ಭಾಗ್ಯನಗರ (ತೆಲಂಗಾಣ) – ಪ್ರಸಿದ್ಧ ದಕ್ಷಿಣದ ನಾಯಕ ನಟ ವಿಜಯ್ ದೇವರಕೊಂಡ ಇವರನ್ನು ನವೆಂಬರ್ ೩೦ ರಂದು ಬೆಳಿಗ್ಗೆ ೯ ಗಂಟೆ ಈಡಿಯಿಂದ ವಿಚಾರಣೆಗೆ ಒಳಪಡಿಸಲಾಯಿತು. `ಇತ್ತಿಚೆಗೆ ಪ್ರದರ್ಶನಗೊಂಡಿರುವ ಅವರ ಚಲನಚಿತ್ರ `ಲಾಯಗರ್’ ನಿರ್ಮಾಣಕ್ಕೆ ಹಣ ಎಲ್ಲಿಂದ ಬಂದಿದೆ ? ಈ ವಿಷಯವಾಗಿ ಈ ವಿಚಾರಣೆ ನಡೆಸಲಾಗಿದೆ. ಈ ವಿಚಾರಣೆಯ ನಂತರ ದೇವರಕೊಂಡ, `ಜನಪ್ರಿಯತೆ ಗಳಿಸಿದರೆ ಕೆಲವು ದುಷ್ಪರಿಣಾಮ ಮತ್ತು ಸಮಸ್ಯೆಗಳು ಕೂಡ ಇರುತ್ತದೆ. ಯಾವಾಗ ನನ್ನನ್ನು ಈಡಿಯಿಂದ ವಿಚಾರಣೆಗಾಗಿ ಕರೆಸಲಾಯಿತು ಆಗ ನಾನು ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಎಂದು ಹೇಳಿದರು.
#VijayDevarakonda appeared before the Enforcement Directorate in connection with the investigation relating to sourcing of funds for his pan-India film ‘#Liger’https://t.co/t47XznG4cm
— News18.com (@news18dotcom) November 30, 2022
ಈ ಹಿಂದೆ ನವೆಂಬರ್ ೧೭ ರಂದು ಚಲನಚಿತ್ರ ನಿರ್ಮಾಪಕೀ ಚಾರ್ಮಿ ಕೌರ್ ಮತ್ತು ನಿರ್ದೇಶಕ ಪೂರಿ ಜಗನ್ನಾಥ್ ಇವರನ್ನು ಕೂಡ ವಿದೇಶಿ ಕರೆನ್ಸಿ ವ್ಯವಸ್ಥಾಪಕ ಕಾನೂನಿನ (ಫೆಮಾ) ಉಲ್ಲಂಘನೆ ಮಾಡಿರುವ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿತ್ತು.