ಆಧಾರಕಾರ್ಡನಂತೆಯೇ ಜನನ ಪ್ರಮಾಣಪತ್ರವೂ ಅನಿವಾರ್ಯವಾಗಲಿದೆ

ನವದೆಹಲಿ – ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ, ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರಿಯಲ್ಲಿ ನೇಮಕ, ವಾಹನ ಪರವಾನಿಗೆ ಮತ್ತು ಪಾಸಪೋರ್ಟ ಪಡೆಯಲು ಮುಂತಾದ ಮಹತ್ವದ ಕೆಲಸಗಳಿಗಾಗಿ ಜನನ ಪ್ರಮಾಣಪತ್ರ ಅನಿವಾರ್ಯ ಕಾಗದ ಪತ್ರಗಳನ್ನು ಸಿದ್ಧಪಡಿಸುವ ಕೆಲಸ ಈಗ ಪ್ರಾರಂಭವಾಗಿದೆ. ಈ ವಿಷಯದಲ್ಲಿ ಹೊಸ ವಿಧೇಯಕ ಮಸೂದೆಯನುಸಾರ 1969ರ ಜನನ ಮತ್ತು ಮರಣದ ನೊಂದಣಿ ಕಾನೂನಿನಲ್ಲಿ ಸುಧಾರಣೆ ಮಾಡುವ ಸಾಧ್ಯತೆಯಿದೆ. ಈ ಮಸೂದೆ ಸಂಸತ್ತಿನಲ್ಲಿ ಡಿಸೆಂಬರ 7 ರುಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ.