕಾಮಗಾರಿಗೆ ನೇಪಾಳಿ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಅವರು ಸೇತುವೆ ಕಟ್ಟುವ ಭಾರತೀಯ ಕಾರ್ಮಿಕರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಇದರಲ್ಲಿ ಅನೇಕ ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಸಮಯದಲ್ಲಿ ನೇಪಾಳಿ ಪೊಲೀಸರು ಲಾಟಿಚಾರ್ಜ್ ನಡೆಸಿ ಅವರನ್ನು ಓಡಿಸಿದ್ದಾರೆ ಹಾಗೂ ಭಾರತದ ಕಡೆಯಿಂದ ಶಸ್ತ್ರ ಸಜ್ಜಿತ ಭದ್ರತಾ ಪಡೆಯ ಸೈನಿಕರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪ್ರಸ್ತುತ ಅಲ್ಲಿ ಬಿಗುವಿನ ವಾತಾವರಣವಿದೆ.