ವಿಡಿಯೋ ಪ್ರಸಾರ ತಡೆಯುವುದಕ್ಕೆ ಉಚ್ಚ ನ್ಯಾಯಾಲಯದ ಆದೇಶ
ನವದೆಹಲಿ – ದೆಹಲಿಯಲ್ಲಿನ ರಾಉಸ ಅವ್ಹೆನು ನ್ಯಾಯಾಲಯದಲ್ಲಿನ ಓರ್ವ ನ್ಯಾಯಾಧೀಶರ ವಿಡಿಯೋವೊಂದು ಪ್ರಸಾರಗೊಂಡಿದೆ. ಇದರಲ್ಲಿ ಈ ನ್ಯಾಯಾಧೀಶರು ಅವರ ಕೆಬಿನ್ ನಲ್ಲಿ ಒಬ್ಬ ಮಹಿಳೆಯ ಜೊತೆ ಅಕ್ಷೆಪಾರ್ಹ ಸ್ಥಿತಿಯಲ್ಲಿ ಕಾಣುತ್ತಿದ್ದಾರೆ. ಈ ಮಹಿಳೆ ಅವರ ಕಾರ್ಮಿಕರಲ್ಲಿ ಒಬ್ಬರಾಗಿರುವುದೆಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ದೆಹಲಿ ಉಚ್ಚ ನ್ಯಾಯಾಲಯವು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿನ ಪ್ರಸಾರ ತಡೆಯಲು ಆದೇಶ ನೀಡಿದೆ. ಇನ್ನೊಂದು ಕಡೆ ಈ ನ್ಯಾಯಾಧೀಶರನ್ನು ಅಮಾನತುಗೊಳಿಸಲಾಗಿದೆ ಮತ್ತು ಮಹಿಳೆಯ ಮೇಲೆ ಕೂಡ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದ ವಿಚಾರಣೆಗಾಗಿ ಸಮಿತಿ ಸ್ಥಾಪಿಸಲಾಗುವುದು.
Block sexually explicit clip of ‘judge’: Delhi HC https://t.co/2WY7E8Jh5D
— TOI Cities (@TOICitiesNews) December 1, 2022
೧. ಈ ಆದೇಶದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯಶವಂತ ವರ್ಮ ಇವರು, ಈ ವಿಡಿಯೋದಿಂದ ವ್ಯಕ್ತಿಯ ಗೌಪ್ಯನೀಯತೆಯ ಅಧಿಕಾರದ ಎಂದು ತುಂಬಿಸಲಾಗದ ನಷ್ಟವಾಗುವ ಸಾಧ್ಯತೆ ಇದೆ. ಆದ್ದರಿಂದ ಇದರ ಪ್ರಸಾರ ತಡೆಯಬೇಕು ಎಂದು ಹೇಳಿದರು.
೨. ವಿಡಿಯೋ ಪ್ರಸಾರವಾಗುವುದನ್ನು ತಡೆಯಲು ಮಹಿಳೆಯಿಂದ ಮನವಿ ಮಾಡಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಈ ವಿಡಿಯೋ ನಕಲಿಯಾಗಿರುವುದೆಂದು ಮಹಿಳೆಯ ಹೇಳಿಕೆ ಆಗಿದೆ. ಈ ವಿಡಿಯೋ ಮಾರ್ಚ್ ೨೦೨೨ ರಲ್ಲಿಯದೆಂದು ತಿಳಿದು ಬಂದಿದೆ. ಕೆಬಿನ್ ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಇದರ ಚಿತ್ರಿಕರಣ ಆಗಿದೆ.