ನವದೆಹಲಿ – ಇಲ್ಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ (ಜೆ.ಎನ್.ಯು.ದ) ಅನೇಕ ಕಟ್ಟಡಗಳ ಗೋಡೆಗಳ ಮತ್ತು ಪರಿಸರದಲ್ಲಿ 1 ಡಿಸೆಂಬರ ಸಾಯಂಕಾಲ ಬ್ರಾಹ್ಮಣ ಹಾಗೆಯೇ ವೈಶ್ಯ ಇವರ ವಿರುದ್ಧ ಘೋಷಣೆಯನ್ನು ಬರೆಯಲಾಗಿದೆ. ಹಾಗೆಯೇ `ಸ್ಕೂಲ ಆಫ್ ಇಂಟರನ್ಯಾಶನಲ್ ಸ್ಟಡೀಸ್’ ನ ಕಟ್ಟಡವನ್ನು ಧ್ವಂಸಗೊಳಿಸಲಾಯಿತು. ಈ ಕೃತ್ಯದ ಹಿಂದೆ ಸಾಮ್ಯವಾದಿಗಳು ಇರುವರೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು(ಅಭಾವಿಪ) ಆರೋಪಿಸಿದೆ.
JNU campus walls defaced with anti-Brahmin slogans, probe orderedhttps://t.co/ifEWD1pvzi pic.twitter.com/mCN68D8qz0
— Asianet Newsable (@AsianetNewsEN) December 2, 2022
ಗೋಡೆಯ ಮೇಲಿನ ಘೋಷಣೆಯಲ್ಲಿ `ಬ್ರಾಹ್ಮಣ ಪರಿಸರವನ್ನು ಬಿಡಿರಿ, ರಕ್ತಪಾತವಾಗುವುದು’, `ಬ್ರಾಹ್ಮಣ ಭಾರತ ಬಿಟ್ಟು ಹೋಗಿ – ಬನಿಯಾ ನಾವು ಸೇಡು ತೀರಿಸುಕೊಳ್ಳಲು ನಿಮ್ಮ ಬಳಿ ಬರುತ್ತಿದ್ದೇವೆ’ ಎಂದು ಬರೆದಿತ್ತು. ಕೆಲವು ಪ್ರಾಧ್ಯಾಪಕರ ಕೊಠಡಿಯ ಬಾಗಿಲಿನ ಮೇಲೆ `ವಿಶ್ವವಿದ್ಯಾಲಯಕ್ಕೆ ಬರುವುದಕ್ಕಿಂತ ಸಂಘದ ಶಾಖೆಗೆ ಹೋಗಿರಿ’ ಎಂದು ಬರೆಯಲಾಗಿದೆ. ಇದರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿದೆ.
ಸಂಪಾದಕೀಯ ನಿಲುವುಜೆ.ಎನ್.ಯೂ. ವಿಶ್ವವಿದ್ಯಾಲಯ ಹಿಂದೂದ್ವೇಷಕ್ಕಾಗಿ ಕುಪ್ರಸಿದ್ಧವಾಗಿದೆ. ಇಷ್ಟೇ ಅಲ್ಲ, ಅಲ್ಲಿಂದ ದೇಶವಿರೋಧಿ ಕೃತ್ಯವನ್ನು ನಡೆಸಲಾಗುತ್ತಿದೆಯೆಂದೂ ಆರೋಪಗಳಿವೆ. ಸಾಮ್ಯವಾದಿ ವಿಚಾರಗಳ ವಿದ್ಯಾರ್ಥಿಗಳು ಈ ರೀತಿಯ ಘೋಷಣೆಗಳನ್ನು ಬರೆದು ಸಮಾಜದಲ್ಲಿ ದ್ವೇಷವನ್ನು ಹರಡುವ ಕೆಲಸವನ್ನು ಮಾಡಿದ್ದಾರೆ. ಸರಕಾರದಿಂದ ಕೋಟಿಗಟ್ಟಲೇ ಅನುದಾನ ಪಡೆಯುವ ಈ ವಿಶ್ವವಿದ್ಯಾಲಯಕ್ಕೆ ಈಗ ಬೀಗ ಹಾಕುವುದೇ ಆವಶ್ಯಕವೇ ಆಗಿದೆ. ಕೇಂದ್ರ ಸರಕಾರವು ಈಗ ಅಂತಹ ಧೈರ್ಯವನ್ನು ತೋರಿಸುವ ಸಮಯ ಬಂದಿದೆ ! |