ಪ್ಲಾಸ್ಟಿಕ್ ಕಸ ನೀಡಿ ಮತ್ತು ಉಚಿತ ಚಹಾ ಕುಡಿಯಿರಿ !

  • ಉದಯಪುರ (ರಾಜಸ್ಥಾನ) ಇಲ್ಲಿಯ ಚಹಾದಂಗಡಿ ನಡೆಸುವ ಭಗ್ಗಾಸಿಂಹ ಇವರ ಆವಾಹನೆ

  • ಪರಿಸರ ಸ್ವಚ್ಛವಾಗಿರಲು ಕೈಗೆತ್ತಿಕೊಂಡಿರುವ ಹೊಸ ಉಪಕ್ರಮ !

ಉದಯಪುರ (ರಾಜಸ್ಥಾನ) – `ಪ್ಲಾಸ್ಟಿಕ್ ಕಸ ನೀಡಿ ಮತ್ತು ಉಚಿತ ಚಹಾ ಕುಡಿಯಿರಿ’ ಈ ರೀತಿ ಇಲ್ಲಿಯ ಒಂದು ಚಹಾದ ಅಂಗಡಿ ನಡೆಸುವ ಭಗ್ಗಾಸಿಂಹ ಇವರು ಜನರಿಗೆ ಕರೆ ನೀಡಿದ್ದಾರೆ.

ಪ್ಲಾಸ್ಟಿಕ್ ಕಸದ ಸಮಸ್ಯೆ ದೂರವಾಗಬೇಕು ಹಾಗೂ ಪರಿಸರ ಸ್ವಚ್ಛವಾಗಬೇಕು ಇದಕ್ಕಾಗಿ ಕೇಲವಾಡ ಇಲ್ಲಿಯ ಭಗ್ಗಾಸಿಂಹ ಈ ಯುವಕನು ಈ ಅಭಿಯಾನ ಕೈಗೆತ್ತಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ಅಂಗಡಿಯ ಛಾಯಾಚಿತ್ರ ದೊಡ್ಡ ಪ್ರಮಾಣದಲ್ಲಿ ಪ್ರಸಾರಗೊಂಡಿದೆ. ಸ್ಥಳೀಯ ನಾಗರೀಕರು ಅವರ ಪರಿಸರದಲ್ಲಿನ ಕಸ ಸೇರಿಸಿ ಭಗ್ಗಾಸಿಂಹ ಇವರ ಅಂಗಡಿಯಲ್ಲಿ ಕೊಡುತ್ತಿರುವುದು ಕಾಣುತ್ತಿದೆ. `ಸ್ವಚ್ಛ ಭಾರತ’ ಇದು ಕೇಂದ್ರ ಸರಕಾರದ ಅಭಿಯಾನ ನಡೆಸುವ ಅಧಿಕಾರಿಗಳು ಕೂಡ ಈ ಉಪಕ್ರಮವನ್ನು ಗುರುತಿಸಿದ್ದಾರೆ.

ಸಂಪಾದಕೀಯ ನಿಲುವು

ಭಗ್ಗಾಸಿಂಹ ಇವರಂತಹ ಪ್ರಜ್ಞಾವಂತ ನಾಗರೀಕ ನಾಯಕತ್ವ ವಹಿಸಿಕೊಂದಿರುವ ಇವರು ಹೊಗಳಿಕೆಗೆ ಪಾತ್ರರಾಗಿದ್ದಾರೆ, ಆದರೆ ಇದರ ಜೊತೆಗೆ ಜನರ ಮನಸ್ಸಿನ ಮೇಲೆ ಸ್ವಚ್ಛತೆಯ ಸಂಸ್ಕಾರ ಮಾಡಲು ಸಾಧ್ಯವಾಗದೇ ಇರುವ ಇಲ್ಲಿಯವರೆಗೆ ಎಲ್ಲಾ ಪಕ್ಷದ ಸರಕಾರಕ್ಕೆ ಇದು ಲಚ್ಚಸ್ಪದವಾಗಿದೆ, ಇದು ಕೂಡ ಅಷ್ಟೇ ಸತ್ಯ !