ವಾರಣಾಸಿ(ಉತ್ತರಪ್ರದೇಶ)- ಇಲ್ಲಿಯ ಬನಾರಸ ಹಿಂದೂ ವಿಶ್ವವಿದ್ಯಾಲಯವು ನಡೆಸಿರುವ ಸಂಶೋಧನೆಯಲ್ಲಿ ಕಾಶಿ ಮತ್ತು ತಮಿಳುನಾಡಿನಲ್ಲಿನ ಜನರ ಡಿ.ಎನ್.ಎ .ಒಂದೇ ಆಗಿದೆ ಹಾಗೂ ಈ ಎಲ್ಲರ ಪೂರ್ವಜರು ಒಂದೇ ಆಗಿದ್ದರು. ಎಂದು ಬೆಳಕಿಗೆ ಬಂದಿದೆ. ಈ ಸಂಶೋಧನೆಯಲ್ಲಿ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಮಹಾವಿದ್ಯಾಲಯಗಳು ಇಲ್ಲಿಯ ೭೫ ಸಂಶೋಧಕರು ಕೆಲಸ ಮಾಡುತ್ತಿದ್ದಾರೆ. ಭಾಗ್ಯನಗರದಲ್ಲಿನ ಅನ್ವಿಕ ಜೀವ ವಿಜ್ಞಾನ ಕೇಂದ್ರ ಮತ್ತು ಬನಾರಸ ಹಿಂದೂ ವಿಶ್ವವಿದ್ಯಾಲಯವು ಇದರ ನೇತೃತ್ವ ವಹಿಸಿಕೊಂಡಿದೆ.
(ಸೌಜನ್ಯ : StudyIQ IAS ಹಿಂದಿ)
ಈ ಸಂದರ್ಭದಲ್ಲಿ ಸಂಶೋಧನೆ ಮುಖ್ಯಸ್ಥರಾಗಿರುವ ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಜಂತು ವಿಜ್ಞಾನ ಇಲಾಖೆಯ ಪ್ರಾಧ್ಯಾಪಕ ಜ್ಞಾನೇಶ್ವರ ಚೌಬೆ ಇವರು, ಈ ಸಂಶೋಧನೆ ೨೦೦೬ ರಿಂದ ನಡೆಯುತ್ತದೆ. ಇಲ್ಲಿಯವರೆಗೆ ೩೫ ಸಾವಿರ ಮಾದರಿಗಳನ್ನು ಸಂಗ್ರಹಿಸಲಾಗಿದ್ದೂ ೧ ಲಕ್ಷ ಮಾದರಿ ಸಂಗ್ರಹಿಸಲಾಗುವುದು ಮತ್ತು ಇದರಿಂದ `ಭಾರತದಲ್ಲಿನ ವಿವಿಧ ಜಾತಿ ಮತ್ತು ಜನಾಂಗದಲ್ಲಿ ಎಷ್ಟು ಸಾಮ್ಯತ್ವ ಇದೆ’, ಇದನ್ನು ಕಂಡು ಹಿಡಿಯಲಾಗುವುದು. ಇದರ ಮೂಲಕ ಕಾಶಿಯಲ್ಲಿನ ೧೦೦ ಹಾಗೂ ತಮಿಳುನಾಡಿನಲ್ಲಿನ ೨೦೦ ಜನರ ಮಾದರಿ ಪಡೆಯಲಾಗಿತ್ತು. ಅದರ ಸಂಶೋಧನೆಯಿಂದ, ಇಬ್ಬರ ಡಿ.ಎನ್.ಎ. ಒಂದೇ ಆಗಿದೆ ಹಾಗೂ ಇಂತಹ ಸಂಶೋಧನೆಯಿಂದ ಅಪರಾಧಿಗಳನ್ನು ಬಂಧಿಸುವಲ್ಲಿ ಕೂಡ ಲಾಭವಾಗುವದೆಂದು ಎಂಬುದು ಗಮನಕ್ಕೆ ಬಂತು ಎಂದು ಹೇಳಿದರು.
ಸಂಪಾದಕೀಯ ನಿಲುವುತಮ್ಮನ್ನು `ದ್ರಾವಿಡ’ ಎಂದು ತಿಳಿದು ದೇಶದಲ್ಲಿನ ಇತರ ಹಿಂಂದೂಗಳಿಂದ ತಮ್ಮನ್ನು ಬೇರೆ ಎಂದು ತಿಳಿದುಕೊಳ್ಳುವ ತಮಿಳುನಾಡಿನಲ್ಲಿನ ಹಿಂದುದ್ರೋಹಿಗಳಿಗೆ ಕಪಾಳ ಮೋಕ್ಷ ! |