ಹಿಂದೂ ಎಂದು ಸುಳ್ಳು ಗುರುತಿನ ಚೀಟಿ ತೋರಿಸಿ ಅಂಗಡಿಗಳನ್ನು ಹಾಕಲಾಗಿತ್ತು !
ಕೊಡಗು – ಇಲ್ಲಿಯ ಪೊನ್ನಂಪೇಟೆಯಲ್ಲಿನ ಹರಿಹರ ಗ್ರಾಮದಲ್ಲಿನ ಸುಬ್ರಹ್ಮಣ್ಯ ದೇವಸ್ಥಾನದ ಪರಿಸರದಲ್ಲಿ ಅನೇಕ ಮುಸಲ್ಮಾನರು `ಹಿಂದೂ’ ಎಂದು ಸುಳ್ಳು ಗುರುತಿನ ಚೀಟಿ ತೋರಿಸಿ ಅವರ ಅಂಗಡಿಗಳನ್ನು ಹಾಕಿದ್ದರು. ಈಗ ಅವು ತೆರವುಗೊಳಿಸಲಾಗಿದೆ. ಈ ಮೊದಲು ರಾಜ್ಯದಲ್ಲಿನ ಕೆಲವು ದೇವಸ್ಥಾನದ ಸ್ಥಳಗಳಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಅನುಮತಿ ನಿರಾಕರಿಸಲಾಗಿತ್ತು.
Kodagu: Muslim traders evicted after found using Hindu ID cards #newskarnataka #kodagu @durgavahiniorg @VHPDigital @DurgaVahiniOrg #jhariharasubrahmanyatemple #ponnampete #LatestNews
To Read More:https://t.co/uQxUaINobE pic.twitter.com/U9zk0XkQCU
— News Karnataka (@Newskarnataka) November 30, 2022
೧. ದುರ್ಗಾ ವಾಹಿನಿಯ ಜಿಲ್ಲಾ ಸಮನ್ವಯಕಿಯಾಗಿರುವ ಪ್ರಾಧ್ಯಾಪಿಕ ಅಂಬಿಕ ಇವರು, ಈಗ ಮುಸಲ್ಮಾನ ವ್ಯಾಪಾರಿಗಳಿಗೆ ದೇವಸ್ಥಾನದ ಹತ್ತಿರ ವ್ಯಾಪಾರ ಮಾಡಲು ಅನುಮತಿ ನೀಡಲಾಗುವುದಿಲ್ಲ. ಇಲ್ಲಿ ವ್ಯಾಪಾರ ಮಾಡಲು ಅವರು ಗುರುತು ಮರೆ ಮಾಚುವ ಅವಶ್ಯಕತೆ ಇಲ್ಲ. `ಅವರು ತಮ್ಮ ನಿಜವಾದ ಪರಿಚಯ ತೋರಿಸಿ ಇಲ್ಲಿ ವ್ಯಾಪಾರ ಮಾಡಬಹುದು’, ನಾವು ಈ ಮೊದಲು ಹೇಳಿದರು ಕೂಡ ಅವರು `ಹಿಂದೂ’ ಎಂದು ಸುಳ್ಳು ಗುರುತಿನ ಚೀಟಿ ತೋರಿಸಿ ಇಲ್ಲಿ ಅಂಗಡಿಗಳನ್ನು ಹಾಕಿದ್ದರು. ನಾವು ಹೇಳಿದರು ಕೂಡ ಹೀಗೆ ಅವರು ಮಾಡಿರುವುದರಿಂದ ನಾವು ಅವರಿಗೆ ಇಲ್ಲಿ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
೨. ಕೊಡಗು ಜಿಲ್ಲೆಯಲ್ಲಿನ ಮುಸಲ್ಮಾನರಿಗೆ ದೇವಸ್ಥಾನದ ಪರಿಸರದಲ್ಲಿ ಅಂಗಡಿ ಹಾಕುವ ಅನುಮತಿ ನೀಡುವ ವಿರೋಧದಲ್ಲಿ ಕೆಲವು ತಿಂಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಲ್ಲಿ ಆಯೋಜಿಸಲಾದ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಇಲ್ಲಿಯ ಮುಸಲ್ಮಾನ ವ್ಯಾಪಾರಿಗಳಿಗೆ ವಿರೋಧವಾಗುತ್ತಿತ್ತು.
೩. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಈ ಸಂದರ್ಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಮನವಿ ನೀಡಿ ಮುಸಲ್ಮಾನ ವ್ಯಾಪಾರಿಗಳಿಗೆ ದೇವಸ್ಥಾನದ ಪರಿಸರದಲ್ಲಿ ನಿಷೇಧ ಹೇರಲು ಒತ್ತಾಯಿಸಿದರು.
೪. ಈ ಹಿಂದೆ ರಾಜ್ಯ ಸರಕಾರದ ಕಾನೂನು ಸಚಿವ ಜಿ.ಸಿ. ಮಾಧುಸ್ವಾಮಿ ಇವರು ಈ ಸಂದರ್ಭದಲ್ಲಿ `ಸರಕಾರಿ ನಿಯಮದ ಪ್ರಕಾರ ದೇವಸ್ಥಾನ ಆಡಳಿತ ವ್ಯವಸ್ಥಾಪಕರು ವ್ಯಾಪಾರಿಗಳ ಮೇಲೆ ನಿಷೇಧ ಹೇರಬಹುದು’, ಎಂದು ಹೇಳಿದ್ದರು. ಕರ್ನಾಟಕದ ವಿಧಾನಸಭೆಯಲ್ಲಿ ಕೂಡ ಈ ಪ್ರಕರಣದ ಬಗ್ಗೆ ಚರ್ಚಿಸಲಾಗಿತ್ತು.
ಸಂಪಾದಕೀಯ ನಿಲುವು
|