ಇಂದೂರ (ಮಧ್ಯಪ್ರದೇಶ) ದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆಯುವ ಇಬ್ಬರು ಬಾಂಗ್ಲಾದೇಶಿ ಮುಸಲ್ಮಾನರ ಬಂಧನ !

ಇಂದೂರ (ಮಧ್ಯಪ್ರದೇಶ) – ಇಲ್ಲಿಯ ಸಿರಪೂರ ಕೆರೆಯ ಪ್ರದೇಶದಲ್ಲಿ 2 ಅಪ್ರಾಪ್ತ ಹಿಂದೂ ಬಾಲಕಿಯರೊಂದಿಗೆ ಅಶ್ಲೀಲ ಕೃತ್ಯವನ್ನು ಮಾಡುವ ಇಬ್ಬರು ಬಾಂಗ್ಲಾದೇಶಿ ಯುವಕರನ್ನು ಬಂಧಿಸಲಾಯಿತು. ಈ ಬಾಲಕಿಯರನ್ನು ಬಾಂಗ್ಲಾದೇಶಿ ಯುವಕರು ಪ್ರೀತಿಯ ಬಲೆಯಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಬಜರಂಗ ದಳದ ಕಾರ್ಯಕರ್ತರು ಈ ಯುವಕರನ್ನು ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು. ಇವರಿಬ್ಬರೂ ಇಂದೂರಿನಲ್ಲಿ ನೌಕರಿ ಮಾಡುತ್ತಿದ್ದರು.

೧. ಬಜರಂಗ ದಳದ ವತಿಯಿಂದ ನಗರದಲ್ಲಿ `ಲವ್ ಜಿಹಾದ’ ನಂತಹ ಪ್ರಕಾರವನ್ನು ನಿಲ್ಲಿಸಲು ಹುಡುಕಾಟ ನಡೆಸಲಾಗುತ್ತಿದೆ. ಅದಕ್ಕಾಗಿ ಬಜರಂಗ ದಳದ ಗುಂಪು ಸ್ಥಳೀಯ ಕೆಫೆ, ಉಪಹಾರಗೃಹಗಳು, ಉದ್ಯಾನವನ ಮತ್ತು ಗೆಳೆಯ ಗೆಳತಿಯರನ್ನು ಭೇಟಿಯಾಗುವ ಸ್ಥಳಗಳಲ್ಲಿ ಗಮನವಿಡುತ್ತಿದ್ದಾರೆ. ಇದರಲ್ಲಿ ಒಂದು ಗುಂಪು ಸಿರಪೂರ ಕೆರೆಯ ಬಳಿಗೆ ಹೋಗಿ ಪರಿಶೀಲನೆ ನಡೆಸಿತು. ಆಗ ಈ ಕೆರೆಯ ಮೇಲೆ ಇಬ್ಬರು ಯುವಕರು ಇಬ್ಬರು ಬಾಲಕಿಯರೊಂದಿಗೆ ಅಶ್ಲೀಲ ಕೃತ್ಯವನ್ನು ನಡೆಸುತ್ತಿರುವುದು ಕಂಡು ಬಂದಿತು.

೨. ಈ ಯುವಕ ಮತ್ತು ಬಾಲಕಿಯರ ಬಳಿಕ ಬಜರಂಗ ದಳದ ಗುಂಪಿನವರು ಗುರುತಿನ ಚೀಟಿಯನ್ನು ಕೇಳಿದರು. ಕಠಿಣವಾಗಿ ಅವರ ವಿಚಾರಣೆ ನಡೆಸಿದಾಗ ಈ ಯುವಕರು ಮುಸಲ್ಮಾನ ಮತ್ತು ಬಾಲಕಿಯರು ಹಿಂದೂ ಇರುವರೆಂದು ತಿಳಿಯಿತು. ತದನಂತರ ಬಜರಂಗ ದಳದ ಕಾರ್ಯಕರ್ತರು ತಕ್ಷಣವೇ ಪೊಲೀಸರನ್ನು ಕರೆಸಿದರು ಮತ್ತು ಯುವಕರನ್ನು ಅವರ ವಶಕ್ಕೆ ಒಪ್ಪಿಸಿದರು.

೩. ಸಂಬಂಧಿಸಿದ ಬಾಲಕಿಯರನ್ನು ವಿಚಾರಿಸಿದಾಗ ಈ ಯುವಕರು ಅವರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸುವ ಪ್ರಯತ್ನದಲ್ಲಿದ್ದರು. ಮದುವೆಗಾಗಿ ಈ ಯುವಕರು ಬಾಲಕಿಯರ ಮೇಲೆ ಒತ್ತಡ ಹಾಕುತ್ತಿದ್ದರು ಎನ್ನುವ ಮಾಹಿತಿ ಬಹಿರಂಗವಾಯಿತು. ಇವರಿಬ್ಬರೂ ಯಾವ ಸ್ಥಳದಲ್ಲಿ ನೌಕರಿ ಮಾಡುತ್ತಿದ್ದರೋ, ಅಲ್ಲಿಯೇ ಈ ಹಿಂದೂ ಬಾಲಕಿಯರು ಕೆಲಸ ಮಾಡುತ್ತಿದ್ದರು.

೪. ಯುವಕರ ವಿಚಾರಣೆ ನಡೆಸಿದಾಗ ಅವರು ಬಾಂಗ್ಲಾದೇಶಿ ಮುಸಲ್ಮಾನರಾಗಿದ್ದಾರೆಂದು ಬಯಲಾಯಿತು. ಈ ಯುವಕ ಬಾಂಗ್ಲಾದೇಶದಿಂದ ಇಂದೂರಿಗೆ ಹೇಗೆ ತಲುಪಿದರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

೫. ಈ ಸಂಪೂರ್ಣ ಪ್ರಕರಣದಲ್ಲಿ ಬಜರಂಗ ದಳದವರು ಆಕ್ರಮಣಕಾರಿ ಕ್ರಮವನ್ನು ಕೈಕೊಳ್ಳಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಕಂಡು ಬಂದರೆ, ಸಂಬಂಧಿಸಿದ ಯುವಕರಿಗೆ ಬುದ್ಧಿ ಕಲಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶಿ ನುಸುಳುಖೋರರ ಮೇಲೆ ಯಾವಾಗ ಕ್ರಮ ಕೈಗೊಳ್ಳಲಾಗುವುದು ?