ಸಮರಾಭ್ಯಾಸದೊಂದಿಗೆ ನಿಮಗೆ ಏನೂ ಸಂಬಂಧವಿಲ್ಲ- ಅಮೇರಿಕಾದಿಂದ ಚೀನಾಕ್ಕೆ ಕಠಿಣ ಸಂದೇಶ

ಉತ್ತರಾಖಂಡದಲ್ಲಿ ಭಾರತ ಮತ್ತು ಅಮೇರಿಕಾ ನಡುವಿನ ಸಮರಾಭ್ಯಾಸಕ್ಕೆ ಚೀನಾದಿಂದ ಆಕ್ಷೇಪ.

ನವದೆಹಲಿ– ಉತ್ತರಾಖಂಡದಲ್ಲಿ ಔಲಿಯ ಗಡಿಯಲ್ಲಿ ಭಾರತ ಮತ್ತು ಅಮೇರಿಕಾ ದೇಶಗಳ ಸೈನ್ಯದಲ್ಲಿ ಸಮರಾಭ್ಯಾಸ ಪ್ರಾರಂಭವಾಗಿದೆ. ಇದಕ್ಕೆ ಚೀನಾ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಇದಕ್ಕೆ ಭಾರತ ಮತ್ತು ಅಮೇರಿಕಾ ಚೀನಾಕ್ಕೆ ಕಠಿಣ ಸಂದೇಶವನ್ನು  ನೀಡಿದೆ. ಅಮೇರಿಕಾವು ಇದರ ಬಗ್ಗೆ ಇದು ಭಾರತ ಮತ್ತು ಅಮೇರಿಕಾ ನಡುವಿನ ಆಂತರಿಕ ವಿಷಯವಾಗಿದೆ. ಇದರಲ್ಲಿ ನಿಮಗೆ ಏನೂ ಸಂಬಂಧವಿಲ್ಲ’, ಎಂದು ಹೇಳಿದೆ. ಇದರ ಹಿಂದಿನ ದಿನ ಭಾರತವು `ನಾವು ಯಾರೊಂದಿಗೆ ಸಮರಾಭ್ಯಾಸ ಮಾಡಬೇಕೆಂದು ನಮಗೆ ಮೂರನೇ ದೇಶದವರ ಅಭಿಪ್ರಾಯ ಪಡೆಯುವ ಆವಶ್ಯಕತೆಯಿಲ್ಲ’ ಎನ್ನುವ ಶಬ್ದದಲ್ಲಿ ಚೀನಾಕ್ಕೆ ಸಂದೇಶ ರವಾನಿಸಿದೆ.

೧. ಚೀನಾದ  ವಿದೇಶ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ ಮಾತನಾಡುತ್ತಾ, ಚೀನಾದ ಗಡಿಯಲ್ಲಿ ಅಮೇರಿಕಾ ಮತ್ತು ಭಾರತದ ಮಧ್ಯೆ ಸಮರಾಭ್ಯಾಸ 1993 ಮತ್ತು 1996 ರ ಭಾರತ ಮತ್ತು ಚೀನಾ ದೇಶಗಳ ನಡುವಿನ ಒಪ್ಪಂದಕ್ಕೆ ವಿರುದ್ಧವಾಗಿದೆ. (ಭಾರತದ ಭೂಮಿಯಲ್ಲಿ ಮೇಲಿಂದ ಮೇಲೆ ನುಸುಳುವಿಕೆಯು ಯಾವ ಒಪ್ಪಂದದಲ್ಲಿದೆ?- ಸಂಪಾದಕರು) ಇದರಿಂದ ಭಾರತ ಮತ್ತು ಚೀನಾದ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಿದ್ದಾರೆ.

೨. ಇದಕ್ಕೆ ಪ್ರತ್ಯುತ್ತರ ನೀಡುವಾಗ ಭಾರತದ ವಿದೇಶ ಸಚಿವಾಲಯದ ವಕ್ತಾರರು ಅರಿಂದಮ ಬಾಗಚಿ ಇವರು ಮಾತನಾಡುತ್ತಾ, ಅಮೇರಿಕೆಯೊಂದಿಗಿನ ಸಮರಾಭ್ಯಾಸದಲ್ಲಿ 1993 ಮತ್ತು 1996ರ ಒಪ್ಪಂದಕ್ಕೆ ಯಾವುದೇ ಸಂಬಂಧವಿಲ್ಲ. ಚೀನಾ ಈ ಒಪ್ಪಂದದ ಬಗ್ಗೆ ತಾನು ಸ್ವತಃ ಮಾಡುತ್ತಿರುವ ಉಲ್ಲಂಘನೆಯ ಕಡೆಗೆ ಗಮನ ಹರಿಸಬೇಕು.

೩. ಭಾರತ ಮತ್ತು ಅಮೇರಿಕಾ ನಡುವೆ ಈ ಸೈನ್ಯ ಸಮರಾಭ್ಯಾಸ 15 ನವೆಂಬರದಿಂದ ಪ್ರಾರಂಭವಾಗಿದೆ. ಈ ಸಮರಾಭ್ಯಾಸ ಭಾರತದಲ್ಲಿ ಒಂದು ವರ್ಷ ಮತ್ತು ಅಮೇರಿಕೆಯಲ್ಲಿ ಒಂದು ವರ್ಷ ನಡೆಯುತ್ತದೆ. ಕಳೆದ ವರ್ಷ ಅಮೇರಿಕೆಯ ಅಲಾಸ್ಕಾದಲ್ಲಿ ಈ ಸಮರಾಭ್ಯಾಸ  ನಡೆದಿತ್ತು.